ಹಾವೇರಿ: ಮರಕ್ಕೆ ಕಾರು ಡಿಕ್ಕಿ, ನಾಲ್ವರು ಯುವಕರು ಸಾವು; ಮೂವರಿಗೆ ಗಾಯ
ಮೃತರನ್ನು ಸವಣೂರು ತಾಲ್ಲೂಕಿನ ಬೇವಿನಹಳ್ಳಿಯ ನೀಲಪ್ಪ ಮೂಲಿಮನಿ(23), ಸಂದೀಪ ಕೋಟಿ (18), ಶಿವನಗೌಡರ್ ಯಲ್ಲನಗೌಡರ್(20) ಮತ್ತು ಕಲ್ಮೇಶ ಮನೋಜಿ(26) ಎಂದು ಗುರುತಿಸಲಾಗಿದೆ.

ಹಾವೇರಿ: ಹಾವೇರಿ ಜಿಲ್ಲೆಯ ಶಿಗ್ಗಾಂವ್ ಪಟ್ಟಣದ ಸಮೀಪ ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಸವಣೂರು ತಾಲ್ಲೂಕಿನ ಬೇವಿನಹಳ್ಳಿಯ ನೀಲಪ್ಪ ಮೂಲಿಮನಿ(23), ಸಂದೀಪ ಕೋಟಿ (18), ಶಿವನಗೌಡರ್ ಯಲ್ಲನಗೌಡರ್(20) ಮತ್ತು ಕಲ್ಮೇಶ ಮನೋಜಿ(26) ಎಂದು ಗುರುತಿಸಲಾಗಿದೆ.
ಬೇವಿನಹಳ್ಳಿಯ ಏಳು ಯುವಕರು ಶನಿವಾರ ಬೆಳಗ್ಗೆ ತಮ್ಮೂರಿನಿಂದ ಕೆಲಸ ನಿಮಿತ್ತ ಬೆಳಗಾವಿ ಜಿಲ್ಲೆಯ ಖಾನಾಪುರ ಸಮೀಪದ ನಂದಗಡಕ್ಕೆ ಹೊರಟಿದ್ದರು. ಈ ವೇಳೆ ಕಾರು ಚಾಲಕನ ನಿಯಂತ್ರ ತಪ್ಪಿ ಹನುಮರಹಳ್ಳಿಯ ಬಳಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ. ನಂತರ, ಕಾರು ಉರುಳಿ ರಸ್ತೆ ಪಕ್ಕದ ತಗ್ಗಿನಲ್ಲಿ ಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ.
ಭೀಕರ ಅಪಘಾತದಲ್ಲಿ ನೀಲಪ್ಪ ಮತ್ತು ಸಂದೀಪ್ ಸ್ಥಳದಲ್ಲೇ ಮೃತಪಟ್ಟರೆ, ಶಿವನಗೌಡ ಮತ್ತು ಕಲ್ಮೇಶ್ ಶಿಗ್ಗಾಂವ ತಾಲೂಕು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ಸಂಬಂಧ ಶಿಗ್ಗಾಂವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



