ರಾಜ್ಯ

ಬೆಂಗಳೂರಲ್ಲಿ ಅನಧಿಕೃತ ಪಟಾಕಿ ಮಾರಾಟ ಪತ್ತೆಗೆ ಟಾಸ್ಕ್​ಫೋರ್ಸ್; ಹಸಿರು ಪಟಾಕಿಗೆ ಮಾತ್ರ ಅವಕಾಶ: ಕಮಿಷನರ್ ದಯಾನಂದ್

ಅಗ್ನಿಶಾಮಕ ದಳದ ಮೂಲಕ ಮಾಹಿತಿ ಪಡೆದು ಈ ಬಾರಿ ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಎಲ್ಲೆಲ್ಲಿ ಮಳಿಗೆ ಹಾಕಬೇಕೆಂದು ಬಿಬಿಎಂಪಿ ಅನುಮತಿ ನೀಡಲಿದೆ. ಬೆಂಗಳೂರಿನಲ್ಲಿ ಒಟ್ಟು 62 ಮೈದಾನದಲ್ಲಿ 320 ಪಟಾಕಿ ಅಂಗಡಿಗಳನ್ನು ಹಾಕಲು ಪರವಾನಿಗೆ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಮಾಹಿತಿ ನೀಡಿದರು.

ಬೆಂಗಳೂರಲ್ಲಿ ಅನಧಿಕೃತ ಪಟಾಕಿ ಮಾರಾಟ ಪತ್ತೆಗೆ ಟಾಸ್ಕ್​ಫೋರ್ಸ್; ಹಸಿರು ಪಟಾಕಿಗೆ ಮಾತ್ರ ಅವಕಾಶ: ಕಮಿಷನರ್ ದಯಾನಂದ್
ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್
Published On :

ಬೆಂಗಳೂರು: ಅಗ್ನಿಶಾಮಕ ದಳದ ಮೂಲಕ ಮಾಹಿತಿ ಪಡೆದು ಈ ಬಾರಿ ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಎಲ್ಲೆಲ್ಲಿ ಮಳಿಗೆ ಹಾಕಬೇಕೆಂದು ಬಿಬಿಎಂಪಿ ಅನುಮತಿ ನೀಡಲಿದೆ. ಬೆಂಗಳೂರಿನಲ್ಲಿ ಒಟ್ಟು 62 ಮೈದಾನದಲ್ಲಿ 320 ಪಟಾಕಿ ಅಂಗಡಿಗಳನ್ನು ಹಾಕಲು ಪರವಾನಿಗೆ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಮಾಹಿತಿ ನೀಡಿದರು.

964 ಜನರು ಪಟಾಕಿ ಮಾರಾಟದ ಲೈಸೆನ್ಸ್​ಗಾಗಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 263 ಜನರಿಗೆ ಲಾಟರಿ ಮೂಲಕ ಲೈಸೆನ್ಸ್ ನೀಡಲಾಗಿದೆ. ಅನಧಿಕೃತ ಪಟಾಕಿ ಮಾರಾಟ ಪತ್ತೆ ಹಚ್ಚಲು ಟಾಸ್ಕ್​ಫೋರ್ಸ್​ ರಚಿಸಲಾಗಿದೆ. ಪೊಲೀಸ್, ಅಗ್ನಿಶಾಮಕ, ಬಿಬಿಎಂಪಿ ಸಹಯೋಗದಲ್ಲಿ ಟಾಸ್ಕ್​ಫೋರ್ಸ್‌ ರಚಿಸಲಾಗಿದೆ ಎಂದು ತಿಳಿಸಿದರು.

ಹಸಿರು ಪಟಾಕಿಗೆ ಅವಕಾಶ: ಬೆಂಗಳೂರಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಎಲ್ಲರೂ ಸುಪ್ರೀಂ ಕೋರ್ಟ್ ಆದೇಶವನ್ನು ಸರಿಯಾಗಿ ಪಾಲಿಸಬೇಕು. ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ವಾಹನ ತಪಾಸಣೆ ಮಾಡಲಿದ್ದೇವೆ. ಸಾರ್ವಜನಿಕರು ಹಸಿರು ಪಟಾಕಿಗಳನ್ನು ಗುರುತಿಸಿ ಬಳಸಬೇಕು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.