ನಮ್ಮ ಮೆಟ್ರೊ ಸುರಂಗ ನಿಲ್ದಾಣದಲ್ಲಿ ಅನಿಲ ದಾಳಿ ಅಣಕು ಪ್ರದರ್ಶನ
ನಮ್ಮ ಮೆಟ್ರೊ ಸುರಂಗ ನಿಲ್ದಾಣದಲ್ಲಿ ಸಂಭಾವ್ಯ ಅನಿಲ ದಾಳಿ ಅಣಕು ಪ್ರದರ್ಶನ ನಡೆಯಿತು.

ಬೆಂಗಳೂರು: ನಮ್ಮ ಮೆಟ್ರೊ ಸುರಂಗ ನಿಲ್ದಾಣದಲ್ಲಿ ಸಂಭಾವ್ಯ ಅನಿಲ ದಾಳಿ ಅಣಕು ಪ್ರದರ್ಶನ ನಡೆಯಿತು.
ವಿಧಾನಸೌಧ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರೊ ಸುರಂಗ ನಿಲ್ದಾಣದಲ್ಲಿ ಶನಿವಾರ ಸಂಭಾವ್ಯ ಅನಿಲ ಮತ್ತು ರಾಸಾಯನಿಕ ದಾಳಿಯನ್ನು ತಡೆಯುವ ಅಣಕು ಪ್ರದರ್ಶನ ನಡೆಸಲಾಯಿತು. ಯಾವುದೇ ರಾಸಾಯನಿಕ, ಜೈವಿಕ, ವಿಕಿರಣಶೀಲ ಮತ್ತು ನ್ಯೂಕ್ಲಿಯರ್ ಮೆಟೀರಿಯಲ್ (ಸಿಬಿಆರ್‌ಎನ್) ದಾಳಿಯ ಸಂದರ್ಭದಲ್ಲಿ ಎಲ್ಲ ಕಾರ್ಯ ವಿಧಾನಗಳ ಬಗ್ಗೆ ಅರಿವು ಮೂಡಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಪೊಲೀಸ್, ವೈದ್ಯಕೀಯ ಸೇವಾ ಸಂಸ್ಥೆಗಳು ಈ ಅಣಕು ಪ್ರದರ್ಶನ ನಡೆಸಿದವು.
ಸಾರ್ವಜನಿಕ ಪ್ರಕಟಣೆಗಳ ಮೂಲಕ ಅಣಕು ಪ್ರದರ್ಶನದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲಾಯಿತು. ಅಣಕು ಪ್ರದರ್ಶನದ ಸಮಯದಲ್ಲಿ, ರಾಸಾಯನಿಕಗಳನ್ನು ಬಳಸಿ ಹಾನಿಕಾರಕವಲ್ಲದ ಬಣ್ಣದ ಹೊಗೆಯನ್ನು ನಿಲ್ದಾಣದ ಆವರಣದಲ್ಲಿ ಹೊಗೆ ಬಾಂಬ್‌ಗೆ ಹೋಲುವ ಸನ್ನಿವೇಶವನ್ನು ಸೃಷ್ಟಿಸಲಾಯಿತು. ಮೆಟ್ರೊ ಸಿಬ್ಬಂದಿ ಪ್ರಯಾಣಿಕರಂತೆ ಬಂದು ಮೂರ್ಛೆ ಹೋದಂತೆ ನಟಿಸಿದರು.
ಹೊಗೆ ಹರಡುವ ಮತ್ತು ನಿಯಂತ್ರಿಸಲಾಗದ ಕಾರಣ ವಿಪತ್ತು ನಿರ್ವಹಣಾ ಸಂಸ್ಥೆಯ ಮಧ್ಯಸ್ಥಿಕೆಗಾಗಿ ನಿಲ್ದಾಣದ ಅಧಿಕಾರಿಗಳು ಕೇಂದ್ರ ಕಮಾಂಡ್ ಮತ್ತು ಭದ್ರತಾ ಕಣ್ಗಾವಲುಗಳಿಗೆ ಮಾಹಿತಿ ನೀಡಿದರು. ನಿಲ್ದಾಣದೊಳಗೆ ಪ್ರಯಾಣಿಕರ ಪ್ರವೇಶವನ್ನು ಸ್ಥಗಿತಗೊಳಿಸಲಾಯಿತು. ನಿಲ್ದಾಣದ ಒಳಗಿರುವ ಪ್ರಯಾಣಿಕರಿಗೆ ನಿಲ್ದಾಣದಿಂದ ತರಾತುರಿಯಿಂದ ಹೊರಬರುವಂತೆ ಸೂಚಿಸಲಾಯಿತು. ನಿಲ್ದಾಣದಲ್ಲಿ ರೈಲು ನಿಲುಗಡೆ ಮಾಡದಂತೆ ರೈಲು ನಿರ್ವಾಹಕರಿಗೆ ಸೂಚನೆ ನೀಡಲಾಯಿತು.
ರಾಸಾಯನಿಕ ಕಂಟೈನರ್ ಅನ್ನು ಮುಚ್ಚಿ ಪ್ರದೇಶವನ್ನು ಸೋಂಕು ರಹಿತಗೊಳಿಸಿದರು. ನಿಲ್ದಾಣದ ಹವಾನಿಯಂತ್ರಣವನ್ನು ಸ್ಥಗಿತಗೊಳಿಸಿ, ಹೊಗೆ ತೆಗೆಯುವ ಸುರಕ್ಷಿತ ಸ್ವಯಂಚಾಲಿತ ವ್ಯವಸ್ಟೆಯನ್ನು ಸಕ್ರಿಯಗೊಳಿಸಲಾಯಿತು. ಎನ್‌ಡಿಆರ್‌ಎಫ್ ಅನುಮತಿಸಿದ ನಂತರ ರೈಲು ಸಂಚಾರವನ್ನು ಪುನರಾರಂಭಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


