ರಾಜ್ಯ

ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 90 ಕೋಟಿ ರೂ ಅಕ್ರಮ ವರ್ಗಾವಣೆ; ಈ ಹಣದಿಂದಲೇ ಮದ್ಯ, ಲ್ಯಾಂಬೋರ್ಗಿನಿ ಖರೀದಿ: ಇಡಿ

ಈ ಹಣವನ್ನು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಗೆ ಮದ್ಯ ಖರೀದಿಗಾಗಿ ಹಾಗೂ ದುಬಾರಿ ಬೆಲೆಯ ವಾಹನಗಳ ಖರೀದಿಗೆ ಬಳಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಬುಧವಾರ ಆರೋಪಿಸಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 90 ಕೋಟಿ ರೂ ಅಕ್ರಮ ವರ್ಗಾವಣೆ; ಈ ಹಣದಿಂದಲೇ ಮದ್ಯ, ಲ್ಯಾಂಬೋರ್ಗಿನಿ ಖರೀದಿ: ಇಡಿ
ನಾಗೇಂದ್ರ — PTI
Published On :

ನವದೆಹಲಿ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಸುಮಾರು 90 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದ್ದು, ಈ ಹಣವನ್ನು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಗೆ ಮದ್ಯ ಖರೀದಿಗಾಗಿ ಹಾಗೂ ದುಬಾರಿ ಬೆಲೆಯ ವಾಹನಗಳ ಖರೀದಿಗೆ ಬಳಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಬುಧವಾರ ಆರೋಪಿಸಿದೆ.

ಈ ಪ್ರಕರಣದಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ಬಿ ನಾಗೇಂದ್ರ ಅವರನ್ನು ಬಂಧಿಸಿರುವ ಇಡಿ, ಈ ಸಂಬಧ ಇತ್ತೀಚೆಗೆ ಪ್ರಕಟಣೆ ನೀಡಿದ್ದು, ಶಾಸಕರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳು "ಹಣ ವರ್ಗಾವಣೆ ಮತ್ತು ನಗದು ನಿರ್ವಹಣೆಯಲ್ಲಿ ಭಾಗಿಯಾಗಿದ್ದಾರೆ" ಎಂದು ಆರೋಪಿಸಿದ್ದಾರೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ(ವಾಲ್ಮೀಕಿ ನಿಗಮದ ನಿಧಿಯಿಂದ) 18 ನಕಲಿ ಖಾತೆಗಳಿಗೆ ಸುಮಾರು 90 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿರುವುದಾಗಿ ಇಡಿ ಹೇಳಿದೆ.

"ಲೋಕಸಭೆ ಚುನಾವಣೆಗೂ ಮುನ್ನ ಗಮನಾರ್ಹ ಪ್ರಮಾಣದಲ್ಲಿ ಮದ್ಯವನ್ನು ಸಂಗ್ರಹಿಸಲು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಗಣನೀಯ ಪ್ರಮಾಣದಲ್ಲಿ ಬಳಸಲಾಗಿದೆ.

"ಹೆಚ್ಚುವರಿಯಾಗಿ, ಹಗರಣದಿಂದ ಬಂದ ಆದಾಯವನ್ನು ಬಳಸಿಕೊಂಡು ಲಂಬೋರ್ಗಿನಿ ಸೇರಿದಂತೆ ದುಬಾರಿ ಬೆಲೆಯ ವಾಹನಗಳನ್ನು ಖರೀದಿಸಲಾಗಿದೆ" ಎಂದು ಇಡಿ ತಿಳಿಸಿದೆ.

ಈ ಪ್ರಕರಣದ ಆರೋಪಿಗಳಲ್ಲೊಬ್ಬನಾದ ಸತ್ಯನಾರಾಯಣ ವರ್ಮಾ ಎಂಬಾತ, ಹಗರಣದಲ್ಲಿ ಬಂದಿದ್ದ ದುಡ್ಡಿನಿಂದ ಎರಡು ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾಗಿ ತಿಳಿದುಬಂದಿದೆ. ಹೈದರಾಬಾದ್ ನಲ್ಲಿರುವ ಸೆಕೆಂಡ್ ಹ್ಯಾಂಡ್ ಕಾರುಗಳ ಶೋರೂಂನಲ್ಲಿ ಎರಡು ಲ್ಯಾಂಬೋರ್ಗಿನಿ ಕಾರುಗಳನ್ನು ಖರೀದಿಸಿರುವುದು ಬೆಳಕಿಗೆ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.