ಸಮುದಾಯಕ್ಕೆ 2ಎ ಸ್ಥಾನಮಾನಕ್ಕೆ ಒತ್ತಾಯ: ಶಾಸಕರ ಮನೆಗಳಲ್ಲಿ ಪಂಚಮಸಾಲಿ ಶ್ರೀಗಳ ಸಭೆ
ಪಂಚಮಸಾಲಿ ಮಠಾಧೀಶ ಜಯ ಮೃತ್ಯುಂಜಯ ಸ್ವಾಮೀಜಿ ವಿವಿಧ ಶಾಸಕರ ನಿವಾಸಗಳಲ್ಲಿ ಸಭೆ ನಡೆಸಲು ಆರಂಭಿಸಿದ್ದಾರೆ, ಭಾನುವಾರ ತೇರದಾಳ ಶಾಸಕ ಸಿದ್ದು ಸವದಿ ಅವರ ನಿವಾಸದಲ್ಲಿ ಸಭೆ ನಡೆಯಿತು.

ಬೆಂಗಳೂರು: ಪಂಚಮಸಾಲಿಗಳನ್ನು ಹಿಂದುಳಿದ ವರ್ಗ ಎಂದು ಗುರುತಿಸಿ 2 ಎ ಮೀಸಲು ಸ್ಥಾನಮಾನ ನೀಡುವಂತೆ ಮತ್ತೆ ಒತ್ತಡ ಹೇರಲು ಆರಂಭಿಸಿದ್ದಾರೆ.
ಪಂಚಮಸಾಲಿ ಮಠಾಧೀಶ ಜಯ ಮೃತ್ಯುಂಜಯ ಸ್ವಾಮೀಜಿ ವಿವಿಧ ಶಾಸಕರ ನಿವಾಸಗಳಲ್ಲಿ ಸಭೆ ನಡೆಸಲು ಆರಂಭಿಸಿದ್ದಾರೆ, ಭಾನುವಾರ ತೇರದಾಳ ಶಾಸಕ ಸಿದ್ದು ಸವದಿ ಅವರ ನಿವಾಸದಲ್ಲಿ ಸಭೆ ನಡೆಯಿತು.
ಪಂಚಮಸಾಲಿ ಮುಖಂಡರು ಹಾಗೂ ಶಾಸಕರಾದ ವಿನಯ್ ಕುಲಕರ್ಣಿ, ಅರವಿಂದ ಬೆಲ್ಲದ್, ಎಂ.ಆರ್.ಪಾಟೀಲ್ ಅವರ ನಿವಾಸದಲ್ಲಿ ಈ ಹಿಂದೆ ಸಭೆ ನಡೆಸಲಾಗಿತ್ತು. ಸದ್ಯದಲ್ಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆಯಲ್ಲಿಯೂ ಸಭೆ ನಡೆಯಲಿದೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತ ಮಾತನಾಡಿದ ಮೃತ್ಯುಂಜಯ ಸ್ವಾಮೀಜಿ “ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ ಮತ್ತು ಅದು ನಮ್ಮ ಬೇಡಿಕೆಗಳಿಗೆ ಪೂರ್ವಭಾವಿಯಾಗಿ ಸ್ಪಂದಿಸಲಿಲ್ಲ. ಮುಂಬೈ-ಕರ್ನಾಟಕ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲಿಲ್ಲ ಹೀಗಾಗಿ ಅವರು ಮರುಚಿಂತನೆ ಮಾಡಬೇಕಾಗಿದೆ ಎಂದಿದ್ದಾರೆ.
ವಿಧಾನಸಭೆಯಲ್ಲಿ 20 ಪಂಚಮಸಾಲಿ ಸದಸ್ಯರಿದ್ದಾರೆ. ಅವರಲ್ಲಿ 11 ಕಾಂಗ್ರೆಸ್, 8 ಬಿಜೆಪಿ ಮತ್ತು ಒಬ್ಬರು ಜೆಡಿಎಸ್ ಶಾಸಕರಾಗಿದ್ದಾರೆ. ಸಮುದಾಯವು ಹಿಂದುಳಿದಿರುವುದನ್ನು ಸಾಬೀತುಪಡಿಸಿದರೆ ಅವರಿಗೂ ಮೀಸಲಾತಿ ಸಿಗುತ್ತದೆ ಎಂದು ಕೆಲವು ಹಿಂದುಳಿದ ವರ್ಗಗಳ ಚಳವಳಿಯ ಮುಖಂಡರು ಹೇಳಿದ್ದಾರೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



