ರಾಜ್ಯ

ಒಳಮೀಸಲಾತಿಗೆ ವಿರೋಧ; ಬಿಜೆಪಿ ಧ್ವಜ ತೆರವು, ಮುಖಂಡರು ತಾಂಡಾಗಳಿಗೆ ಪ್ರವೇಶಿಸದಂತೆ ತಡೆ

ಬಾಗಲಕೋಟೆ ಭಾಗದ ಹಲವು ಲಂಬಾಣಿ ತಾಂಡಾಗಳಲ್ಲಿ ಸಮುದಾಯದ ಹಲವು ವರ್ಗಗಳ ಯುವ ಮುಖಂಡರು ಬ್ಯಾನರ್‌ಗಳನ್ನು ಕಟ್ಟಿದ್ದು, ಬಿಜೆಪಿ ಮುಖಂಡರ ತಾಂಡಾಗಳ ಪ್ರವೇಶಕ್ಕೆ ತಡೆ ಒಡ್ಡಿದ್ದಾರೆ.

ಒಳಮೀಸಲಾತಿಗೆ ವಿರೋಧ; ಬಿಜೆಪಿ ಧ್ವಜ ತೆರವು, ಮುಖಂಡರು ತಾಂಡಾಗಳಿಗೆ ಪ್ರವೇಶಿಸದಂತೆ ತಡೆ
ಪ್ರತಿಭಟನಾ ನಿರತರು ಬಿಜೆಪಿ ಧ್ವಜಗಳನ್ನು ತೆರವುಗೊಳಿಸಿದರು
Published On :

ಬೆಳಗಾವಿ: ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಘೋಷಿಸಿರುವುದನ್ನು ವಿರೋಧಿಸಿ ಲಂಬಾಣಿ ಸಮುದಾಯ ನಡೆಸುತ್ತಿರುವ ಪ್ರತಿಭಟನೆಯು ಮಂಗಳವಾರ ಬಾಗಲಕೋಟೆಯಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿದೆ. ಬಾಗಲಕೋಟೆ ಭಾಗದ ಹಲವು ಲಂಬಾಣಿ ತಾಂಡಾಗಳಲ್ಲಿ ಸಮುದಾಯದ ಹಲವು ವರ್ಗಗಳ ಯುವ ಮುಖಂಡರು ಬ್ಯಾನರ್‌ಗಳನ್ನು ಕಟ್ಟಿದ್ದು, ಬಿಜೆಪಿ ಮುಖಂಡರ ತಾಂಡಾಗಳ ಪ್ರವೇಶಕ್ಕೆ ತಡೆ ಒಡ್ಡಿದ್ದಾರೆ.

ಬಾಗಲಕೋಟೆ ಸಮೀಪದ ಮುಚ್ಚಂಡಿ ತಾಂಡಾದಲ್ಲಿ ಪ್ರತಿಭಟನಾಕಾರರು ರಾಜ್ಯದ ಬಿಜೆಪಿ ಸರ್ಕಾರದ ನಿರ್ಧಾರವನ್ನು ಖಂಡಿಸಿ ಹಲವಾರು ಕಂಬಗಳು ಮತ್ತು ಮನೆಗಳಲ್ಲಿ ಬಿಜೆಪಿ ಧ್ವಜಗಳನ್ನು ತೆರವುಗೊಳಿಸಿದರು.

ಆಚನೂರ, ನೀಲಾನಗರ, ಜಡ್ರಾಮಕುಂಟಿ, ಲವಲೇಶ್ವರ, ಗುಲ್ಬಾಳ್, ಶಿರಗುಪ್ಪಿ, ಅಮೀನಗಡ, ಕಮತಗಿ, ಬಿಳಗಿ ಸೇರಿದಂತೆ ನಾನಾ ತಾಂಡಾಗಳಿಗೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರವೇಶ ಮಾಡದಂತೆ ತಡೆಯಲು ನಿರ್ಧರಿಸಿ ಬ್ಯಾನರ್‌ ಹಾಕಲಾಗಿದೆ ಮತ್ತು ಬಿಜೆಪಿ ಮುಖಂಡರನ್ನು ತಾಂಡಾ ಪ್ರವೇಶಿಸದಂತೆ ತಡೆಯಲು ಅವುಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಲಂಬಾಣಿ ತಾಂಡಾಗಳ ಹಲವಾರು ಯುವ ಮುಖಂಡರು ತಿಳಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.