ರಾಜ್ಯ

ಆರು ಮಕ್ಕಳನ್ನು ಸಾಕಿ ಬೆಳೆಸಿದ ದಂಪತಿಗೆ ಕೊಡವ ಸಮಾಜದಿಂದ ಸನ್ಮಾನ!

ಮಡಿಕೇರಿಯಲ್ಲಿ ಆರು ಮಕ್ಕಳನ್ನು ಸಾಕಿ ಬೆಳೆಸಿದ ದಂಪತಿಗೆ ಸನ್ಮಾನಿಸಲಾಯಿತು. ಮಡಿಕೇರಿ ಕೊಡವ ಸಮಾಜದ ವತಿಯಿಂದ ಸನ್ಮಾನ ಸಮಾರಂಭ ನಡೆಯಿತು.

ಆರು ಮಕ್ಕಳನ್ನು ಸಾಕಿ ಬೆಳೆಸಿದ ದಂಪತಿಗೆ ಕೊಡವ ಸಮಾಜದಿಂದ ಸನ್ಮಾನ!
ಬೆಳ್ಳಿಯಪ್ಪ ಮತ್ತು ಬೋಜಮ್ಮ ದಂಪತಿಗೆ ಸನ್ಮಾನ — TNIE
Published On :

ಮಡಿಕೇರಿ: ಮಡಿಕೇರಿಯಲ್ಲಿ ಆರು ಮಕ್ಕಳನ್ನು ಸಾಕಿ ಬೆಳೆಸಿದ ದಂಪತಿಗೆ ಸನ್ಮಾನಿಸಲಾಯಿತು. ಮಡಿಕೇರಿ ಕೊಡವ ಸಮಾಜದ ವತಿಯಿಂದ ಸನ್ಮಾನ ಸಮಾರಂಭ ನಡೆಯಿತು.

ಕೊಡವ ಸಮುದಾಯವು ಆಧುನೀಕರಣದ ತೀವ್ರತೆಗೆ ಸಿಲುಕಿ ನಲುಗುತ್ತಿರುವ ಒಂದು ಸಣ್ಣ ಬುಡಕಟ್ಟು ಸಮುದಾಯವಾಗಿದೆ. ಕಳೆದ ಹಲವಾರು ವರ್ಷಗಳಿಂದ ಸಮುದಾಯದ ಜನಸಂಖ್ಯೆಯು ವಿವಿಧ ಕಾರಣಗಳಿಂದ ಕಡಿಮೆಯಾಗಿದೆ. ಆಧುನೀಕರಣ ಮತ್ತು ವಿಭಕ್ತ ಕುಟುಂಬವು ಅದರ ಜನಸಂಖ್ಯೆಯ ಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತದೆ.

ಇಂತಹ ಸನ್ನಿವೇಶದಲ್ಲಿ ಬುಡಕಟ್ಟು ಸಮುದಾಯದ ಜನಸಂಖ್ಯೆಯ ಬೆಳವಣಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ ಮಡಿಕೇರಿ ಕೊಡವ ಸಮಾಜವು ಮರಗೋಡು ಗ್ರಾಮದ ತಾಟಪಂಡ ಬೆಳ್ಳಿಯಪ್ಪ ಮತ್ತು ಬೋಜಮ್ಮ ಅಕಾ ಶೀಲಾ ದಂಪತಿಯನ್ನು ಇದೇ ಮೊದಲ ಬಾರಿಗೆ ಸನ್ಮಾನಿಸಲಾಯಿತು. ಐದು ಗಂಡು ಮತ್ತು ಒಬ್ಬ ಮಗಳು ಸೇರಿ ಆರು ಮಕ್ಕಳನ್ನು ಬೆಳೆಸಿದ್ದಕ್ಕಾಗಿ ದಂಪತಿಗಳನ್ನು ಗೌರವಿಸಲಾಯಿತು. ಅಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲು ದಂಪತಿಗೆ 25,000 ರೂಪಾಯಿ ನಗದು ಬಹುಮಾನ ವಿತರಿಸಲಾಯಿತು.

ಇಂತಹ ಕಾರ್ಯಕ್ರಮದ ಮೂಲಕ ಸಮುದಾಯದ ಜನಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಒತ್ತು ನೀಡಲಾಗುತ್ತಿದೆ ಎಂದು ಸಮಾಜದ ಅಧ್ಯಕ್ಷ ಎಂ.ಪಿ.ಮುತ್ತಪ್ಪ ಹೇಳಿದರು. ಇದೇ ವೇಳೆ ಸಮಾಜದ ಮತ್ತೊಬ್ಬ ಸದಸ್ಯ ಎಂ ಸುನೀಲ್ ಮಂದಪ್ಪ ಶೀಲಾ ದಂಪತಿಗೆ 5000 ರೂಪಾಯಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.