ರಾಜ್ಯ

'ರಾಹುಲ್ ಗಾಂಧಿಯವರ ಹೇಳಿಕೆಯ‌ನ್ನು ಗುರಾಣಿಯಾಗಿಸಿಕೊಂಡು ಸ್ವಪಕ್ಷೀಯರ ವಿರೋಧ ತಪ್ಪಿಸಿಕೊಳ್ಳಲು ಹವಣಿಸುತ್ತಿದ್ದೀರಿ'

ಮಾನ್ಯ ಸಿದ್ದರಾಮಯ್ಯನವರೇ, ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಗಣತಿ ವರದಿ ಸ್ವೀಕಾರದ ವಿಚಾರದಲ್ಲಿ ನೀವು ದಿನಕ್ಕೊಂದು ನಿಲುವು ತಾಳುವುದನ್ನು ನಿಲ್ಲಿಸಿ. ವರದಿ ಸ್ವೀಕರಿಸುವ ವಿಚಾರದಲ್ಲಿ ನನ್ನ ನಿಲುವು ಅಚಲ ಎಂದು ಪ್ರತಿಪಾದಿಸುತ್ತಲೇ ನೀವು ಗೊಂದಲ ಸೃಷ್ಟಿ ಮಾಡುತ್ತಿದ್ದೀರಿ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.

'ರಾಹುಲ್ ಗಾಂಧಿಯವರ ಹೇಳಿಕೆಯ‌ನ್ನು ಗುರಾಣಿಯಾಗಿಸಿಕೊಂಡು ಸ್ವಪಕ್ಷೀಯರ ವಿರೋಧ ತಪ್ಪಿಸಿಕೊಳ್ಳಲು ಹವಣಿಸುತ್ತಿದ್ದೀರಿ'
ಸುನೀಲ್ ಕುಮಾರ್ ಮತ್ತು ಸಿದ್ದರಾಮಯ್ಯ
Published On :

ಬೆಂಗಳೂರು: ಮಾನ್ಯ ಸಿದ್ದರಾಮಯ್ಯನವರೇ, ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಗಣತಿ ವರದಿ ಸ್ವೀಕಾರದ ವಿಚಾರದಲ್ಲಿ ನೀವು ದಿನಕ್ಕೊಂದು ನಿಲುವು ತಾಳುವುದನ್ನು ನಿಲ್ಲಿಸಿ. ವರದಿ ಸ್ವೀಕರಿಸುವ ವಿಚಾರದಲ್ಲಿ ನನ್ನ ನಿಲುವು ಅಚಲ ಎಂದು ಪ್ರತಿಪಾದಿಸುತ್ತಲೇ ನೀವು ಗೊಂದಲ ಸೃಷ್ಟಿ ಮಾಡುತ್ತಿದ್ದೀರಿ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಶಾಸಕ ಸುನೀಲ್ ಕುಮಾರ್, ನಿರ್ಧಾರ ಪ್ರತಿಪಾದಿಸುತ್ತಲೇ ನೀವು(ಸಿದ್ದರಾಮಯ್ಯ) ಗೊಂದಲ ಸೃಷ್ಟಿ ಮಾಡುತ್ತಿದ್ದೀರಿ ಎಂದಿದ್ದಾರೆ.

‘ಜಾತಿ ಗಣತಿ ವರದಿಯನ್ನು ಕೇವಲ ರಾಜಕೀಯ ಅಸ್ತ್ರವಾಗಿಸಿಕೊಂಡು ದಿನದೂಡುವ ಬದಲು ಸಾರ್ವಜನಿಕವಾಗಿ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯುವುದಕ್ಕಾದರೂ ಸರ್ಕಾರ ವೇದಿಕೆ ಸೃಷ್ಟಿಸಲಿ. ವರದಿಯ ವೈಜ್ಞಾನಿಕತೆಯ ಬಗ್ಗೆ ಸ್ಪಷ್ಟನೆ ಕೊಡಿ’ ಎಂದು ಹೇಳಿದ್ದಾರೆ.

‘ರಾಹುಲ್ ಗಾಂಧಿಯವರ ಹೇಳಿಕೆಯ‌ನ್ನು ಗುರಾಣಿಯಾಗಿಸಿಕೊಂಡು ನೀವು(ಸಿದ್ದರಾಮಯ್ಯ) ಸ್ವಪಕ್ಷೀಯರ ವಿರೋಧವನ್ನು ತಪ್ಪಿಸಿಕೊಳ್ಳಲು ಹವಣಿಸುತ್ತಿರಬಹುದು. ಆದರೆ, ಹಿಂದುಳಿದ ವರ್ಗ ಹಾಗೂ ಸಮಾಜದಲ್ಲಿ ಅನಪೇಕ್ಷಿತ ಗೊಂದಲ ಹಾಗೂ ಅನುಮಾನವನ್ನು ಸೃಷ್ಟಿಸಬೇಡಿ’ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.