ನಾಯಿ ಕಚ್ಚಿದ ಪ್ರಕರಣ: ನಟ ದರ್ಶನ್ ವಿರುದ್ಧ ಮಹಿಳೆ ದೂರು, ಪೊಲೀಸರಿಂದ ಸ್ಥಳ ಮಹಜರು
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯ ಮುಂದೆ ನಾಯಿಗಳು ದಾಳಿ ಮಾಡಿ ತಮಗೆ ತೀವ್ರ ಗಾಯಗಳಾಗಿವೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದ ಮಹಿಳೆ ಇಂದು ಮಂಗಳವಾರ ಬೆಳ್ಳಂಬೆಳಗ್ಗೆ ಮತ್ತೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಬಂದಿದ್ದರು.

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯ ಮುಂದೆ ನಾಯಿಗಳು ದಾಳಿ ಮಾಡಿ ತಮಗೆ ತೀವ್ರ ಗಾಯಗಳಾಗಿವೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದ ಮಹಿಳೆ ಇಂದು ಮಂಗಳವಾರ ಬೆಳ್ಳಂಬೆಳಗ್ಗೆ ಮತ್ತೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಬಂದಿದ್ದರು.
ಮಹಿಳೆ ಅಮಿತ ಜಿಂದಾಲ್ ದೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ, ಅವರು ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮಹಿಳೆ ತೀವ್ರ ಸ್ವರೂಪದ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ನಾಯಿ ಕಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಪೊಲೀಸ್ ಠಾಣೆಗೆ ವಿಚಾರಣೆಗೆಂದು ಆಗಮಿಸಿದ್ದಾರೆ. ಠಾಣೆ ಹೊರಗೆ ನಿಂತು ಪೊಲೀಸ್ ಅಧಿಕಾರಿಗಳಿಗಾಗಿ ಕಾಯುತ್ತಿದ್ದಾರೆ. ಠಾಣೆಗೆ ಬಂದರೂ ಯಾರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಮಿತಾ ಜಿಂದಾಲ್ ಬೇಸರ ಹೊರಹಾಕಿದ್ದಾರೆ.
ಪೊಲೀಸರಿಂದ ಸ್ಥಳ ಮಹಜರು: ಸ್ಥಳ ಮಹಜರ್ ಹಿನ್ನೆಲೆ ಆರ್ ಆರ್ ನಗರ ಪೊಲೀಸ್ ಠಾಣೆಗೆ ಆಗಮಿಸುವಂತೆ ಪೊಲೀಸರು ಮಹಿಳೆ ಸೂಚಿಸಿದ್ದರಂತೆ. ಖಾಕಿ ಸೂಚನೆಯಂತೆ ಅಮಿತ ಜಿಂದಾಲ್ ಇಂದು ಬೆಳಗ್ಗೆ ಪೊಲೀಸ್ ಠಾಣೆಗೆ ಆಗಮಿಸಿದ್ದು ಅವರನ್ನು ಕರೆದುಕೊಂಡು ಹೋಗಿ ನಾಯಿ ಕಚ್ಚಿದ ಸ್ಥಳದಲ್ಲಿ ಪೊಲೀಸರು ಇಂದು ಸ್ಥಳ ಮಹಜರು ಮಾಡಿದ್ದಾರೆ. ನಾಯಿ ಕಚ್ಚಿದ ಸ್ಥಳದಲ್ಲಿಯೇ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಮಹಿಳೆ ನೀಡಿದ ದೂರಿನಲ್ಲಿ ಏನಿತ್ತು?: ಅಕ್ಟೋಬರ್ 28ರಂದು ದೂರುದಾರ ಮಹಿಳೆಗೆ ಸ್ಪರ್ಶ ಆಸ್ಪತ್ರೆಯಲ್ಲಿ ವಿಶ್ವಪಾರ್ಶ್ವವಾಯು ದಿನದ ಪ್ರಯುಕ್ತ ಜಾಗೃತಿ ಕಾರ್ಯಕ್ರಮವಿದ್ದು, ಆ ಕಾರ್ಯಕ್ರಮಕ್ಕೆ ಭಾಗವಹಿಸಲು ಅವರು ಆಸ್ಪತ್ರೆಯ ಬಳಿ ಹೋಗಿದ್ದರು. ಈ ವೇಳೆ ತಮ್ಮ ಕಾರನ್ನು ದರ್ಶನ್‌ರವರ ಮನೆಯ ಪಕ್ಕದ ಖಾಲಿ ಜಾಗದ ಮುಂದಿನ ರಸ್ತೆಯಲಿ ನಿಲ್ಲಿಸಿದ್ದರು. ಕಾರ್ಯಕ್ರಮ ಮುಗಿದ ನಂತರ ವಾಪಸ್ಸು ಹೋಗಲು ಕಾರಿನ ಬಳಿ ಬಂದಾಗ ಅವರು ಕಾರು ನಿಲ್ಲಿಸಿದ ರಸ್ತೆಯ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಮೂರು ನಾಯಿಗಳಿದ್ದು ಅದರಲ್ಲಿ ಎರಡು ನಾಯಿಗಳನ್ನು ಕಟ್ಟಿ ಹಾಕಿದ್ದು ಒಂದು ನಾಯಿಯನ್ನು ಹಾಗೆಯೇ ಬಿಟ್ಟಿದ್ದರಂತೆ.
ಮಹಿಳೆ ಮೇಲೆ ದಾಳಿ ಮಾಡಿದ ನಾಯಿಗಳು: ಈ ವೇಳೆ ಪಾರ್ಕಿಂಗ್ ವಿಚಾರವಾಗಿ ಅಪರಿಚಿತ ವ್ಯಕ್ತಿಗಳ ವಾಗ್ವಾದದ ನಡುವೆ ನಾಯಿಯೊಂದು ಮಹಿಳೆ ಮೇಲೆ ಎಗರಿದ್ದು, ಇದರಿಂದಾಗಿ ಮಹಿಳೆ ನೆಲದ ಮೇಲೆ ಬಿದ್ದಾಗ, ಕಟ್ಟಿ ಹಾಕಿದ್ದ ಮತ್ತೊಂದು ನಾಯಿಯೂ ಸಹ ಎಗರಿ ಬಂತಂತೆ.ಅಪರಿಚಿತ ವ್ಯಕ್ತಿಗಳು ನಾಯಿಗಳು ಕಚ್ಚುತ್ತವೆ ಎಂದು ತಿಳಿದಿದ್ದರೂ ಸಹ ನಾಯಿಗಳನ್ನು ಹಿಡಿದುಕೊಳ್ಳದೇ ಬೇಜವಾಬ್ದಾರಿಯಿಂದ ಅವುಗಳನ್ನು ಕಚ್ಚಲು ಬಿಟ್ಟಿದ್ದಾರೆ ಎಂದು ಮಹಿಳೆ ಅಮಿತಾ ಜಿಂದಾಲ್ ಆರೋಪಿಸಿದ್ದಾರೆ. ನಾಯಿಗಳು ಎಗರಿ ಮಹಿಳೆಯ ಹೊಟ್ಟೆಯ ಭಾಗಕ್ಕೆ ಕಚ್ಚಿ, ಗಾಯಪಡಿಸಿ, ಬಟ್ಟೆಯನ್ನು ಹರಿದು ಹಾಕಿವೆಯಂತೆ.
ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು: ನನಗೆ ಬೇಜವಾಬ್ದಾರಿಯಿಂದ ನಾಯಿಗಳನ್ನು ಕಚ್ಚಲು ಬಿಟ್ಟು ಗಾಯ ಪಡಿಸಿದ ಅಪರಿಚಿತ ವ್ಯಕ್ತಿಗಳು ಮತ್ತು ಮನೆಯ ಮಾಲೀಕರು ಹಾಗೂ ನಾಯಿಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮಹಿಳೆ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


