ರಾಜ್ಯ

ಕಾರವಾರ: ನದಿಗೆ ಮಗ, ಪತ್ನಿಯನ್ನು ತಳ್ಳಿ ಬಳಿಕ ನೇಣು ಬಿಗಿದುಕೊಂಡು ಉದ್ಯಮಿ ಆತ್ಮಹತ್ಯೆ!

ಕಾರವಾರ ತಾಲೂಕಿನ ಗೋಪಶಿಟ್ಟಾ ಮೂಲದ ಉದ್ಯಮಿ ಶ್ಯಾಮ್ ಪಾಟೀಲ್ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ.

ಕಾರವಾರ: ನದಿಗೆ ಮಗ, ಪತ್ನಿಯನ್ನು ತಳ್ಳಿ ಬಳಿಕ ನೇಣು ಬಿಗಿದುಕೊಂಡು ಉದ್ಯಮಿ ಆತ್ಮಹತ್ಯೆ!
ಸಾಂದರ್ಭಿಕ ಚಿತ್ರ
Published On :

ಕಾರವಾರ: ಕಾರವಾರ ತಾಲೂಕಿನ ಗೋಪಶಿಟ್ಟಾ ಮೂಲದ ಉದ್ಯಮಿ ಶ್ಯಾಮ್ ಪಾಟೀಲ್ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ. 

40 ವರ್ಷದ ಶ್ಯಾಮ್ ಪಾಟೀಲ್ ಗೋವಾದ ವೆರ್ಣಾ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಪೂರೈಕೆ ಉದ್ಯಮ ನಡೆಸುತ್ತಿದ್ದರು. ಆದರೆ ಕಳೆದ ರಾತ್ರಿ ಪತ್ನಿ 37 ವರ್ಷದ ಜ್ಯೋತಿ ಪಾಟೀಲ್, ಮಗ 12 ವರ್ಷದ ಧಕ್ಷ್ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೋಡಿಬಾಗದಲ್ಲಿರುವ ಕಾಳಿ ನದಿಗೆ ಜ್ಯೋತಿ ಪಾಟೀಲ್ ಮತ್ತು ಧಕ್ಷ್ ಪಾಟೀಲ್ ರನ್ನು ತಳ್ಳಿದ ನಂತರ ಶ್ಯಾಮ್ ಪಾಟೀಲ್ ಅಲ್ಲಿಂದ 60 ಕಿ.ಮೀ ದೂರದಲ್ಲಿರುವ ಗೋವಾದ ಪಾಡಿ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. 

ತಾಯಿ ಮತ್ತು ಮಗನ ಮೃತದೇಹ ದೇವಬಾಗ ಕಡಲತೀರದಲ್ಲಿ ಪತ್ತೆಯಾಗಿದ್ದರೆ ಶ್ಯಾಮ್ ಮೃತದೇಹ ಪಾಟಿ ಅರಣ್ಯ ಪ್ರದೇಶದಲ್ಲಿ ಸಿಕ್ಕಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಚಿತ್ತಾಕುಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.