ಎರಡು ದಿನಗಳ ಹಿಂದಷ್ಟೇ ಕೊರೆದಿದ್ದ ಕೊಳವೆ ಬಾವಿಗೆ ಮಗ ಬಿದ್ದು, ಮತ್ತೆ ಬದುಕಿ ಬಂದಿದ್ದಾನೆ: ಸತೀಶ್ ಮುಜಗೊಂಡ
ತಮ್ಮ ಏಕೈಕ ಮಗು ಎರಡು ದಿನಗಳ ಹಿಂದಷ್ಟೇ ಕೊರೆದಿದ್ದ ಕೊಳವೆ ಬಾವಿಗೆ ಮಗ ಬಿದ್ದು, ಪವಾಡ ಸದೃಶ ರೀತಿಯಲ್ಲಿ ಮತ್ತೆ ಬದುಕಿ ಬಂದಿದ್ದಾನೆ ಎಂದು ಸತೀಶ್ ಮುಜಗೊಂಡ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯಪುರ: ತಮ್ಮ ಏಕೈಕ ಮಗು ಎರಡು ದಿನಗಳ ಹಿಂದಷ್ಟೇ ಕೊರೆದಿದ್ದ ಕೊಳವೆ ಬಾವಿಗೆ ಮಗ ಬಿದ್ದು, ಪವಾಡ ಸದೃಶ ರೀತಿಯಲ್ಲಿ ಮತ್ತೆ ಬದುಕಿ ಬಂದಿದ್ದಾನೆ ಎಂದು ಸತೀಶ್ ಮುಜಗೊಂಡ ಮತ್ತು ಪೂಜಾ ಮುಜಗೊಂಡ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
“ನಾನು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮತ್ತು ನನ್ನ ನಿಂಬೆ ಗಿಡಗಳಿಗೆ ನೀರುಣಿಸಲು ತಯಾರಿ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸಾತ್ವಿಕ್ ಮನೆಯಲ್ಲಿ ಕಾಣದಿರುವುದನ್ನು ಅರಿತು ನಾನು ಮತ್ತು ನನ್ನ ಪತ್ನಿ ಪೂಜಾ ಹೊಲದಲ್ಲಿ ಹುಡುಕತೊಡಗಿದೆವು. ಜಮೀನಿನಲ್ಲಿ ಎಲ್ಲೂ ಕಾಣದಿದ್ದಾಗ ಕೊಳವೆಬಾವಿಯಲ್ಲಿ ಬಿದ್ದಿರಬಹುದೆಂದು ಶಂಕಿಸಿ ಭಯಪಟ್ಟೆ. ಸಾತ್ವಿಕ್ ಕೊಳವೆಬಾವಿಯಲ್ಲಿ ಬಿದ್ದಿರುವುದನ್ನು ಗಮನಿಸಿದಾಗ ನಮಗೆ ಭಯವಾಯಿತು” ಎಂದು ಸತೀಶ್ ಹೇಳಿದ್ದಾರೆ.
ಎರಡು ದಿನಗಳ ಹಿಂದಷ್ಟೇ 180 ಅಡಿಯಷ್ಟು ಕೊಳವೆ ಬಾವಿ ಕೊರೆಸಿದ್ದೆ. 180 ಅಡಿಗೆ ಏರ್ ಪಾಸ್ ಆಗಿ ಪಾಯಿಂಟ್ ವಿಫಲವಾಗಿತ್ತು. ಹೀಗಾಗಿ ಪಕ್ಕದಲ್ಲಿ 480 ಅಡಿಯಷ್ಟು ಮತ್ತೊಂದು ಕೊಳವೆ ಬಾವಿ ಕೊರೆಯಲಾಗಿತ್ತು. ಅದರಲ್ಲಿ ಎರಡು ಇಂಚು ನೀರು ಸಿಕ್ಕಿತ್ತು. ನನ್ನ ನಿಂಬೆ ಗಿಡಗಳನ್ನು ಉಳಿಸಲು ಮಾತ್ರ ನಾನು ಬೋರ್‌ವೆಲ್ ಕೊರೆಸಿದ್ದೆ. ನೀರು ಬಾರದ ಕೊಳೆ ಬಾವಿಯ ಕವರ್ ತೆಗೆದದ್ದು ಮತ್ತು ನನ್ನ ಮಗ ಕೊಳವೆಬಾವಿಯಲ್ಲಿ ಬಿದ್ದಿರುವುದು ಅತ್ಯಂತ ಕೆಟ್ಟ ಕಾಕತಾಳೀಯ ”ಎಂದು ಸತೀಶ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ವೃತ್ತಿಯಲ್ಲಿ ಕೃಷಿಕರಾಗಿರುವ ಸತೀಶ್ ಸುಮಾರು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು, 15 ತಿಂಗಳ ಹಿಂದೆ ಸಾತ್ವಿಕ್ ಅವರ ಮೊದಲ ಮಗು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



