ರಾಜ್ಯ

ದರ್ಶನ್ ಗೆ ಜಾಮೀನು: ಚಿತ್ರದುರ್ಗದಲ್ಲಿ ಆಕ್ರೋಶ; ಪ್ರತಿಕೃತಿಗೆ ಥಳಿಸಿ ವಿರೋಧ

ನೆಚ್ಚಿನ ನಟನಿಗೆ ಜಾಮೀನು ದೊರೆತಿರುವುದಕ್ಕೆ ಸೆಲಬ್ರಿಟಿಗಳಾದ ನಿರ್ದೇಶಕ ತರುಣ್ ಸುಧೀರ್ ಆದಿಯಾಗಿ ಅಭಿಮಾನಿಗಳು, ಹಿತೈಶಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ದರ್ಶನ್ ಗೆ ಜಾಮೀನು: ಚಿತ್ರದುರ್ಗದಲ್ಲಿ ಆಕ್ರೋಶ; ಪ್ರತಿಕೃತಿಗೆ ಥಳಿಸಿ ವಿರೋಧ
ದರ್ಶನ್ ವಿರುದ್ಧ ಪ್ರತಿಭಟನೆ — online desk
Published On :

ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಟ ದರ್ಶನ್ ಗೆ ಹೈಕೋರ್ಟ್ ಡಿ.13 ರಂದು ಜಾಮೀನು ಮಂಜೂರು ಮಾಡಿದೆ.

ನೆಚ್ಚಿನ ನಟನಿಗೆ ಜಾಮೀನು ದೊರೆತಿರುವುದಕ್ಕೆ ಸೆಲಬ್ರಿಟಿಗಳಾದ ನಿರ್ದೇಶಕ ತರುಣ್ ಸುಧೀರ್ ಆದಿಯಾಗಿ ಅಭಿಮಾನಿಗಳು, ಹಿತೈಶಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಆದರೆ ಚಿತ್ರದುರ್ಗದಲ್ಲಿ ನಟ ದರ್ಶನ್ ಗೆ ಜಾಮೀನು ನೀಡುವುದಕ್ಕೆ ಕೆಲವೊಂದು ಪ್ರದೇಶದಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದೆ.

ಚಿತ್ರದುರ್ಗ ನಗರದಲ್ಲಿ ದರ್ಶನ್ ವಿರುದ್ಧ ಪ್ರತಿಭಟನೆ ನಡೆಸಿರುವ ಸಾರ್ವಜನಿಕರು, ದರ್ಶನ್ ಫೋಟೋ ಇರುವ ಪ್ರತಿಕೃತಿಗಳಿಗೆ ಚಪ್ಪಲಿಯಿಂದ ಥಳಿಸಿ, ಬೆಂಕಿ ಹಚ್ಚುವ ಮೂಲಕ ಜಾಮಿನು ದೊರೆತಿದ್ದನ್ನು ವಿರೋಧಿಸಿದ್ದಾರೆ.

ಇದೇ ವೇಳೆ ದರ್ಶನ್ ನ್ನು ಗಲ್ಲಿಗೇರಿಸಿ ಎಂಬ ಘೋಷಣೆ ಕೂಗಿದ್ದಾರೆ. ಘಟನೆ ನಡೆದ 6 ತಿಂಗಳ ಬಳಿಕ ದರ್ಶನ್ ಗೆ ಜಾಮೀನು ಮಂಜೂರಾಗಿದೆ. ಇತ್ತೀಚೆಗೆ ದರ್ಶನ್ ಗೆ ಬೆನ್ನುನೋವು ಇದ್ದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.