ಆರ್ ಟಿಇ ಅಡಿ ವಿದ್ಯಾರ್ಥಿಗಳ ನೋಂದಣಿಗೆ ಗಡುವು ದಿನಾಂಕ ವಿಸ್ತರಣೆ
ಶಾಲಾ ಶಿಕ್ಷಣ ಇಲಾಖೆ ಆರ್ ಟಿಇ ಅಡಿ ದಾಖಲಾತಿ ದಿನಾಂಕದ ಗಡುವನ್ನು ವಿಸ್ತರಿಸಿದೆ.

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ ಆರ್ ಟಿಇ ಅಡಿ ದಾಖಲಾತಿ ದಿನಾಂಕದ ಗಡುವನ್ನು ವಿಸ್ತರಿಸಿದೆ.
ಇಲಾಖೆ ಆರಂಭದಲ್ಲಿ ತನ್ನ ಕ್ಯಾಲೆಂಡರ್ ಆಫ್ ಇವೆಂಟ್ಸ್ ನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಮೊದಲ ಮೆರಿಟ್ ಪಟ್ಟಿಯನ್ನು ಮೇ 3 ರಂದು ಬಿಡುಗಡೆ ಮಾಡಬೇಕಿತ್ತು. ಆದರೆ ಇದರಲ್ಲಿ ವಿಳಂಬವಾಗಿ, ಮೊದಲ ಮೆರಿಟ್ ಪಟ್ಟಿಯನ್ನು ಮೇ.18 ರಂದು ಬಿಡುಗಡೆ ಮಾಡಲಾಗಿತ್ತು. ಈ ಬಳಿಕ ಕಾರ್ಯಕ್ರಮಗಳ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು.
ಪರಿಷ್ಕೃತ ಪಟ್ಟಿಯ ಪ್ರಕಾರ, ವಿದ್ಯಾರ್ಥಿಗಳ ಮೊದಲ ಸುತ್ತಿನ ದಾಖಲಾತಿ ಮತ್ತು ವಿವರಗಳ ಅಪ್‌ಲೋಡ್ ಗಡುವು ಮೇ 29 ರಂದು ಕೊನೆಗೊಳ್ಳಲಿದೆ. ಎರಡನೇ ಸೀಟುಗಳ ಪಟ್ಟಿಯನ್ನು ಜೂನ್ 6 ರಂದು ಪ್ರಕಟಿಸಲಾಗುತ್ತದೆ ಮತ್ತು ಜೂನ್ 7 ರಿಂದ ಜೂನ್ 15 ರವರೆಗೆ ದಾಖಲಾತಿ ನಡೆಯಲಿದೆ. ಈ ಅವಧಿಯಲ್ಲಿ, ದಾಖಲಾದ ವಿದ್ಯಾರ್ಥಿಗಳ ವಿವರಗಳನ್ನು ಶಾಲೆಗಳ ಸಾಫ್ಟ್‌ವೇರ್‌ನಲ್ಲಿಯೂ ನವೀಕರಿಸಲಾಗುತ್ತದೆ.
ಮೊದಲ ಪಟ್ಟಿಯನ್ನು ಮೇ 3 ರಂದು ಪ್ರಕಟಿಸಲಾಗಿದ್ದರೆ, ಪರಿಷ್ಕೃತ ವೇಳಾಪಟ್ಟಿಯಲ್ಲಿ ಅರ್ಜಿ ಸಲ್ಲಿಸಲು ಮೇ 10 ಕೊನೆಯ ದಿನಾಂಕವಾಗಿರುತ್ತಿತ್ತು. ಈ ಮಧ್ಯೆ ಶಾಲೆಗಳಿಂದ ಶುಲ್ಕ ಮರುಪಾವತಿಗೆ ಪ್ರಸ್ತಾವನೆಗಳ ಮರುಸಲ್ಲಿಕೆಗೆ ಸಂಬಂಧಿಸಿದಂತೆ. ಇಲಾಖೆ ಸುತ್ತೋಲೆ ಹೊರಡಿಸಿದ್ದು, ಇದರ ಪ್ರಕಾರ, ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶಾಲಾ ವೆಚ್ಚಗಳಲ್ಲಿ ಬದಲಾವಣೆಗಳಾದಲ್ಲಿ ಶಾಲೆಗಳು 2021-22 ಶೈಕ್ಷಣಿಕ ವರ್ಷದಿಂದ ಶುಲ್ಕ ಮರುಪಾವತಿಗಾಗಿ ಮತ್ತೊಂದು ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿದೆ. ಏತನ್ಮಧ್ಯೆ, ಪ್ರಸ್ತಾವನೆಗಳನ್ನು ತಿರಸ್ಕರಿಸಲು ಕಾರಣಗಳನ್ನು ಸರಿಯಾಗಿ ದಾಖಲಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಇಲಾಖೆ ಅಧಿಕಾರಿಗಳು ಮತ್ತು ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


