ಮಾಜಿ ಸಚಿವ ಹೆಚ್ ಡಿ ರೇವಣ್ಣ ಆಪ್ತನ ಮೇಲೆ ಅನಾಮಿಕ ದುಷ್ಕರ್ಮಿಗಳಿಂದ ದಾಳಿ ಯತ್ನ
ಜೆಡಿಎಸ್ ನ ರಾಷ್ಟ್ರಾಧ್ಯಕ್ಷ ಹೆಚ್ ಡಿ ದೇವೇಗೌಡ ತವರಿನಲ್ಲಿ ಹೆಚ್ ಡಿ ರೇವಣ್ಣ ಅವರ ಆಪ್ತರ ಮೇಲೆ ನಿರಂತರ ದಾಳಿ ಯತ್ನಗಳು ನಡೆಯುತ್ತಿವೆ.

ಹಾಸನ: ಜೆಡಿಎಸ್ ನ ರಾಷ್ಟ್ರಾಧ್ಯಕ್ಷ ಹೆಚ್ ಡಿ ದೇವೇಗೌಡ ತವರಿನಲ್ಲಿ ಹೆಚ್ ಡಿ ರೇವಣ್ಣ ಅವರ ಆಪ್ತರ ಮೇಲೆ ನಿರಂತರ ದಾಳಿ ಯತ್ನಗಳು ನಡೆಯುತ್ತಿವೆ.
ರೇವಣ್ಣ ಆಪ್ತ ಅಶ್ವತ್ಥ್ ಗೌಡ ಮೇಲೆ ಹೊಳೆನರಸಿಪುರದಿಂದ 7 ಕಿ.ಮೀ ದೂರದಲ್ಲಿ ಸೂರನಹಳ್ಳಿ ಎಂಬ ಪ್ರದೇಶದಲ್ಲಿ ದಾಳಿ ಯತ್ನ ನಡೆದಿದೆ. ಈ ಘಟನೆ ನಡೆದಾಗ ಅಶ್ವತ್ಥ್ ಗೌಡ ರೇವಣ್ಣ ಅವರನ್ನು ಮನೆಗೆ ಬಿಟ್ಟು ತಮ್ಮ ಊರು ಚೆನ್ನರಾಯಪಟ್ಟಣಕ್ಕೆ ವಾಪಸ್ ತೆರಳುತ್ತಿದ್ದರು. ಮಂಗಳವಾರ ರಾತ್ರಿ 8 ಗಂಟೆಗೆ ಈ ಘಟನೆ ನಡೆದಿದೆ.
ದ್ವಿಚಕ್ರ ವಾಹನದಲ್ಲಿ ಆಗಮಿಸಿದ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ವಿಂಡ್ ಶೀಲ್ಡ್ ನ್ನು ಪುಡಿಮಾಡಿದ್ದಾರೆ. ಅಶ್ವತ್ಥ್ ಗೌಡ ಘಟನೆಯಲ್ಲಿ ಪವಾಡ ಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ದುಷ್ಕರ್ಮಿಗಳು ದ್ವಿಚಕ್ರವಾಹನದಲ್ಲಿ ಅಶ್ವತ್ಥ್ ಅವರನ್ನು 2 ಕಿ.ಮೀ ವರೆಗೆ ಹಿಂಬಾಲಿಸಿದ್ದಾರೆ.
ಅಶ್ವಥ್ ಗೌಡ ಚನ್ನರಾಯಪಟ್ಟಣ ಠಾಣೆಗೆ ತೆರಳಿ ನಾಲ್ವರು ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಯ ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು. ಹೆಚ್.ಡಿ.ರೇವಣ್ಣ ಅವರ ಆಪ್ತರಲ್ಲಿ ಒಬ್ಬರಾದ ಕೃಷ್ಣೇಗೌಡ ಅವರನ್ನು ಎರಡು ತಿಂಗಳ ಹಿಂದೆ ಕೈಗಾರಿಕಾ ಬೆಳವಣಿಗೆ ಕೇಂದ್ರ ಹಾಸನದಲ್ಲಿ ಕೊಚ್ಚಿ ಕೊಲೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


