ರಾಜ್ಯ

ತುಮಕೂರು ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಸೋಮಣ್ಣಗಿಂತ ಪತ್ನಿ ಶೈಲಜಾ ಶ್ರೀಮಂತೆ!

ತುಮಕೂರಿನ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಮತ್ತು ಪತ್ನಿ ಶೈಲಜಾ ಆಸ್ತಿ ಸೇರಿ ಒಟ್ಟು 60.78 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಸೋಮಣ್ಣಗಿಂತ ಪತ್ನಿ ಶೈಲಜಾ ಶ್ರೀಮಂತೆ!
ವಿ.ಸೋಮಣ್ಣ
Published On :

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಇದೇ ವೇಳೆ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಕೆ ಮಾಡುತ್ತಿದ್ದಾರೆ. ತುಮಕೂರಿನ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಮತ್ತು ಪತ್ನಿ ಶೈಲಜಾ ಆಸ್ತಿ ಸೇರಿ ಒಟ್ಟು 60.78 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಸಲ್ಲಿಸಿರುವ ಆಸ್ತಿ ವಿವರಗಳ ಅಫಿಡವಿಟ್‌ ಪ್ರಕಾರ ವಿ ಸೋಮಣ್ಣ ಅವರ ಪತ್ನಿಯೇ ಶ್ರೀಮಂತೆ. ವಿ ಸೋಮಣ್ಣ ಒಟ್ಟು 17.74 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅವರ ಪತ್ನಿ ಶೈಲಜಾ ಅವರು 43.83 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ.

ಸೋಮಣ್ಣ ಅವರ 17.74 ಕೋಟಿ ಆಸ್ತಿಯಲ್ಲಿ 5.18 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿದ್ದರೆ, 12.56 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 69,79,921 ರೂಪಾಯಿ ವಾರ್ಷಿಕ ಆದಾಯ ಹೊಂದಿದ್ದಾರೆ. ಕೃಷಿ ಮೂಲದಿಂದ 65 ಲಕ್ಷ ಆದಾಯ ಗಳಿಸುತ್ತಾರೆ. 8,12,563 ನಗದು ಹೊಂದಿದ್ದು, ತಮ್ಮ ಬ್ಯಾಂಕ್ ಖಾತೆಯಲ್ಲಿ 4,55,32,896 ಕೋಟಿ ಹಣವಿಟ್ಟಿದ್ದಾರೆ.

ಸೋಮಣ್ಣ ಅವರಿಗೆ ಚಿಕ್ಕಮಗಳೂರು ತಾಲೂಕಿನ ಬಸಾಪುರ ಮತ್ತು ಕಡವಂತಿ ಗ್ರಾಮದಲ್ಲಿ 4.5 ಕೋಟಿ ಮೌಲ್ಯದ 68.01 ಎಕರೆ ಕೃಷಿ ಭೂಮಿ ಇದೆ, ಸೋಮಣ್ಣ ಅವರು ವಿಜಯನಗರ ಮತ್ತು ಎಂಆರ್ ಸಿಆರ್ ಲೇಔಟ್ ನಲ್ಲಿ 8.06 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಸೋಮಣ್ಣ ಅವರ ಚರ ಆಸ್ತಿ ಮೌಲ್ಯ 5,18,23,590, ಮತ್ತು ಸ್ಥಿರಾಸ್ತಿ 12,56,00,000, ಶೈಲಜಾ 4,38,81,625 ಮೌಲ್ಯದ ಚರ ಆಸ್ತಿ ಮತ್ತು 38,65,00,000 ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಇನ್ನು ಸೋಮಣ್ಣ ಪತ್ನಿ ಶೈಲಜಾ ಅವರ ಹೆಸರಲ್ಲಿ 4.38 ಕೋಟಿ ಮೌಲ್ಯದ ಚರಾಸ್ತಿ ಹಾಗೂ ಒಟ್ಟು ಸ್ಥಿರಾಸ್ತಿ ಮೌಲ್ಯ 38,65,00,000 ಕೋಟಿ ರೂ. ಇದೆ.ವರ ಪತ್ನಿ ಬೆಂಗಳೂರಿನ ನಾಗದೇವನಹಳ್ಳಿ ಮತ್ತು ಕೆಂಗೇರಿಯಲ್ಲಿ ವಾಣಿಜ್ಯ ಕಟ್ಟಡಗಳು ಮತ್ತು ಅಪಾರ್ಟ್‌ಮೆಂಟ್‌ಗಳು ಸೇರಿದಂತೆ 25.7 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಬಳಿ 2,524 ಗ್ರಾಂ ವಜ್ರಗಳು ಸೇರಿದಂತೆ 1.05 ಕೋಟಿ ಮೌಲ್ಯದ ಆಭರಣಗಳನ್ನು ಹೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.