ಕರ್ನಾಟಕದ ಶಿಲ್ಪಿ ಗಣೇಶ್ ಭಟ್ ಕೆತ್ತನೆಯ 3ನೇ ರಾಮ ಲಲ್ಲಾ ಮೂರ್ತಿಯ ಫೋಟೋ ಬಹಿರಂಗ
ಅಯೋಧ್ಯೆಯ ರಾಮಮಂದಿರಕ್ಕಾಗಿ ಕೆತ್ತಲಾದ ಮೂರನೇ ರಾಮಲಲ್ಲಾ ವಿಗ್ರಹದ ಫೋಟೋ ಬಹಿರಂಗಗೊಂಡಿದೆ.

ಬೆಂಗಳೂರು: ಅಯೋಧ್ಯೆಯ ರಾಮಮಂದಿರಕ್ಕಾಗಿ ಕೆತ್ತಲಾದ ಮೂರನೇ ರಾಮಲಲ್ಲಾ ವಿಗ್ರಹದ ಫೋಟೋ ಬಹಿರಂಗಗೊಂಡಿದೆ.
ಅಯೋಧ್ಯೆಯ ರಾಮಮಂದಿರದಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ನಿನ್ನೆ ಒಂದೇ ದಿನ ಐದು ಲಕ್ಷಕ್ಕೂ ಹೆಚ್ಚು ಭಕ್ತರು ದೇವರ ದರ್ಶನವನ್ನು ಪಡೆದಿದ್ದಾರೆ. ದೇವರ ದರ್ಶನ ಪಡೆಯಲು ಸಾಗರೋಪಾದಿಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ಈ ಸಂದಣಿಯನ್ನು ನಿಯಂತ್ರಿಸಲು ಸರ್ಕಾರ ಜಿಲ್ಲಾಢಳಿತ ಅಯೋಧ್ಯೆಗೆ ವಾಹನಗಳ ಪ್ರವೇಶವನ್ನು ನಿಷೇಧಿಸಿದೆ.
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ನಂತರ ರಾಜಸ್ಥಾನದ ಶಿಲ್ಪಿ ಸತ್ಯನಾರಾಯಣ ಪಾಂಡೆ ಕೆತ್ತಿರುವ ಮೂರ್ತಿಯ ಫೋಟೋವನ್ನು ನಿನ್ನೆ ಬಹಿರಂಗಪಡಿಸಲಾಗಿತ್ತು. ಇದೀಗ ಕರ್ನಾಟಕದ ಶಿಲ್ಪಿ ಗಣೇಶ್ ಭಟ್ ಅವರು ಕೆತ್ತಿರುವ ರಾಮ ಲಲ್ಲಾ ಮೂರನೇ ಮೂರ್ತಿಯ ಫೋಟೋವನ್ನು ಇದೀಗ ಬಹಿರಂಗಪಡಿಸಲಾಗಿದೆ.

ಗಣೇಶ್ ಭಟ್ ಅವರು ಕೃಷ್ಣ ಶಿಲೆಯಲ್ಲೇ ಮೂರ್ತಿಯನ್ನು ಕೆತ್ತಿದ್ದಾರೆ. ಇದರಲ್ಲಿ, ಭಗವಾನ್ ರಾಮನ ಪಾದದ ಒಂದು ಬದಿಯಲ್ಲಿ ಹನುಮಂತನನ್ನು ಇನ್ನೊಂದು ಬದಿಯಲ್ಲಿ ಗರುಡನನ್ನು ಕೆತ್ತಲಾಗಿದೆ. ವಿಗ್ರಹ ಸುತ್ತಲೂ ವಿಷ್ಣುವಿನ ಅವತಾರಗಳನ್ನು ಕೆತ್ತಲಾಗಿದೆ.
ಇದರಲ್ಲಿ ವಿಷ್ಣುವಿನ 10 ಅವತಾರಗಳ ಚಿತ್ರ. 1- ಮತ್ಸ್ಯ, 2- ಕೂರ್ಮ, 3- ವರಾಹ, 4- ನರಸಿಂಹ, 5- ವಾಮನ್, 6- ಪರಶುರಾಮ, 7- ರಾಮ, 8- ಕೃಷ್ಣ, 9- ಬುದ್ಧ ಮತ್ತು 10ನೇ ಕಲ್ಕಿ ಅವತಾರವನ್ನು ಕಾಣಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


