ಉತ್ತರ ಕನ್ನಡ: ಅಡುಗೆ ಮನೆಯೊಳಗೆ ಬುಸ್..ಬುಸ್: 12 ಅಡಿ ಉದ್ದದ ಕಾಳಿಂಗ ಸರ್ಪ ಕಂಡು ಹೌಹಾರಿದ ಕುಟುಂಬ!
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಯಳವಳ್ಳಿಯಲ್ಲಿ 12 ಅಡಿಗೂ ಹೆಚ್ಚು ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಲಾಗಿದೆ.

ಯಳವಳ್ಳಿ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಯಳವಳ್ಳಿಯಲ್ಲಿ 12 ಅಡಿಗೂ ಹೆಚ್ಚು ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹೊರಡ್ಡೆ ಸಮೀಪದ ಯಳವಳ್ಳಿ ಗ್ರಾಮದ ಗಣೇಶ್ ಭಟ್ ಎಂಬುವವರು ಚಹಾ ತಯಾರಿಸಲು ಅಡುಗೆ ಮನೆಗೆ ಹೋಗಿದ್ದರು. ಈ ವೇಳೆ ಒಲೆಯ ಸುತ್ತಲೂ ಏನೋ ಸುತ್ತಿಕೊಂಡಿರುವುದು ಕಂಡು ಬಂದಿದೆ.
ಅರಣ್ಯ ಪ್ರದೇಶದಲ್ಲಿ ಮನೆ ಇರುವುದರಿಂದ ವನ್ಯಜೀವಿಗಳು ಮನೆಗಳಿಗೆ ನುಗ್ಗುವುದು ಸಾಮಾನ್ಯ ಸಾಮಾನ್ಯವಾಗಿತ್ತು. ಆರಂಭದಲ್ಲಿ ಗಣೇಶ್ ಅವರು ರ್ಯಾಟ್ ಸ್ನೇಕ್ ಎಂದು ಶಂಕಿಸಿದ್ದರು. ಇದರಂತೆ ಅಲ್ಲಾಡಿಸಿ ಓಡಿಸಲು ಯತ್ನಿಸಿದ್ದಾರೆ. ಈ ವೇಳೆ ಕಾಳಿಂಗ ಸರ್ಪ ಹೆಡೆ ಎತ್ತಿ ದೊಡ್ಡ ರೀತಿಯಲ್ಲಿ ಬುಸ್ ಗುಡಲು ಆರಂಭಿಸಿದೆ. ಬಳಿಕ ಗಣೇಶ್ ಅವರಿಗೆ ಇದು ಸಾಮಾನ್ಯ ಹಾವಲ್ಲ ಎಂದು ತಿಳಿದು, ಕೂಡಲೇ ಉರಗ ರಕ್ಷಕ ಪವನ್ ನಾಯ್ಕ್ ಅವರಿಗೆ ಕರೆ ಮಾಡಿದ್ದಾರೆ.
ಪವನ್ ಸ್ಥಳಕ್ಕೆ ಧಾವಿಸಿ ಒಂದು ಗಂಟೆಯಲ್ಲಿ ಹಾವನ್ನು ರಕ್ಷಣೆ ಮಾಡಿದ್ದಾರೆ. ನಂತರ ಸಮೀಪದ ಅರಣ್ಯಕ್ಕೆ ಅದನ್ನು ಬಿಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



