ರಾಜ್ಯ

ಚಂದ್ರಯಾನ-3: ರೋವರ್ ಪ್ರಗ್ಯಾನ್​​ಗೆ ಎದುರಾಯ್ತು ದೊಡ್ಡ ಕುಳಿ, ಮಾರ್ಗ ಬದಲಿಸಿದ ಇಸ್ರೋ

ಚಂದಿರನ ಅಂಗಳದ ಸಂಚರಿಸುತ್ತಿರುವ ಚಂದ್ರಯಾನ-3 ಯೋಜನೆಯ ಪ್ರಗ್ಯಾನ್ ರೋವರ್ ಗೆ ನಾಲ್ಕು ಮೀಟರ್ ವ್ಯಾಸದ ದೊಡ್ಡ ಕುಳಿಯೊಂದು ಎದುರಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಸೋಮವಾರ...

ಚಂದ್ರಯಾನ-3: ರೋವರ್ ಪ್ರಗ್ಯಾನ್​​ಗೆ ಎದುರಾಯ್ತು ದೊಡ್ಡ ಕುಳಿ, ಮಾರ್ಗ ಬದಲಿಸಿದ ಇಸ್ರೋ
ರೋವರ್‌ನ ಬದಲಾದ ಮಾರ್ಗದ ಫೋಟೋ
Published On :

ಬೆಂಗಳೂರು: ಚಂದಿರನ ಅಂಗಳದ ಸಂಚರಿಸುತ್ತಿರುವ ಚಂದ್ರಯಾನ-3 ಯೋಜನೆಯ ಪ್ರಗ್ಯಾನ್ ರೋವರ್ ಗೆ ನಾಲ್ಕು ಮೀಟರ್ ವ್ಯಾಸದ ದೊಡ್ಡ ಕುಳಿಯೊಂದು ಎದುರಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಸೋಮವಾರ ತಿಳಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಇಸ್ರೋ, "ಚಂದ್ರಯಾನ-3 ಮಿಷನ್: ಆಗಸ್ಟ್ 27, 2023 ರಂದು ರೋವರ್ ಗೆ ತನ್ನ ಸ್ಥಳದಿಂದ 3 ಮೀಟರ್ ದೂರದಲ್ಲಿ 4 ಮೀಟರ್ ವ್ಯಾಸದ ಕುಳಿ ಇರುವುದನ್ನು ಗುರುತಿಸಿದೆ. ಹೀಗಾಗಿ, ರೋವರ್‌ನ ಪಥ ಬದಲಾವಣೆಗೆ ಇಸ್ರೋ ನಿಯಂತ್ರಣ ಕೊಠಡಿ ಸೂಚನೆ ರವಾನಿಸಿತು ಎಂದು ಹೇಳಿದೆ.

ರೋವರ್ ಈಗ ಸುರಕ್ಷಿತವಾಗಿ ಹೊಸ ಹಾದಿಯಲ್ಲಿ ಸಾಗುತ್ತಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಇಂದು ಮಧ್ಯಾಹ್ನ ಇಸ್ರೋ ನಿಯಂತ್ರಣ ಕೊಠಡಿಗೆ ಪ್ರಗ್ಯಾನ್ ರೋವರ್ ತನಗೆ ಗುಂಡಿಯೊಂದು ಎದುರಾಗಿರುವ ಕುರಿತು ಮಾಹಿತಿ ನೀಡಿತ್ತು. ಆ ನಂತರ ಸಕ್ರಿಯರಾದ ತಜ್ಞರ ತಂಡ ರೋವರ್‌ಗೆ ಹೊಸ ಮಾರ್ಗವನ್ನು ಸೂಚಿಸಿದೆ. ನಂತರ ರೋವರ್‌ನ ಬದಲಾದ ಮಾರ್ಗದ ಫೋಟೋ ಸಮೇತ ಇಸ್ರೋ ಸಾರ್ವಜನಿಕರಿಗೆ ಮಾಹಿತಿ ನೀಡಿದೆ.

ಒಂದು ಚಂದ್ರನ ದಿನ ಪೂರ್ಣಗೊಳ್ಳಲು ಕೇವಲ 10 ದಿನಗಳು ಮಾತ್ರ ಬಾಕಿ ಉಳಿದಿವೆ. ಚಂದ್ರಯಾನ -3 ರ ರೋವರ್ ಮಾಡ್ಯೂಲ್ ಪ್ರಗ್ಯಾನ್ ಚಂದ್ರನ ಮೇಲ್ಮೈಯಲ್ಲಿ ಚಲಿಸುತ್ತಿದೆ. ಇದು ಸಮಯದ ವಿರುದ್ಧದ ಓಟ. ಆರು ಚಕ್ರಗಳ ರೋವರ್ ದಕ್ಷಿಣ ಧ್ರುವದ ಗರಿಷ್ಠ ದೂರವನ್ನು ಕ್ರಮಿಸುವಂತೆ ಮಾಡಲು ಇಸ್ರೋ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರ(ಎಸ್‌ಎಸಿ)ದ ನಿರ್ದೇಶಕ ನಿಲೇಶ್ ಎಂ ದೇಸಾಯಿ ಅವರು ಭಾನುವಾರ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.