ರಾಜ್ಯ

ಗದಗ: ಬೈಕ್ ಗಳ ನಡುವೆ ಡಿಕ್ಕಿ, ಕೆಳಗೆ ಬಿದ್ದ ಸವಾರರ ಮೇಲೆ ಲಾರಿ ಹರಿದು, ಇಬ್ಬರ ದುರ್ಮರಣ!

ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ನಿಯಂತ್ರಣ ತಪ್ಪಿ ಬೈಕ್ ನಿಂದ ಕೆಳಗೆ ಬಿದ್ದವರ ಮೇಲೆ ಲಾರಿ ಹರಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಗದಗ: ಬೈಕ್ ಗಳ ನಡುವೆ ಡಿಕ್ಕಿ, ಕೆಳಗೆ ಬಿದ್ದ ಸವಾರರ ಮೇಲೆ ಲಾರಿ ಹರಿದು, ಇಬ್ಬರ ದುರ್ಮರಣ!
ಸಾಂದರ್ಭಿಕ ಚಿತ್ರ
Published On :

ಗದಗ: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ನಿಯಂತ್ರಣ ತಪ್ಪಿ ಬೈಕ್ ನಿಂದ ಕೆಳಗೆ ಬಿದ್ದವರ ಮೇಲೆ ಲಾರಿ ಹರಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. 
 
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.  ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ನಿವಾಸಿಗಳಾದ ಅಲ್ಲಾಸಾಬ್ ನಧಾಪ್, ರಂಜಾನ್ ಬೇಗಂ ಮೃತ ದುರ್ದೈವಿಗಳು.

ಇನ್ನು ಮತ್ತೊಂದು ಬೈಕ್ ನಲ್ಲಿದ್ದ ಲಲಿತಾ ಹಂಚಿನಾಳ, ಅಪ್ಪಣ್ಣ ಕವಲೂರು ಗಾಯಾಳುಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಕೊಪ್ಪಳ ಜಾತ್ರೆ ಮುಗಿಸಿಕೊಂಡು ಗದಗ ತಾಲೂಕಿನ ಕಣಗಿನಹಾಳಕ್ಕೆ ತೆರಳುತ್ತಿದ್ದಾಗ ಬೈಕ್‌ ಗಳ ನಡುವೆ ಡಿಕ್ಕಿಯಾಗಿತ್ತು.

ಅಪಘಾತದ ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.