ರಾಜ್ಯ

ಧಾರವಾಡ: ಕಲ್ಲು ಕ್ವಾರಿಯಲ್ಲಿ ರೀಲ್ಸ್ ಮಾಡುವಾಗ ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವು

10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ, ಸಾಮಾಜಿಕ ಜಾಲತಾಣಗಳಿಗೆ ರೀಲ್ಸ್‌ಗಳನ್ನು ಶೂಟ್ ಮಾಡುತ್ತಿದ್ದ ವೇಳೆ ನೀರು ತುಂಬಿದ್ದ ಕಲ್ಲು ಕ್ವಾರಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಮೃತರನ್ನು ಮಾಳಮಡ್ಡಿ ನಿವಾಸಿ ಶ್ರೇಯಸ್ ನವಲೆ (16) ಮತ್ತು ಸಪ್ತಾಪುರದ ದ್ರುವ ದಾಸರ್ (16) ಎಂದು ಗುರುತಿಸಲಾಗಿದೆ.

ಧಾರವಾಡ: ಕಲ್ಲು ಕ್ವಾರಿಯಲ್ಲಿ ರೀಲ್ಸ್ ಮಾಡುವಾಗ ನೀರಿನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವು
ಕಲ್ಲು ಕ್ವಾರಿ (ಪ್ರಾತಿನಿಧಿಕ ಚಿತ್ರ)
Published On :

ಧಾರವಾಡ: 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ, ಸಾಮಾಜಿಕ ಜಾಲತಾಣಗಳಿಗೆ ರೀಲ್ಸ್‌ಗಳನ್ನು ಶೂಟ್ ಮಾಡುತ್ತಿದ್ದ ವೇಳೆ ನೀರು ತುಂಬಿದ್ದ ಕಲ್ಲು ಕ್ವಾರಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಮೃತರನ್ನು ಮಾಳಮಡ್ಡಿ ನಿವಾಸಿ ಶ್ರೇಯಸ್ ನವಲೆ (16) ಮತ್ತು ಸಪ್ತಾಪುರದ ದ್ರುವ ದಾಸರ್ (16) ಎಂದು ಗುರುತಿಸಲಾಗಿದೆ.

ಮನ್ಸೂರ್ ರಸ್ತೆಯಲ್ಲಿದ್ದ ಕಲ್ಲು ಕ್ವಾರಿಗೆ ಆರು ಜನರ ತಂಡ ಹೋಗಿತ್ತು. ಸ್ನೇಹಿತರ ಮನೆಗೆ ಭೇಟಿ ನೀಡುವುದಾಗಿ ಹುಡುಗರು ತಮ್ಮ ಪೋಷಕರಿಗೆ ಹೇಳಿದ್ದರು. ಆದರೆ, ವಿಧಿ ಅವರಿಗಾಗಿ ವಿಭಿನ್ನ ಯೋಜನೆಗಳನ್ನು ಹೊಂದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶ್ರೇಯಸ್ ಮತ್ತು ದ್ರುವ ನೀರಿನೊಳಗೆ ಪೋಸ್ ನೀಡುತ್ತಿದ್ದರೆ, ಅವರ ಸ್ನೇಹಿತರು ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದರು. ಆದರೆ, ಇಬ್ಬರೂ ನೀರಿನೊಳಗಿನ ಹಳ್ಳದಲ್ಲಿ ಸಿಲುಕಿಕೊಂಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ನೀಡಲು ಉಳಿದ ಹುಡುಗರು ಪೊಲೀಸ್ ಠಾಣೆಗೆ ಧಾವಿಸಿದರು.

ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರೇಯಸ್‌ನ ಮೃತದೇಹವನ್ನು ಸೋಮವಾರ ಸಂಜೆ ಮತ್ತು ದ್ರುವ ಅವರ ಮೃತದೇಹವನ್ನು ಮಂಗಳವಾರ ಮಧ್ಯಾಹ್ನ ಹೊರತೆಗೆಯಲಾಯಿತು. ಬಾಲಕರ ಸಾವು ಕುಟುಂಬವನ್ನು ದಿಗ್ಭ್ರಮೆಗೊಳಿಸಿದೆ ಎಂದು ಶ್ರೇಯಸ್‌ನ ಸಂಬಂಧಿಕರೊಬ್ಬರು ಹೇಳಿದ್ದಾರೆ.

ಧಾರವಾಡ ಎಸ್ಪಿ ಗೋಪಾಲ್ ಬ್ಯಾಕೋಡ್ ಮಾತನಾಡಿ, ನಿವೇಶನದ ಮಾಲೀಕರೊಂದಿಗೆ ಸಭೆ ನಡೆಸಿ ನಿರ್ಬಂಧಿತ ಫಲಕಗಳನ್ನು ಅಳವಡಿಸುವಂತೆ ಕೋರಲಾಗುವುದು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.