ರಾಜ್ಯ

ಉಡುಪಿಯಲ್ಲೊಂದು ಘೋರ ದುರಂತ: ಆಟವಾಡುತ್ತಿದ್ದಾಗ ಕಳಚಿ ಬಿದ್ದ ಗೇಟ್‌; 3 ವರ್ಷದ ಮಗು ಸಾವು

ಗೆಸ್ಟ್‌ ಹೌಸ್‌ ಒಂದರ ಗೇಟ್‌ ಕಳಚಿ ಬಿದ್ದು ಆಲ್ಲೇ ಆಟವಾಡುತ್ತಿದ್ದ ಮಗು ದಾರುಣವಾಗಿ ಪ್ರಾಣ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿಯಲ್ಲೊಂದು ಘೋರ ದುರಂತ: ಆಟವಾಡುತ್ತಿದ್ದಾಗ ಕಳಚಿ ಬಿದ್ದ ಗೇಟ್‌; 3 ವರ್ಷದ ಮಗು ಸಾವು
ಸಾಂದರ್ಭಿಕ ಚಿತ್ರ
Published On :

ಉಡುಪಿ: ಗೆಸ್ಟ್‌ ಹೌಸ್‌ ಒಂದರ ಗೇಟ್‌ ಕಳಚಿ ಬಿದ್ದು ಆಲ್ಲೇ ಆಟವಾಡುತ್ತಿದ್ದ ಮಗು ದಾರುಣವಾಗಿ ಪ್ರಾಣ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕರೆಯಲ್ಲಿ ಘಟನೆ ನಡೆದಿದ್ದು ಸುಧೀರ್ ಮೊಗವೀರ ಅವರ ಪುತ್ರ ಸುಶಾಂತ್ (3) ಮೃತಪಟ್ಟ ಮಗು. ಪುಟ್ಟ ಮಗು ಸುಶಾಂತ್‌ ಪ್ರತಿನಿತ್ಯವೂ ಮನೆಯ ಪಕ್ಕದ ಗೆಸ್ಟ್ ಹೌಸ್ ಬಳಿ ಆಟವಾಡುತ್ತಿದ್ದ. ಮಂಗಳವಾರ ಅಚಾನಕ್‌ ಆಗಿ ಗೆಸ್ಟ್‌ ಹೌಸ್‌ನ ಗೇಟ್‌ ಕಳಚಿ ಬಿದ್ದಿದ್ದು, ಆಟವಾಗುತ್ತಿದ್ದ ಮಗುವಿನ ಮೇಲೆ ಬಿದ್ದಿದೆ.

ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದು ಬದುಕುಳಿಯಲಿಲ್ಲ. ಗೆಸ್ಟ್ ಹೌಸ್ ನವರ ಬೇಜವಾಬ್ದಾರಿತನದ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.