ರಾಜ್ಯ

ಮಗನ ಸುಟ್ಟ ದೇಹವನ್ನು ಕೈಚೀಲದಲ್ಲಿ ಹಾಕಿ ತಂದೆಯ ಕೈಗೆ ಕೊಟ್ಟ ಅಧಿಕಾರಿಗಳು: ಅಂತಃಕರಣ ಇಲ್ಲದ ಸರ್ಕಾರ- CT Ravi

ದಾರಿಯುದ್ದಕ್ಕೂ ತಂದೆ ತನ್ನ ಕೈಯಲ್ಲಿ ಮಗನ ಸುಟ್ಟ ದೇಹದ ಅಂಗಾಂಗಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿಗೆ ಮರಗುವಂತಾಗಿದೆ. ಜಿಲ್ಲಾಡಳಿತದ ಈ ಅಮಾನವೀಯ ಕಾರ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಗನ ಸುಟ್ಟ ದೇಹವನ್ನು ಕೈಚೀಲದಲ್ಲಿ ಹಾಕಿ ತಂದೆಯ ಕೈಗೆ ಕೊಟ್ಟ ಅಧಿಕಾರಿಗಳು: ಅಂತಃಕರಣ ಇಲ್ಲದ ಸರ್ಕಾರ- CT Ravi
ಮಗನ ಸುಟ್ಟ ದೇಹವನ್ನು ಚೀಲಕ್ಕೆ ಹಾಕಿಕೊಟ್ಟ ಅಧಿಕಾರಿಗಳು
Published On :

ಬೆಳಗಾವಿ: ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿರುವ ಸ್ನೇಹಂ ಕಾರ್ಖಾನೆಯಲ್ಲಿ ಮಂಗಳವಾರ ಸಂಭವಿಸಿದಂತಹ ಅಗ್ನಿ ಅವಘಡದಿಂದ ಬುಧವಾರದ ಮಧ್ಯಾಹ್ನದವರೆಗೂ ನಿಯಂತ್ರಣಕ್ಕೆ ಬಂದಿರಲಿಲ್ಲ.‌ ಸುಮಾರು 6 ಅಗ್ನಿಶಾಮಕ ವಾಹನಗಳು ಹಾಗೂ 250ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಗಳ ನಿರಂತರ ಪ್ರಯತ್ನದಿಂದ ಇದೀಗ ಒಬ್ಬ ಕಾರ್ಮಿಕನ ಶವ ಸಂಪೂರ್ಣ ಸುಟ್ಟು ಕರಕಲಾದ ಪರಿಸ್ಥಿತಿಯಲ್ಲಿ ಪತ್ತೆಯಾಗಿದೆ.

ಈ ಅಗ್ನಿ ಅವಘಡದಲ್ಲಿ ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ( 20) ಅವರ ದೇಹದ ಅಂಗಾಂಗಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದವು. ಮಾನವೀಯತೆ ಮರೆತ ಬೆಳಗಾವಿಯ ಅಧಿಕಾರಿಗಳು ಪ್ಲಾಸ್ಟಿಕ್ ಚೇಲದಲ್ಲಿ ಮೃತದೇಹದ ಭಾಗಗಳನ್ನು ಹಾಕಿ ತಂದೆಯ ಕೈಗೆ ಕೊಟ್ಟು ಕಳುಹಿಸಿದ್ದಾರೆ. ಈ ದೃಶ್ಯವನ್ನು ನೋಡಿದವರ ಕರುಳು ಕಿತ್ತು ಬರುವಂತಾಗಿದೆ.

ದಾರಿಯುದ್ದಕ್ಕೂ ತಂದೆ ತನ್ನ ಕೈಯಲ್ಲಿ ಮಗನ ಸುಟ್ಟ ದೇಹದ ಅಂಗಾಂಗಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿಗೆ ಮರಗುವಂತಾಗಿದೆ. ಜಿಲ್ಲಾಡಳಿತದ ಈ ಅಮಾನವೀಯ ಕಾರ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಾನವೀಯತೆಯ ಅಂತಃಕರಣ ಇಲ್ಲದ @INCKarnataka ಸರ್ಕಾರ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಎದೆ ಎತ್ತರಕ್ಕೆ ಬೆಳೆದ ಮಗನ ದೇಹ ಸುಟ್ಟು ಕರಕಲಾದುದ್ದನ್ನು ಸಹಿಸಿಕೊಳ್ಳುವುದೇ ಕಷ್ಟ. ಅಂತದ್ದರಲ್ಲಿ ಮಗನ ಅಳಿದುಳಿದ ದೇಹದ ಅವಶೇಷಗಳನ್ನು ಹೆತ್ತ ತಂದೆಯ ಕೈಗೆ "ಕೈ" ಚೀಲದಲ್ಲಿ ಒಪ್ಪಿಸಿ ಮನೆಗೆ ನಡೆಯಿರಿ ಎನ್ನುವುದು ಎಷ್ಟರ ಮಟ್ಟಿಗೆ ಸರಿ..??

ಿಎಂ ಸಿದ್ದರಾಮಯ್ಯ ಅವರೆ, ನಾವು ಸಕಲ ಜೀವರಾಶಿಗಳಿಗೂ ಲೇಸನ್ನು ಬಯಸುವ ಕರ್ನಾಟಕದಲ್ಲಿ ಇದ್ದೆವೋ ಅಥವಾ ಮಾನವೀಯತೆ ಸತ್ತಿರುವ ತಾಲಿಬಾನ್ ನಲ್ಲಿದ್ದೆವೋ..??ಶವಕ್ಕೆ ಕನಿಷ್ಠ ಗೌರವವೂ ನೀಡದೆ, ಮಾನವೀಯತೆಯನ್ನು ಕೊಲೆಗೈದಿರುವ ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕಿಡಿ ಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.