ಶೋಷಿತ ಸಮುದಾಯದವರು ನೀವೇ ದೇಗುಲ ನಿರ್ಮಿಸಿಕೊಂಡು ನೀವೇ ಪೂಜಾರಿಗಳಾಗಿ: ಸಿಎಂ ಸಿದ್ದರಾಮಯ್ಯ
ಶೋಷಿತ ಸಮುದಾಯದ ಜನರು ನೀವೇ ದೇಗುಲ ನಿರ್ಮಿಸಿಕೊಳ್ಳಿ. ನೀವೇ ದೇವಸ್ಥಾನಗಳಲ್ಲಿ ಪೂಜಾರಿಗಳಾಗಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಚಿತ್ರದುರ್ಗ: ಶೋಷಿತ ಸಮುದಾಯದ ಜನರು ನೀವೇ ದೇಗುಲ ನಿರ್ಮಿಸಿಕೊಳ್ಳಿ. ನೀವೇ ದೇವಸ್ಥಾನಗಳಲ್ಲಿ ಪೂಜಾರಿಗಳಾಗಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ನಡೆದ ಉಪ್ಪಾರ ಸಮಾವೇಶದಲ್ಲಿ ಚನ್ನಕೇಶವ ದೇವಸ್ಥಾನದಲ್ಲಿ ಕುರುಬ ಸ್ವಾಮೀಜಿಗೆ ನಿರ್ಬಂಧ ವಿಚಾರವಾಗಿ ಮಾತನಾಡಿದ ಅವರು, ಇತ್ತೀಚೆಗೆ ಗರ್ಭಗುಡಿಗೆ ಶ್ರೀಗಳಿಗೆ ನಿರ್ಬಂಧ ವಿಚಾರ ತಿಳಿದು ಬೇಸರವಾಯಿತು. ಪಟ್ಟಭದ್ರರಿಂದ ಎಚ್ಚರವಾಗಿರಿ, ಬಿಕೇರ್ ಫುಲ್. ಶಿಕ್ಷಣದಿಂದ ವಂಚಿತರನ್ನಾಗಿಸುವ ಕೆಲಸ ಹಿಂದಿನಿಂದಲೂ ನಡೆದಿದೆ. ಮೊದಲು ಶಿಕ್ಷಿತರಾಗಿ ಬಳಿಕ ಸಾಮಾಜಿಕ, ಆರ್ಥಿಕವಾಗಿ ಸಬಲರಾಗಿರಿ. ನಾನು ಚಿಕ್ಕಂದಿನಲ್ಲಿ ಬಾವಿ ನೀರು ತರಲು ಹೋಗುತ್ತಿದ್ದೆನು. ಕಸ ತಿಳಿಗೊಳಿಸಿ ಕೊಡದಲ್ಲಿ ನೀರು ತುಂಬಿಕೊಳ್ಳುತ್ತಿದ್ದೆನು. ಬಳಿಕ ಮತ್ತೆ ನೀರ ಮೇಲೆ ಕಸ ಮುಚ್ಚಿಕೊಳ್ಳುತ್ತಿತ್ತು. ದಾರ್ಶನಿಕರು ಜಾಗೃತಿ ಮೂಡಿಸಿದಾಗ ಜಾತಿ ವ್ಯವಸ್ಥೆ ತಿಳಿಯಾಗಿದೆ. ಬಳಿಕ ಮತ್ತೆ ಜಾತಿ ವ್ಯವಸ್ಥೆ ಗಟ್ಟಿ ಆಗುತ್ತಲೇ ಸಾಗಿದೆ ಎಂದರು.
ಪ್ರತಿಭೆ ಯಾರ ಸ್ವತ್ತಲ್ಲ, ಜಾತಿಯಿಂದ ಬರುವಂಥದಲ್ಲ. ಮಹಾನ್ ವಿದ್ವಾಂಸ ಅಂಬೇಡ್ಕರ್ ಯಾವ ಜಾತಿಯಲ್ಲಿ ಹುಟ್ಟಿದವರು? ಭಗೀರಥ ಮಹರ್ಷಿ ಶಿವನಿಗೆ ಒಲಿಸಿ ನೀರು ತರಲಿಲ್ಲವೇ ಎಂದು ಸಿದ್ದರಾಮಯ್ಯ ಕೇಳಿದರು.
ಗ್ಯಾರಂಟಿ ಬಗ್ಗೆ ಟೀಕೆ ಮಾಡ್ತಾರೆ: ಜನಪರ ಯೋಜನೆಗಳನ್ನು ಮಾಡದವರು ಗ್ಯಾರಂಟಿ ಟೀಕಿಸುತ್ತಾರೆ. ಗ್ಯಾರಂಟಿ ಬಗ್ಗೆ ಬಿಜೆಪಿಯವರು ಟೀಕೆ ಮಾಡುತ್ತಾರೆ, ಹೀಯಾಳಿಸುತ್ತಾರೆ. ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ನಾವೆಲ್ಲಾ ಶ್ರೀರಾಮನ ಭಕ್ತರಲ್ಲವೇ, ರಾಮಾಯಣ ಓದಿಲ್ಲವೇ. ಪಿತೃ ವಾಕ್ಯ ಪರಿಪಾಲನೆ, ರಾಮರಾಜ್ಯ ನಿರ್ಮಿಸಿದ್ದಕ್ಕೆ ಶ್ರೀರಾಮನ ಪೂಜಿಸುತ್ತೇವೆ ಎಂದು ಹೇಳಿದ್ದಾರೆ.
ಕಷ್ಟಪಟ್ಟು ಓದಿದ್ದಕ್ಕೆ ಇಂದು ಮುಖ್ಯಮಂತ್ರಿ: ನನ್ನ ತಂದೆ ಪ್ರತಿಯೊಂದಕ್ಕೂ ಶಾನುಭೋಗರ ಬಳಿ ಕೇಳುತ್ತಿದ್ದರು. ಕಾನೂನು ಪದವಿ ಅಭ್ಯಾಸಕ್ಕೆಂದು ಕೇಳಿದಾಗ ಬೇಡ ಅಂದಿದ್ದರು. ನಾನು ಊರ ಪಂಚಾಯಿತಿ ಸೇರಿಸಿ ಕಾನೂನು ಪದವಿ ಓದಿದೆ. ಕಾನೂನು ಪದವಿ ಓದಿದ್ದಕ್ಕೆ ನಾನು ಈಗ ಮುಖ್ಯಮಂತ್ರಿ ಆಗಿದ್ದೇನೆ. ಅವಕಾಶ ಸಿಕ್ಕರೆ ಎಲ್ಲವೂ ಸಾಧ್ಯ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


