ರಾಜ್ಯ

ಹುಬ್ಬಳ್ಳಿ: SWRನ ಶೇ. 80 ರಷ್ಟು ಸಿಬ್ಬಂದಿ ಯುಪಿಎಸ್ ಪ್ರಯೋಜನ ಪಡೆಯಲಿದ್ದಾರೆ

ಉದ್ಯೋಗಿಗಳಿಗೆ ಅಸ್ತಿತ್ವದಲ್ಲಿರುವ NPS ಮತ್ತು UPS ನಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.

ಹುಬ್ಬಳ್ಳಿ: SWRನ ಶೇ. 80 ರಷ್ಟು ಸಿಬ್ಬಂದಿ ಯುಪಿಎಸ್ ಪ್ರಯೋಜನ ಪಡೆಯಲಿದ್ದಾರೆ
ಸಾಂದರ್ಭಿಕ ಚಿತ್ರ
Published On :

ಹುಬ್ಬಳ್ಳಿ: ನೈಋತ್ಯ ರೈಲ್ವೆಯ(ಎಸ್‌ಡಬ್ಲ್ಯೂಆರ್‌ನ ಶೇ. 80 ರಷ್ಟು) ಸುಮಾರು 31,230 ರೈಲ್ವೆ ಉದ್ಯೋಗಿಗಳು ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಗೆ(ಎನ್‌ಪಿಎಸ್) ಪರ್ಯಾಯವಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿದ ಏಕೀಕೃತ ಪಿಂಚಣಿ ಯೋಜನೆ(ಯುಪಿಎಸ್) ಲಾಭ ಪಡೆಯಲಿದ್ದಾರೆ. ಇವರು ಪ್ರಸ್ತುತ NPS ಅಡಿಯಲ್ಲಿದ್ದಾರೆ.

ಉದ್ಯೋಗಿಗಳಿಗೆ ಅಸ್ತಿತ್ವದಲ್ಲಿರುವ NPS ಮತ್ತು UPS ನಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ SWR ಹಣಕಾಸು ಸಲಹೆಗಾರ ಮತ್ತು ಮುಖ್ಯ ಅಕೌಂಟ್ಸ್ ಅಧಿಕಾರಿ ಕುಸುಮಾ ಹರಿಪ್ರಸಾದ್ ಮತ್ತು ಮುಖ್ಯ ಸಿಬ್ಬಂದಿ ಅಧಿಕಾರಿ ಶುಜಾ ಮಹಮೂದ್ ಅವರು, ಯುಪಿಎಸ್ ಅಡಿ ಸರ್ಕಾರಿ ನೌಕರರು ನಿವೃತ್ತಿಯ ಹಿಂದಿನ 12 ತಿಂಗಳಿನಿಂದ ಅವರ ಸರಾಸರಿ ಮೂಲ ವೇತನದ ಶೇ. 50 ರಷ್ಟು ಪಿಂಚಣೆ ಪಡೆಯುತ್ತಾರೆ ಎಂದರು.

ಈ ಮಹತ್ವದ ಬೆಳವಣಿಗೆಯು ಸರ್ಕಾರಿ ನೌಕರರಿಗೆ ಪಿಂಚಣಿ ಪ್ರಯೋಜನಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ನಿವೃತ್ತಿಯ ನಂತರ ಹೆಚ್ಚಿನ ಆರ್ಥಿಕ ಭದ್ರತೆಯನ್ನು ಖಾತರಿಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.