ರಾಜ್ಯ

ಖಡ್ಗ ಹಿಡಿದು ಮಹಾರಾಣಿಯಂತೆ ಕಂಗೊಳಿಸಿದ ಐಪಿಎಸ್ ಅಧಿಕಾರಿ: ರೂಪಾ ಮೌದ್ಗಿಲ್ ಹೊಸ ಲುಕ್ ವೈರಲ್!

ಖಡ್ಗ ಹಿಡಿದು, ಸಾಂಪ್ರದಾಯಿಕ ಉಡುಗೆ ತೊಟ್ಟು ಮಹಾರಾಣಿಯಂತೆ ಐಪಿಎಸ್​ ಅಧಿಕಾರಿ ಡಿ ರೂಪಾ ಅವರು ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಖಡ್ಗ ಹಿಡಿದು ಮಹಾರಾಣಿಯಂತೆ ಕಂಗೊಳಿಸಿದ ಐಪಿಎಸ್ ಅಧಿಕಾರಿ: ರೂಪಾ ಮೌದ್ಗಿಲ್ ಹೊಸ ಲುಕ್ ವೈರಲ್!
ರೂಪಾ ಮೌದ್ಗಿಲ್
Published On :

ಬೆಂಗಳೂರು: ಖಡ್ಗ ಹಿಡಿದು, ಸಾಂಪ್ರದಾಯಿಕ ಉಡುಗೆ ತೊಟ್ಟು ಮಹಾರಾಣಿಯಂತೆ ಐಪಿಎಸ್​ ಅಧಿಕಾರಿ ಡಿ ರೂಪಾ ಅವರು ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದಸರಾ ಹಾಗೂ ನವರಾತ್ರಿ ಅಂಗವಾಗಿ ರಾಜ್ಯ ಆಂತರಿಕ ಭದ್ರತಾ ವಿಭಾಗದ ಐಜಿಪಿ ಡಿ. ರೂಪಾ ಮೌದ್ಗಿಲ್‌ ಅವರು, ಫೋಟೋಶೂಟ್ ಮಾಡಿಸಿದ್ದು, ಫೋಟೋದಲ್ಲಿ ಮಹಾರಾಣಿಯಂತೆ ಕಂಗೊಳಿಸಿದ್ದಾರೆ.

ಫ್ಯಾಷನ್‌ ಡಿಸೈನರ್‌ ಭಾರ್ಗವಿ ಎಂಬುವವರು ರೂಪಾ ಅವರ ಫೋಟೋಗಳನ್ನು ಹಂಚಿಕೊಂಡಿದ್ದು, ಐಪಿಎಸ್​ ಅಧಿಕಾರಿ ಡಿ ರೂಪಾ ಅವರು ಸವಾಲುಗಳನ್ನು ಎದುರಿಸಿ ಗಟ್ಟಿಯಾಗಿ ನಿಲ್ಲುವ ಎಲ್ಲಾ ಮಹಿಳೆಯರಿಗೂ ಮಾದರಿಯಾಗಿದ್ದಾರೆ. ಶಕ್ತಿ, ಗಾಂಭೀರ್ಯ ಮತ್ತು ಸಬಲೀಕರಣದ ಪ್ರತಿ ರೂಪವಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ, ಅಡೆತಡೆಗಳನ್ನು ಬದಿಗೊತ್ತಿ ಮಹಿಳೆಯರು ಮುನ್ನುತ್ತಿರುವ ಈ ಜಗತ್ತಿನಲ್ಲಿ, ಅಸಾಧಾರಣ ಶಕ್ತಿಯ ರೂಪಕ್ಕೆ ಡಿ ರೂಪಾ ಅವರು ಒಂದು ಉದಾಹಣೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಡಿಯೋ, ಫೋಟೋಗಳು ಕೇವಲ ಫ್ಯಾಷನ್​​ಗಾಗಿ ಅಲ್ಲ, ಇದು ಸಬಲೀಕರಣ, ಸ್ಥಿತಿಸ್ಥಾಪಕತ್ವ ಮತ್ತು ಮಹಿಳೆಯರ ಅಚಲ ಮನೋಭಾವದ ತಿಳಿಸಿಕೊಡುವ ರೂಪವಾಗಿದೆ. ನಿಮ್ಮತನ, ಸ್ವಭಿಯಾನಿಯಾಗಿ ಜಗತ್ತನ್ನೇ ಗೆಲ್ಲಬಹುದು ಎಂಬ ರಿಮೈಂಡರ್ ಆಗಿದೆ ಎಂದಿದ್ದಾರೆ.

ಇಲ್ಲಿ ರೂಪಾ ಅವರು ಶಕ್ತಿ ಮತ್ತು ಸಮಚಿತ್ತದ ನಡುವಿನ ಆಕರ್ಷಕ ಕೇಂದ್ರವಾಗಿ ಕಾಣುತ್ತಾರೆ. ನಿಮ್ಮ ನಡೆ ನುಡಿ ಸತ್ಯವಾಗಿದ್ದರೆ ನೀವು ಯಾವುದೇ ಕ್ಷೇತ್ರವನ್ನು ನಿಮ್ಮದಾಗಿಸಿಕೊಳ್ಳಬಹುದು ಎಂಬ ಆಕರ್ಷಕ ಸಾಲುಗಳನ್ನು ಭಾರ್ಗವಿ ಬರೆದಿದ್ದಾರೆ.

ರೂಪಾ ಅವರ ಹೊಸ ಲುಕ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.