ಮಕ್ಕಳಲ್ಲಿ ಹೆಚ್ಚಿದ ಡೆಂಗ್ಯೂ, ನ್ಯುಮೋನಿಯಾ: ಕೋವಿಡ್ ಎಫೆಕ್ಟ್ ಎಂದ ವೈದ್ಯರು
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಡೆಂಗ್ಯೂ, ನ್ಯೂಮೋನಿಯಾ ಸೋಂಕುಗಳು ಹೆಚ್ಚಾಗುತ್ತಿದ್ದು, ಕೋವಿಡ್ ಸಾಂಕ್ರಾಮಿಕ ರೋಗವೇ ಇದಕ್ಕೆ ಕಾರಣ ಎಂದು ವೈದ್ಯರು ಹೇಳಿದ್ದಾರೆ.

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಡೆಂಗ್ಯೂ, ನ್ಯೂಮೋನಿಯಾ ಸೋಂಕುಗಳು ಹೆಚ್ಚಾಗುತ್ತಿದ್ದು, ಕೋವಿಡ್ ಸಾಂಕ್ರಾಮಿಕ ರೋಗವೇ ಇದಕ್ಕೆ ಕಾರಣ ಎಂದು ವೈದ್ಯರು ಹೇಳಿದ್ದಾರೆ.
ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಮಕ್ಕಳು ಹೊರಗೆ ಬರುತ್ತಿರಲಿಲ್ಲ. ಇದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದ್ದು, ಹಿಗಾಗಿಯೇ ಮಕ್ಕಳಲ್ಲಿ ಡೆಂಗ್ಯೂ, ನ್ಯುಮೋನಿಯಾ ಸೇರಿದಂತೆ ಇತರೆ ಸೋಂಕುಗಳು ತಗುಲುವುದು ಹೆಚ್ಚಾಗುತ್ತಿದೆ ಎಂದು ಶಿಶು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಸಕ್ರಾ ವರ್ಲ್ಡ್ ಆಸ್ಪತ್ರೆಯ ಹಿರಿಯ ಸಲಹೆಗಾರ (ಪೀಡಿಯಾಟ್ರಿಕ್ಸ್ ಮತ್ತು ನಿಯೋನಾಟಾಲಜಿ) ಡಾ ರಜತ್ ಆತ್ರೇಯ ಅವರು ಮಾತನಾಡಿ, ಕೋವಿಡ್ ಸಾಂಕ್ರಾಮಿಕ ರೋಗವು ಮಕ್ಕಳು ಹೊರಗೆ ಬಾರದಂತೆ, ಸೋಂಕುಗಳಿಗೆ ಒಡ್ಡಿಕೊಳ್ಳದಂತೆ ಮಾಡಿತ್ತು. ಇದರಿಂದಾಗಿ ಮಕ್ಕಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಿಲ್ಲ. 2-3 ವಾರಗಳಿಗೊಮ್ಮೆ ಶುರುವಾಗುವ ವೈರಸ್ ಗಳು ಮಕ್ಕಳ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.
ಕಳೆದ ಕೆಲವು ವಾರಗಳಿಂದ ಆಸ್ಪತ್ರೆಗೆ ಮಕ್ಕಳು ಬರುತ್ತಿರುವ ಸಂಖ್ಯೆಯಲ್ಲಿ ಹೆಚ್ಚಳವಾಗಿವೆ. ಪ್ರತಿದಿನ ಸರಾಸರಿ ಹತ್ತು ಮಕ್ಕಳು ಡೆಂಗ್ಯೂನಿಂದ ಬಳಲುತ್ತಿರುವುದು ಕಂಡು ಬರುತ್ತಿದೆ. ಈ ಪೈಕಿ ಇಬ್ಬರು ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರ ಜೊತೆಗೆ ಪ್ರತಿದಿನ ಐದರಿಂದ ಹತ್ತು ನ್ಯುಮೋನಿಯಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಒಂದು ಅಥವಾ ಎರಡು ಪ್ರಕರಣಗಳಿಗೆ ದಾಖಲಾತಿ ಅಗತ್ಯವಾಗುತ್ತಿದೆ.
ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳು ಅಡೆನೊವೈರಸ್ ಮತ್ತು ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV) ಪ್ರಕರಣಗಳು ಹೆಚ್ಚಾಗಲು ಕಾರಣವಾಗಿವೆ. ಕೋವಿಡ್ ಗೂ ಮೊದಲು ಮಕ್ಕಳಲ್ಲಿ ಸೋಂಕಿನ ತೀವ್ರತೆ ತುಂಬಾ ಸೌಮ್ಯವಾಗಿರುತ್ತಿದ್ದವು. ಆದರೀಗ, ಅತೀವ್ರ ಜ್ವರ, ಕೆಮ್ಮು, ಉಸಿರಾಟ ಸಮಸ್ಯೆಗಳ ತೀವ್ರ ರೋಗಲಕ್ಷಣಗಳು ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಡೆಂಗ್ಯೂ ಜ್ವರ (ಕುಶಲವೇ ಕ್ಷೇಮವೇ)
ಕೆಸಿ ಜನರಲ್ ಆಸ್ಪತ್ರೆಯ ಹಿರಿಯ ಮಕ್ಕಳ ತಜ್ಞ ಡಾ ಎಸ್‌ಆರ್ ಲಕ್ಷ್ಮೀಪತಿ ಅವರು ಮಾತನಾಡಿ, ಜುಲೈ ಮಧ್ಯದಿಂದ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಗಳು ಕಂಡು ಬರುತ್ತಿವೆ. ಮಕ್ಕಳ ಒಪಿಡಿ ವಿಭಾಗಕ್ಕೆ ಪ್ರತಿ ದಿನ ಬರುತ್ತಿರುವ ಒಟ್ಟು 150 ರೋಗಿಗಳ ಪೈಕಿ 50 ಮಂದಿ ಡೆಂಗ್ಯೂ ಸೋಂಕಿನಿಂದ ಬಳಲುತ್ತಿರುವುದು ಕಂಡು ಬರುತ್ತಿದೆ. 36 ಹಾಸಿಗೆಗಳುಳ್ಳ ಮಕ್ಕಳ ವಿಭಾಗವು ಶೇ.50ರಷ್ಟು ಈಗಾಗಲೇ ಭರ್ತಿಯಾಗಿವೆ. ಉಳಿದ ಹಾಸಿಗೆಯಲ್ಲಿ ನ್ಯುಮೋನಿಯಾ ಸೋಂಕಿಗೊಳಗಾಗಿರುವ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


