ರೈಲ್ವೇ ಮಂಡಳಿ ಅಧಿಕಾರಿಗಳಿಂದ ಬೆಂಗಳೂರು ಉಪನಗರ ರೈಲು ಯೋಜನೆ ಸೇರಿ ಹಲವು ಯೋಜನೆಗಳ ಪರಿಶೀಲನೆ
ಬೆಂಗಳೂರು ಉಪನಗರ ರೈಲು ಯೋಜನೆ ಸೇರಿದಂತೆ ನಗರದ ಇತರೆ ರೈಲ್ವೇ ಯೋಜನೆಗಳನ್ನು ರೈಲ್ವೆ ಮಂಡಳಿಯ ಸದಸ್ಯರಾದ (ಮೂಲಸೌಕರ್ಯ) ರೂಪ್ ನಾರಾಯಣ ಸುಂಕರ್ ಅವರು ಶುಕ್ರವಾರ ಪರಿಶೀಲನೆ ನಡೆಸಿದರು.

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆ ಸೇರಿದಂತೆ ನಗರದ ಇತರೆ ರೈಲ್ವೇ ಯೋಜನೆಗಳನ್ನು ರೈಲ್ವೆ ಮಂಡಳಿಯ ಸದಸ್ಯರಾದ (ಮೂಲಸೌಕರ್ಯ) ರೂಪ್ ನಾರಾಯಣ ಸುಂಕರ್ ಅವರು ಶುಕ್ರವಾರ ಪರಿಶೀಲನೆ ನಡೆಸಿದರು.
ಯೋಜನೆಗಳಿಗೆ ಅಗತ್ಯವಿರುವ ನಿರ್ದಿಷ್ಠ ಭೂ ಲಭ್ಯತೆ ಸಮಸ್ಯೆಗಳ ಪರಿಹರಿಸುವಂತೆ ಬೆಂಗಳೂರು ರೈಲ್ವೇ ವಿಭಾಗ ಮತ್ತು ಉಪನಗರ ರೈಲು ಯೋಜನೆಯ ಕಾಮಗಾರಿ ನಡೆಸುತ್ತಿರುವ ನೋಡಲ್ ಏಜೆನ್ಸಿ ಗಳಿಗೆ ಸೂಚಿಸಲಾಗಿದೆ. ಉಪನಗರ ಯೋಜನೆಯ ಮಾರ್ಗದಲ್ಲಿ 11 ರೈಲ್ವೆ ಕ್ರಾಸಿಂಗ್‌ಗಳಿವೆ. ಕೆಳಸೇತುವೆಗಳನ್ನು ನಿರ್ಮಿಸುವ ಮೂಲಕ ಅವುಗಳನ್ನು ತೆಗೆಯಬೇಕಿದೆ. ರೈಲುಗಳು ಅಡೆತಡೆಗಳಿಲ್ಲದೆ ನಿಯಮಿತವಾಗಿ ಸಂಚರಿಸಲಿದ್ದು, ಈ ಕಾರ್ಯ ವಿಳಂಬವಾಗುವ ಸಾಧ್ಯತೆಗಳಿವೆ. ಲೆವೆಲ್ ಕ್ರಾಸಿಂಗ್ ಅನ್ನು ಸಹ ಬದಲಾಯಿಸಬೇಕಾಗಿದೆ ಎಂದು ರೂಪ್ ನಾರಾಯಣ ಸುಂಕರ್ ಅವರು ಹೇಳಿದ್ದಾರೆ.
ಇದೇ ವೇಳೆ ರೈಲ್ವೇ ಮಂಡಳಿ ಸದಸ್ಯರು ಪುನರಾಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಕಂಟೋನ್ಮೆಂಟ್ ಮತ್ತು ಯಶವಂತಪುರ ನಿಲ್ದಾಣಗಳನ್ನೂ ಪರಿಶೀಲಿಸಿದರು.
ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಕುರಿತು ಮಾತನಾಡಿದ ಸುಂಕರ್ ಅವರು, ಕಾಮಗಾರಿ ಕಾರ್ಯಕ್ರಮಗಳು ಪ್ರಗತಿಯಲ್ಲಿದೆ. ಡಿಸೆಂಬರ್ 2026 ರೊಳಗೆ ಈ ಕಾರ್ಯ ಪೂರ್ಣಗೊಳ್ಳಲಿದೆ. ಯಶವಂತಪುರ ರೈಲು ನಿಲ್ದಾಣದಲ್ಲಿ ಕೆಲವು ಅಡೆತಡೆಗಳು ಇದ್ದು, ಅವುಗಳು ಇದೀಗ ದೂರಾಗಿವೆ ಎಂದು ತಿಳಿಸಿದರು.
ಯೋಜನೆಗಳ ಪರಿಶೀಲನೆ ಬಳಿಕ ಉನ್ನತ ರೈಲ್ವೇ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸುಂಕರ್ ಅವರು, ಸುರಕ್ಷತೆಗೆ ಒತ್ತು ನೀಡುವ ಮೂಲಕ ಅಗತ್ಯವಿರುವ ಮೂಲಸೌಕರ್ಯಗಳ ಒದಗಿಸಲು ಎಲ್ಲಾ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


