ಶಿವಮೊಗ್ಗದ ಜ್ಯುವೆಲರಿ ಶಾಪ್ ಮಾಲೀಕನಿಗೆ ವಂಚನೆ ಆರೋಪ: ಶ್ವೇತಾ ಗೌಡ ವಿರುದ್ಧ 2ನೇ FIR ದಾಖಲು
ಡಿಸೆಂಬರ್ 11 ರಂದು ನಗರದಲ್ಲಿ ಕೆಫೆ ಶಾಪ್ ನಲ್ಲಿ ಭೇಟಿಯಾದ ತನ್ನ ಸಹೋದರನಿಂದ ರೂ. 20 ಲಕ್ಷಕ್ಕೂ ಹೆಚ್ಚು ಮೌಲ್ಯದ 250 ಗ್ರಾಂ ತೂಕದ ಆಂಟಿಕ್ ಆಭರಣಗಳನ್ನು ಶ್ವೇತಾ ಅವರು ಪಡೆದಿದ್ದಾರೆ.

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಹೆಸರನ್ನು ಬಳಸಿಕೊಂಡು ಜ್ಯುವೆಲ್ಲರಿ ಮಾಲೀಕರೊಬ್ಬರಿಗೆ ರೂ. 2.4 ಕೋಟಿ ವಂಚಿಸಿದ ಆರೋಪದ ಮೇಲೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿರುವ ಶ್ವೇತಾ ಗೌಡ ವಿರುದ್ಧ ಎರಡನೇ ಎಫ್‌ಐಆರ್ ದಾಖಲಾಗಿದೆ.
ಈ ನಡುವೆ ಶಿವಮೊಗ್ಗದ ಮತ್ತೊಬ್ಬ ಜ್ಯುವೆಲ್ಲರಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಆಕೆ ರೂ. 20 ಲಕ್ಷ ವಂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಶಿವಮೊಗ್ಗದ ಸಾಗರದ ಪ್ರಗತಿ ಜ್ಯುವೆಲ್ಲರಿ ಅಂಗಡಿಯ ಮಾಲೀಕ ಆರ್. ಬಾಲರಾಜ್ ಸೇಠ್ ದಾಖಲಿಸಿರುವ ಎಫ್ ಐಆರ್ ನಲ್ಲಿ ಶ್ವೇತಾ ಅವರನ್ನು ನಗರದ ಇನ್ನೊಬ್ಬ ಆಭರಣ ಅಂಗಡಿ ಮಾಲೀಕ ಸಂಜಯ್ ಎಂಬುವರು ತನಗೆ ಪರಿಚಯಿಸಿದ್ದಾಗಿ ತಿಳಿಸಿದ್ದಾರೆ.
ಡಿಸೆಂಬರ್ 11 ರಂದು ನಗರದಲ್ಲಿ ಕೆಫೆ ಶಾಪ್ ನಲ್ಲಿ ಭೇಟಿಯಾದ ತನ್ನ ಸಹೋದರನಿಂದ ರೂ. 20 ಲಕ್ಷಕ್ಕೂ ಹೆಚ್ಚು ಮೌಲ್ಯದ 250 ಗ್ರಾಂ ತೂಕದ ಆಂಟಿಕ್ ಆಭರಣಗಳನ್ನು ಶ್ವೇತಾ ಅವರು ಪಡೆದಿದ್ದಾರೆ. ರೂ. 5 ಲಕ್ಷದ ಎರಡು ಚೆಕ್ ಹಾಗೂ ರೂ. 6 ಲಕ್ಷ ಮೊತ್ತದ ಮತ್ತೊಂದು ಚೆಕ್ ನ್ನು ಆಕೆ ನೀಡಿದ್ದು, ಉಳಿದ ರೂ. 4.75 ಲಕ್ಷ ಹಣವನ್ನು RTGS ಮೂಲಕ ಕಳುಹಿಸುವುದಾಗಿ ಹೇಳಿದ್ದಾರೆ. ಆದರೆ, ಹಣವನ್ನೂ ಆಕೆ ಕಳುಹಿಸಿಲ್ಲ. ಮೂರು ಚೆಕ್ ಗಳು ಅಮಾನ್ಯವಾಗಿವೆ.
ತದನಂತರ ಆಕೆಯನ್ನು ಪ್ರಶ್ನಿಸಿದಾಗ ಬ್ಯಾಂಕ್ ನಲ್ಲಿ ಸಮಸ್ಯೆಯಿರುವುದಾಗಿ ಹೇಳಿದ್ದರು. ತದನಂತರ ಡಿಸೆಂಬರ್ 14 ರಂದು ಆಕೆಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಂಜಯ್‌ಗೆ ಕರೆ ಮಾಡಿದಾಗ ಅವರಿಗೂ ಶ್ವೇತಾ ವಂಚನೆ ಮಾಡಿರುವುದು ತಿಳಿಯಿತು. ಬಳಿಕ ಡಿಸೆಂಬರ್ 18 ರಂದು ದೂರು ದಾಖಲಿಸಿರುವುದಾಗಿ ಬಾಲರಾಜ್ ಸೇಠ್ ತಿಳಿಸಿದ್ದಾರೆ. ಶ್ವೇತಾಗೌಡ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



