ವ್ಯವಸ್ಥಿತ ಸೈಬರ್ ಕ್ರೈಮ್ ದಂಧೆ ಬೇಧಿಸಿದ ಪೊಲೀಸರು: ಅಸ್ಸಾಂ ಮೂಲದ ಇಬ್ಬರ ಬಂಧನ
ವ್ಯವಸ್ಥಿತ ಸೈಬರ್ ಕ್ರೈಂ ದಂಧೆಯೊಂದನ್ನು ಮೈಸೂರು ಪೊಲೀಸರು ಭೇದಿಸಿದ್ದು, ಅಸ್ಸಾಂ ಮೂಲದ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಮೈಸೂರು: ವ್ಯವಸ್ಥಿತ ಸೈಬರ್ ಕ್ರೈಂ ದಂಧೆಯೊಂದನ್ನು ಮೈಸೂರು ಪೊಲೀಸರು ಭೇದಿಸಿದ್ದು, ಅಸ್ಸಾಂ ಮೂಲದ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸೀಮಾ ಲಾಟ್ಕರ್ ಅವರು, ಕಳೆದ ವರ್ಷ ಅಕ್ಟೋಬರ್ನಲ್ಲಿ ನಂಜನಗೂಡಿನ ಬದನವಾಳು ಗ್ರಾಮದ ಹಿಮಾ ಶ್ವೇತಾ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಮ್ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಅರೋಪಿಗಳು ಇನ್ ಸ್ಟಾಗ್ರಾಂ ಮೂಲಕ ಜರನ್ನು ಮಾಡಿಕೊಂಡು ವಾಟ್ಸಾಪ್ ಚಾಟಿಂಗ್ ಮೂಲಕ ಬೆಳೆ ಬಾಳುವ ಗಿಫ್ಟ್ ಕಳುಹಿಸುವುದಾಗಿ ನಂಬಿಸುತ್ತಿದ್ದರು. ನಂತರ ಲಕ್ಷಾಂತರ ಹಣ ಪಡೆದುಕೊಂಡು ವಂಚಿಸುತ್ತಿದ್ದರು. ಇದೇ ರೀತಿ ನಂಜನಗೂಡು ತಾಲೂಕು ಬದನವಾಳು ಗ್ರಾಮದ ಹಿಮಶ್ನೇತಾ ಎಂಬವವರಿಗೆ ರಾಬರ್ಟ್ ಎಡ್ಗರ್ ಎಂಬ ಹೆಸರಿನಲ್ಲಿ ಪರಿಚಿತನಾದ ಆರೋಪಿ, ತಾನು ಯುಕೆಯಲ್ಲಿದ್ದು, ಐಫೋನ್ ಹಾಗೂ ಇತರೆ ಬೆಲೆ ಬಾಳುವ ವಸ್ತುಗಳನ್ನು ಗಿಫ್ಟ್ ನೀಡುತ್ತಿದ್ದು, ದೆಹಲಿ ವಿಮಾನ ನಿಲ್ದಾಣದಿಂದ ಕರೆ ಬಂದಾಗ ಅವರ ಖಾತೆಗೆ ಹಣ ಹಾಕಿ ಪಡೆದುಕೊಳ್ಳುವಂತೆ ನಂಬಿಸಿದ್ದಾನೆ. ಬಳಿಕ ಆತ ಹೇಳಿದ ಖಾತೆಗೆ ವಿವಿಧ ದಿನಾಂಕಗಗಳಲ್ಲಿ ರೂ.4.77 ಲಕ್ಶ ಹಣವನ್ನು ಪಾವತಿಸಿದ್ದರೂ ಯಾವುದೇ ಗಿಫ್ಟ್ ಬಾರದ ಹಿನ್ನೆಲೆಯಲ್ಲಿ ತಾನು ಮೋಸ ಹೋಗಿರುವ ಬಗಗೆ ಕಳೆದ 2022ರ ಅಕ್ಟೋಬರ್ ತಿಂಗಳಿನಲ್ಲಿ ಮೈಸೂರು ಜಿಲ್ಲಾ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಗೆ ಮಾರ್ಗದರ್ಶನ ನೀಡಿ ಎಲ್ಲಾ ಹಣವನ್ನು ಪಡೆಯುತ್ತಿದ್ದ ನೈಜರಿಯಾ ಪ್ರಜೆ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ನೈಜೀರಿಯಾ ಪ್ರಜೆಯೊಂದಿಗೆ ಸ್ನೇಹ ಬೆಳೆಸಿಕೊಂಡು, ತಮಗೆ ಪರಿಚಯವಿದ್ದವರ ವಿಳಾಸ ಹಾಗೂ ಐಡಿ ಕಾರ್ಡ್ ಗಳನ್ನು ನೀಡಿದ್ದಾರೆ. ಬಳಿಕ ವಿವಿಧ ಹೆಸರುಗಳಲ್ಲಿ 39ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಬಂಧಿತ ಆರೋಪಿಗಳು ಈ ಖಾತೆಗಳಿಗೆ ಹಣವನ್ನು ಜಮಾ ಮಾಡುತ್ತಿದ್ದು, ಇವುಗಳ ಎಟಿಎಂ ಕಾರ್ಡ್ಗಳು ಮತ್ತು ಪಾಸ್ಬುಕ್ಗಳನ್ನು ನೈಜೀರಿಯನ್ ಪ್ರಜೆ ನಿರ್ವಹಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಆರೋಪಿಗಳು ನಡೆಸಿರುವ ಇತರ ವಂಚನೆಗಳ ವಿವರಗಳನ್ನು ಪೊಲೀಸರು ಪತ್ತೆ ಮಾಡುತ್ತಿದ್ದು, ಪ್ರಸ್ತುತ ಬಂಧಿ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


