ರಾಜ್ಯ

ಉತ್ತರ ಕನ್ನಡ: ಗಂಟಲಲ್ಲಿ ಬಲೂನ್ ಸಿಲುಕಿ 13 ವರ್ಷದ ಬಾಲಕ ಸಾವು!

ನವೀನ್ ನಾರಾಯಣ ಬೆಳಗಾಂವಕರ ಮೃತ ಬಾಲಕ, ಆತ 7 ನೇ ತರಗತಿ ವಿದ್ಯಾರ್ಥಿಯಾಗಿದ್ದ. ಸಂಜೆ ಮನೆಯಲ್ಲಿ ಬಲೂನ್ ಊದುತ್ತಿದ್ದಾಗ ಗಂಟಲಲ್ಲಿ ಬಲೂನ್ ಸಿಕ್ಕಿಹಾಕಿಕೊಂಡಿತ್ತು.

ಉತ್ತರ ಕನ್ನಡ: ಗಂಟಲಲ್ಲಿ ಬಲೂನ್ ಸಿಲುಕಿ 13 ವರ್ಷದ ಬಾಲಕ ಸಾವು!
ಸಾಂದರ್ಭಿಕ ಚಿತ್ರ
Published On :

ಹಳಿಯಾಳ: ಊದುತ್ತಿದ್ದ ಬಲೂನ್ ನುಂಗಿದ ಪರಿಣಾಮ 13 ವರ್ಷದ ಬಾಲಕ ಉಸಿರುಗಟ್ಟಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗೇನಕೊಪ್ಪ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.

ನವೀನ್ ನಾರಾಯಣ ಬೆಳಗಾಂವಕರ ಮೃತ ಬಾಲಕ, ಆತ 7 ನೇ ತರಗತಿ ವಿದ್ಯಾರ್ಥಿಯಾಗಿದ್ದ. ಸಂಜೆ ಮನೆಯಲ್ಲಿ ಬಲೂನ್ ಊದುತ್ತಿದ್ದಾಗ ಗಂಟಲಲ್ಲಿ ಬಲೂನ್ ಸಿಕ್ಕಿಹಾಕಿಕೊಂಡಿತ್ತು.

ಉಸಿರಾಡಲು ಹರಸಾಹಸ ಪಡುತ್ತಿದ್ದ ಆತನನ್ನು ಪೋಷಕರು ಹಾಗೂ ನೆರೆಹೊರೆಯವರು ಹಳಿಯಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರನ್ನು ರಕ್ಷಿಸಲು ವೈದ್ಯರ ತಂಡ ನಡೆಸಿದ ಪ್ರಯತ್ನ ವ್ಯರ್ಥವಾಯಿತು. ಆಸ್ಪತ್ರೆಯಲ್ಲಿ ದಾಖಲಾದ ಕೆಲವೇ ಗಂಟೆಗಳಲ್ಲಿ ಬಾಲಕ ಮೃತಪಟ್ಟಿದ್ದಾನೆ. ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.