ರಾಜ್ಯ

ಕಲಬುರಗಿ: ಮಳೆಯಲ್ಲಿ ವಿದ್ಯುತ್ ತಗುಲಿ ಒಂದೇ ಕುಟುಂಬದ ತಾಯಿ, ಇಬ್ಬರು ಮಕ್ಕಳು ಸಾವು

ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಧನಗರಗಲ್ಲಿಯಲ್ಲಿ ತಡರಾತ್ರಿ ಸಂಭವಿಸಿದೆ.

ಕಲಬುರಗಿ: ಮಳೆಯಲ್ಲಿ ವಿದ್ಯುತ್ ತಗುಲಿ ಒಂದೇ ಕುಟುಂಬದ ತಾಯಿ, ಇಬ್ಬರು ಮಕ್ಕಳು ಸಾವು
ಝರಣಮ್ಮ-ಮಹೇಶ-ಸುರೇಶ
Published On :

ಚಿಂಚೋಳಿ: ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಧನಗರಗಲ್ಲಿಯಲ್ಲಿ ತಡರಾತ್ರಿ ಸಂಭವಿಸಿದೆ.

ಮೃತರು 44 ವರ್ಷದ ತಾಯಿ ಝರಣಮ್ಮ ಅಂಬಣ್ಣ ಬಸಗೊಂಡ ಮತ್ತು ಇಬ್ಬರು ಮಕ್ಕಳಾದ 20 ವರ್ಷದ ಮಹೇಶ ಅಂಬಣ್ಣ ಬಸಗೊಂಡ 18 ವರ್ಷದ ಸುರೇಶ ಅಂಬಣ್ಣ ಬಸಗೊಂಡ ಮೃತ ದುರ್ದೈವಿಗಳು. ಘಟನೆಯಲ್ಲಿ ಮೃತ ಝರಣಮ್ಮ ಪತಿ ಅಂಬಣ್ಣಗೆ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.

ಚಿಂಚೋಳಿಯಲ್ಲಿ ನಿನ್ನೆ ರಾತ್ರಿ ಧಾರಾಕಾರ ಮಳೆ ಸುರಿದಿದ್ದು ಗಾಳಿಗೆ ಮನೆಯ ಮುಂದೆ ವಿದ್ಯುತ್ ತಂತಿ ತುಂಡಾಗಿ ನೀರಿನಲ್ಲಿ ಬಿದ್ದಿತ್ತು. ದನದ ಮೇವು ಮಳೆಗೆ ನೆನೆಯದಿರಲೆಂದು ಅದನ್ನು ಮುಚ್ಚಲು ಕಳೆದ ತಡರಾತ್ರಿ ಹೊರಬಂದಿದ್ದಾಗ ಕರೆಂಟ್ ಶಾಕ್ ಹೊಡೆದಿದೆ. 

ಹೊರಗೆ ಹೋದವರು ಇನ್ನು ಬರಲಿಲ್ಲ ಎಂದು ನೋಡಲು ಬಂದಿದ್ದಾಗ ಒಬ್ಬಬ್ಬರೇ ಕರೆಂಟ್ ಶಾಕ್ ಗೆ ಬಲಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.