ರಾಜ್ಯ

ಭಾರೀ ಮಳೆಗೆ ಸಕಲೇಶಪುರದಲ್ಲಿ ಭೂಕುಸಿತ: ಕೊಚ್ಚಿ ಹೋದ ರಸ್ತೆ

ಭಾರೀ ಮಳೆಗೆ ರಸ್ತೆ ಕೊಚ್ಚಿಹೋಗಿ 80 ಅಡಿ ಆಳಕ್ಕೆ ಕುಸಿದಿದೆ. ಅಕ್ಕಪಕ್ಕದ ಐದು ಗ್ರಾಮಗಳು ಹೋಬಳಿ ಮತ್ತು ತಾಲೂಕು ಕೇಂದ್ರಗಳಿಗೆ ಸಂಪರ್ಕ ಕಳೆದುಕೊಂಡಿವೆ. ಮಲ್ಲೇಗದ್ದೆ, ಕಾಡುಮನೆ ಮತ್ತು ಹಾರ್ಲೆ ಜನರು ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಭಾರೀ ಮಳೆಗೆ ಸಕಲೇಶಪುರದಲ್ಲಿ ಭೂಕುಸಿತ: ಕೊಚ್ಚಿ ಹೋದ ರಸ್ತೆ
ಸಕಲೇಶದಲ್ಲಿ ಕೊಚ್ಚಿ ಹೋದ ರಸ್ತೆ
Published On :

ಹಾಸನ: ಮಂಗಳವಾರ ಮುಂಜಾನೆ ಸುರಿದ ಮಳೆ ಮತ್ತು ಭೂಕುಸಿತದಿಂದ ಸಕಲೇಶಪುರ ತಾಲೂಕಿನ ಕುಂಬರಾಡಿ ಮತ್ತು ಹಾರ್ಲೆ ಎಸ್ಟೇಟ್ ನಡುವಿನ ರಸ್ತೆ ಕೊಚ್ಚಿ ಹೋಗಿದೆ.

ಅವೈಜ್ಞಾನಿಕವಾಗಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯಿಂದಾಗಿ ಸಕಲೇಶಪುರ ತಾಲೂಕಿನ ಕೆಲವೆಡೆ ಭೂಕುಸಿತ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಭಾರೀ ಮಳೆಗೆ ರಸ್ತೆ ಕೊಚ್ಚಿಹೋಗಿ 80 ಅಡಿ ಆಳಕ್ಕೆ ಕುಸಿದಿದೆ. ಅಕ್ಕಪಕ್ಕದ ಐದು ಗ್ರಾಮಗಳು ಹೋಬಳಿ ಮತ್ತು ತಾಲೂಕು ಕೇಂದ್ರಗಳಿಗೆ ಸಂಪರ್ಕ ಕಳೆದುಕೊಂಡಿವೆ. ಮಲ್ಲೇಗದ್ದೆ, ಕಾಡುಮನೆ ಮತ್ತು ಹಾರ್ಲೆ ಜನರು ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭೂಕುಸಿತಕ್ಕೆ ಹೆದರಿ ಕಾಫಿ ಎಸ್ಟೇಟ್‌ಗಳಿಗೆ ಭೇಟಿ ನೀಡುವುದನ್ನು ಗ್ರಾಮಸ್ಥರು ನಿಲ್ಲಿಸಿದ್ದಾರೆ. ಎತ್ತಿನಹೊಳೆ ಕಾಲುವೆ ಕಾಮಗಾರಿಯು ಭೂಕುಸಿತ ಸ್ಥಳದಿಂದ ಕೇವಲ 200 ಮೀಟರ್ ದೂರದಲ್ಲಿದೆ.

ಘಟನಾ ಸ್ಥಳಕ್ಕೆ ಕಂದಾಯ, ಪಿಡಬ್ಲ್ಯುಡಿ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದರು. ಕಳೆದ 24 ಗಂಟೆಗಳಿಂದ ಬೆಂಗಳೂರು ಮಂಗಳೂರು ಎನ್‌ಎಚ್ 75 ಮತ್ತು ಸಕಲೇಶಪುರ ತಾಲೂಕಿನ ವಿವಿಧ ಭಾಗಗಳಲ್ಲಿ ಭೂಕುಸಿತ ಮುಂದುವರಿದಿದೆ ಎಂದು ಇಲ್ಲಿಗೆ ತಲುಪಿದ ವರದಿಗಳು ತಿಳಿಸಿವೆ. ಹಾಸನ ಹಾಸನ ಜಿಲ್ಲೆಯ ಹಲವೆಡೆ ಸೋಮವಾರ ಸಂಜೆಯಿಂದಲೇ ಭಾರೀ‌ ಮಳೆಯಾಗುತ್ತಿದೆ. ಆದರೂ ಜಿಲ್ಲಾಡಳಿತ ಶಾಲೆಗಳಿಗೆ ರಜೆ ನೀಡಿಲ್ಲ. ಸಕಲೇಶಪುರ ತಾಲ್ಲೂಕಿನ ಹಲವು ಕಡೆ ಸಂಪರ್ಕ ಕಡಿತಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.