ಜೀವ ರಕ್ಷಕ ಚುಚ್ಚು ಮದ್ದೊಂದಕ್ಕೆ ಆಮದು ತೆರಿಗೆ ವಿನಾಯಿತಿ ನೀಡಲು ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಮನವಿ
ಮಗುವೊಂದರ ಜೀವ ಉಳಿಸುವುದಕ್ಕಾಗಿ ಅತಿ ದುಬಾರಿ ಜೀವ ರಕ್ಷಕ ಚುಚ್ಚು ಮದ್ದೊಂದಕ್ಕೆ ಆಮದು ತೆರಿಗೆ ವಿನಾಯಿತಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಗುವೊಂದರ ಜೀವ ಉಳಿಸುವುದಕ್ಕಾಗಿ ಅತಿ ದುಬಾರಿ ಜೀವ ರಕ್ಷಕ ಚುಚ್ಚು ಮದ್ದೊಂದಕ್ಕೆ ಆಮದು ತೆರಿಗೆ ವಿನಾಯಿತಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
15 ತಿಂಗಳ ಮಗು ಮೌರ್ಯಗೆ, ನರಮಂಡಲದ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ ಬೆನ್ನುಮೂಳೆಯ ಸ್ನಾಯು ಕ್ಷೀಣತೆ (SMA)ಯ ಸಮಸ್ಯೆ ಎದುರಾಗಿದ್ದು, ಈ ಆರೋಗ್ಯ ಸಮಸ್ಯೆಯಿಂದ ಮಗುವನ್ನು ಉಳಿಸುವುದಕ್ಕಾಗಿ ಸುಮಾರು 17.5 ಕೋಟಿ ರೂಪಾಯಿ ಮೌಲ್ಯದ ಜೋಲೊಗೆನ್ಸ್ಮಾ (zologensma) ಎಂಬ ಔಷಧ ನೀಡುವ ಅಗತ್ಯವಿದೆ. ಈ ಔಷಧದ ಬೆಲೆಯೇ ಅತಿ ದುಬಾರಿಯಾಗಿದ್ದು ಅದಕ್ಕೆ ಆಮದು ತೆರಿಗೆ ವಿಧಿಸಿದರೆ ಅದರ ಶುಲ್ಕ ಮತ್ತಷ್ಟು ಹೆಚ್ಚಳವಾಗಲಿದೆ.
ಈ ಹಿನ್ನೆಲೆಯಲ್ಲಿ ಅ.27 ರಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ಮಗುವಿವ ಪೋಷಕರಿಗೆ ದುಬಾರಿ ಔಷಧಿಗೆ ಹೊಂದಿಸುವಷ್ಟು ಹಣ ಇಲ್ಲದ ಕಾರಣ ಆಮದು ತೆರಿಗೆ ವಿನಾಯಿತಿ ಜೊತೆಗೆ ಪಿಎಂ ಕೇರ್ಸ್ ನಿಂದ ಕುಟುಂಬಕ್ಕೆ ನೆರವು ನೀಡುವಂತೆಯೂ ಮನವಿ ಮಾಡಿದ್ದಾರೆ.
SMA ಎಂಬುದು ನರಸ್ನಾಯುಕ ಆನುವಂಶಿಕ ಅಸ್ವಸ್ಥತೆಯಾಗಿದ್ದು, ದೇಹದಲ್ಲಿನ ಸ್ವಯಂಪ್ರೇರಿತ ಸ್ನಾಯುವಿನ ಚಲನೆಯನ್ನು ನಿಯಂತ್ರಿಸುವ ನರ ಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಇದು ತೋಳುಗಳು, ಕಾಲುಗಳು, ಮುಖ, ಎದೆ, ಗಂಟಲು ಮತ್ತು ನಾಲಿಗೆಯಲ್ಲಿನ ನಿಯಂತ್ರಣ ಚಲನೆಯ ಮೇಲೆ ಪರಿಣಾಮ ಬೀರುತ್ತದೆ, ಜೊತೆಗೆ ಮಾತನಾಡುವುದು, ನಡೆಯುವುದು, ನುಂಗುವುದು ಮತ್ತು ಉಸಿರಾಟದಂತಹ ಅಸ್ಥಿಪಂಜರದ ಸ್ನಾಯುವಿನ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


