BMRCL: ಇದೇ ಮೊದಲ ಬಾರಿಗೆ ಹಣದ ಕೊರತೆ!
75.06 ಕಿಮೀ ನೆಟ್‌ವರ್ಕ್‌ಗೆ ಸುಮಾರು 10,000 ಕೋಟಿ ರೂ.ಗಳ ವೆಚ್ಚ ಹೆಚ್ಚಳವನ್ನು ಕರ್ನಾಟಕ ಮತ್ತು ಕೇಂದ್ರ ಸರ್ಕಾರ ಸಮಾನವಾಗಿ ಭರಿಸಬೇಕಾಗಿದೆ.

ಬೆಂಗಳೂರು: ಈ ತಿಂಗಳ ಆರಂಭದಲ್ಲಿ ಬಹುನಿರೀಕ್ಷಿತ ಬೆಂಗಳೂರು ಮೆಟ್ರೋ ಹಂತ-2 ಯೋಜನೆಯ ಪರಿಷ್ಕೃತ ವೆಚ್ಚದ 40,614 ಕೋಟಿ ರೂ.ಯಲ್ಲಿ ತನ್ನ ಪಾಲಿನ ಹಣ ನೀಡಲು ರಾಜ್ಯ ಸಚಿವ ಸಂಪುಟ ವಿಫಲವಾಗಿದೆ. ಇದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(BMRCL)ಗೆ ಎಚ್ಚರಿಕೆ ಗಂಟೆಯಾಗಿದೆ.
75.06 ಕಿಮೀ ನೆಟ್‌ವರ್ಕ್‌ಗೆ ಸುಮಾರು 10,000 ಕೋಟಿ ರೂ.ಗಳ ವೆಚ್ಚ ಹೆಚ್ಚಳವನ್ನು ಕರ್ನಾಟಕ ಮತ್ತು ಕೇಂದ್ರ ಸರ್ಕಾರ ಸಮಾನವಾಗಿ ಭರಿಸಬೇಕಾಗಿದೆ. ಆದಾಗ್ಯೂ, ಹೆಚ್ಚಿದ ವೆಚ್ಚಕ್ಕೆ ಹಣ ಮಂಜೂರಾತಿ ವಿಳಂಬವು ಡಿಸೆಂಬರ್ 2026 ರ ಅಂತಿಮ ಗಡುವಿನತ್ತ ಸಾಗುತ್ತಿರುವ ಹಂತ-2 ರ ಮೇಲೆ ತೀವ್ರ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಹಂತ-2, ಹಂತ-1 ನೆಟ್‌ವರ್ಕ್‌ನ ನಾಲ್ಕು ವಿಸ್ತರಣೆಗಳನ್ನು ಒಳಗೊಂಡಿದೆ, ಎರಡು ಹೊಸ ಮಾರ್ಗಗಳ ಹೊರತಾಗಿ, ಆರ್‌ವಿ ರಸ್ತೆಯಿಂದ ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಬೊಮ್ಮಸಂದ್ರದವರೆಗೆ 19.15-ಕಿಮೀ ಹಳದಿ ಮಾರ್ಗ ಹಾಗೂ ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ 21.26-ಕಿಮೀ ಪಿಂಕ್ ಲೈನ್. ಯೋಜನೆಗಾಗಿ 2020 ರ ಮೂಲ ಗಡುವನ್ನು (2014 ರಲ್ಲಿ ಅನುಮೋದಿಸಲಾಗಿದೆ) ಈಗ ಡಿಸೆಂಬರ್ 2026ಕ್ಕೆ ಮುಂದೂಡಲಾಗಿದೆ.
“ಭೂಸ್ವಾಧೀನ ವೆಚ್ಚಗಳು, ಸಾಂಕ್ರಾಮಿಕ-ಪ್ರೇರಿತ ವಿಳಂಬಗಳು ಮತ್ತು ಅಂತರರಾಷ್ಟ್ರೀಯ ಕರೆನ್ಸಿಗಳಲ್ಲಿನ ಏರಿಳಿತಗಳು ಮತ್ತು ಇತರ ಕಾರಣಗಳಿಂದಾಗಿ 30,695 ಕೋಟಿ ರೂಪಾಯಿ ಇದ್ದ ಯೋಜನೆ ವೆಚ್ಚ ಈಗ 40,600 ಕೋಟಿ ರೂಪಾಯಿಗಳಿಗೆ ಹೆಚ್ಚಾದೆ. ನಾವು ಪರಿಷ್ಕೃತ ವೆಚ್ಚದ ಪ್ರಸ್ತಾವನೆಯನ್ನು ಈ ವರ್ಷದ ಸೆಪ್ಟೆಂಬರ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಅದರ ಅನುಮೋದನೆಗಾಗಿ ಸಲ್ಲಿಸಿದ್ದೆವು ಮತ್ತು ಹಣಕಾಸು ಇಲಾಖೆ ಅದನ್ನು ಒಪ್ಪಿದೆ. ಆದಾಗ್ಯೂ, ಮೂರು ತಿಂಗಳಲ್ಲಿ ಹಣ ಬಿಡುಗಡೆಯಾಗುವ ಬಗ್ಗೆ ವಿಶ್ವಾಸ ಇತ್ತು. ಆದರೆ ಕ್ಯಾಬಿನೆಟ್ ಅನುಮೋದನೆ ಸಿಕ್ಕಿಲ್ಲ ಎಂದು ನಮಗೆ ಮಾಹಿತಿ ಬಂದಿದೆ ಎಂದು ಮೂಲವೊಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತಿಳಿಸಿದೆ.
ಇದು ಬಿಎಂಆರ್‌ಸಿಎಲ್‌ಗೆ ದೊಡ್ಡ ಹೊಡೆತವಾಗಿದೆ. ಏಕೆಂದರೆ ಶೀಘ್ರದಲ್ಲೇ ಹಲವು ಪಾವತಿಗಳನ್ನು ಮಾಡಬೇಕಾಗಿದೆ. ಪರಿಸ್ಕೃತ ವೆಚ್ಚದಲ್ಲಿ ಕರ್ನಾಟಕವು 5,000 ಕೋಟಿ ರೂಪಾಯಿ ನೀಡಬೇಕಿದೆ ಮತ್ತು ಕೇಂದ್ರ ಸರ್ಕಾರ ಸಹ 5 ಸಾವಿರ ಕೋಟಿ ರೂ. ಭರಿಸಬೇಕಾಗಿದೆ. ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದ ಬಳಿಕವಷ್ಟೇ ಕೇಂದ್ರದ ಒಪ್ಪಿಗೆ ಪಡೆಯಬಹುದು ಎಂದು ಅವರು ಹೇಳಿದ್ದಾರೆ.
ಪರಿಷ್ಕೃತ ವೆಚ್ಚಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ವಿವರಗಳನ್ನು ಕೇಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಅವರು ಡಿಸೆಂಬರ್ 6 ರಂದು ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಈ ವಿಚಾರವನ್ನು ನಂತರ ಪರಿಗಣಿಸಲಾಗುವುದು ಎಂದು ಅವರು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



