ರಾಜ್ಯ

ಟಿವಿ ರಿಮೋಟ್‌ಗಾಗಿ ಜಗಳ: ತಂದೆಯ ಕೋಪಕ್ಕೆ ಮಗ ಬಲಿ

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಟಿವಿ ರಿಮೋಟ್‌ಗಾಗಿ ನಡೆದ ಜಗಳದಲ್ಲಿ ತಂದೆ ಎಸೆದ ಕತ್ತರಿ ಗಂಟಲು ಸೀಳಿದ ಪರಿಣಾಮ 16 ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಟಿವಿ ರಿಮೋಟ್‌ಗಾಗಿ ಜಗಳ: ತಂದೆಯ ಕೋಪಕ್ಕೆ ಮಗ ಬಲಿ
ಸಾಂದರ್ಭಿಕ ಚಿತ್ರ
Published On :

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಟಿವಿ ರಿಮೋಟ್‌ಗಾಗಿ ನಡೆದ ಜಗಳದಲ್ಲಿ ತಂದೆ ಎಸೆದ ಕತ್ತರಿ ಗಂಟಲು ಸೀಳಿದ ಪರಿಣಾಮ 16 ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಬಾಲಕನ ಗಂಟಲಿಗೆ ಕತ್ತರಿ ಚುಚ್ಚಿದ್ದು, ರಕ್ತಸ್ರಾವವಾಗಿ ಆತ ಸಾವನ್ನಪ್ಪಿದ್ದಾನೆ. ಮೃತನನ್ನು ಆರೋಪಿ ಲಕ್ಷ್ಮಣ್ ಬಾಬುರ ಹಿರಿಯ ಪುತ್ರ ಚಂದ್ರಶೇಖರ್ ಎಂದು ಗುರುತಿಸಲಾಗಿದೆ.

ಚಂದ್ರಶೇಖರ್ ಮತ್ತು ಆತನ ಸಹೋದರ ಪವನ್ ಕುಮಾರ್(14) ಟಿವಿ ಶೋ ವೀಕ್ಷಿಸಲು ರಿಮೋಟ್ ಗಾಗಿ ಜಗಳವಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಪಾರ್ಶ್ವವಾಯು ರೋಗಿಯ ಲಕ್ಷ್ಮಣ್ ಬಾಬು ಚಂದ್ರಶೇಖರ್ ಮೇಲೆ ಕತ್ತರಿ ಎಸೆದಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಚಂದ್ರಶೇಖರ್ ನನ್ನು ಆತನ ತಾಯಿ ಲಕ್ಷ್ಮಿ ಮೊಳಕಾಲ್ಮೂರಿನ ತಾಲೂಕು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿನ ವೈದ್ಯರು ಚಂದ್ರಶೇಖರ್ ನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿದರು.

ಬಳ್ಳಾರಿಗೆ ತೆರಳುವ ಮಾರ್ಗ ಮಧ್ಯೆ ಚಂದ್ರಶೇಖರ್ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲಕ್ಷ್ಮಣ್ ಬಾಬು ಅವರನ್ನು ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.