ರಾಜ್ಯ

'RRR' ಚಿತ್ರವನ್ನು 'ಬಾಲಿವುಡ್‌ ಚಿತ್ರ' ಎಂದ ಆಸ್ಕರ್‌ ನಿರೂಪಕ: ಭಾರತವೆಂದರೆ ಕೇವಲ ಹಿಂದಿ, ಬಾಲಿವುಡ್ ಅಲ್ಲ- ನಟಿ ರಮ್ಯಾ ಕಿಡಿ

ʼನಾಟು ನಾಟುʼ ಹಾಡಿಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿ ಪಡೆದಿರುವ RRR ಚಿತ್ರದ ಬಗ್ಗೆ ಆಸ್ಕರ್‌ ನಿರೂಪಕ ಮಾಡಿದ ತಪ್ಪಾದ ಉಲ್ಲೇಖವು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

'RRR' ಚಿತ್ರವನ್ನು 'ಬಾಲಿವುಡ್‌ ಚಿತ್ರ' ಎಂದ ಆಸ್ಕರ್‌ ನಿರೂಪಕ: ಭಾರತವೆಂದರೆ ಕೇವಲ ಹಿಂದಿ, ಬಾಲಿವುಡ್ ಅಲ್ಲ- ನಟಿ ರಮ್ಯಾ ಕಿಡಿ
ನಟಿ ರಮ್ಯಾ
Published On :

ನವದೆಹಲಿ: ʼನಾಟು ನಾಟುʼ ಹಾಡಿಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿ ಪಡೆದಿರುವ RRR ಚಿತ್ರದ ಬಗ್ಗೆ ಆಸ್ಕರ್‌ ನಿರೂಪಕ ಮಾಡಿದ ತಪ್ಪಾದ ಉಲ್ಲೇಖವು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಆರ್‌ಆರ್‌ಆರ್‌ ಚಿತ್ರದ ಗೀತೆಗೆ ಆಸ್ಕರ್‌ ಬಂದಿರುವ ಬಗ್ಗೆ ಸಂಭ್ರಮ ವ್ಯಕ್ತಪಡಿಸುತ್ತಲೇ, ಚಿತ್ರವನ್ನು ʼಬಾಲಿವುಡ್‌ ಚಿತ್ರʼ ಎಂದು ತಪ್ಪಾಗಿ ಗುರುತಿಸಿದ್ದರ ಬಗ್ಗೆ ಆಸ್ಕರ್ 2023ರ ನಿರೂಪಕ ಜಿಮ್ಮಿ ಕಿಮ್ಮೆಲ್ ಅವರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟಿ ರಮ್ಯಾ ಕೂಡ ಕೂಡ ಕಿಡಿಕಾರಿದ್ದು, ಭಾರತ ಎಂದರೆ ಕೇವಲ ಹಿಂದಿ, ಬಾಲಿವುಡ್ ಅಲ್ಲ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನಾಟು-ನಾಟು ತೆಲುಗು ಗೀತೆ ಈ ಸಾಧನೆ ಮಾಡಿರುವುದು ನನಗೆ ತುಂಬಾ ಖುಷಿಯಾಗಿದೆ. ಭಾರತವು ವಿಭಿನ್ನ ಸಂಸ್ಕೃತಿಗಳು ಮತ್ತು ಭಾಷೆಗಳ ವೈವಿಧ್ಯಮಯ ದೇಶ ಎಂದು ವಿಶ್ವಕ್ಕೇ ಗೊತ್ತಾಗಿದೆ. ಭಾರತವೆಂದರೆ ಕೇವಲ ಹಿಂದಿಯಲ್ಲ. ಭಾರತ ಕೇವಲ ಬಾಲಿವುಡ್ ಅಲ್ಲ. ಭಾರತವೆಂದರೆ ಹಿಂದಿಯೆಂಬ ರೂಢಿಗತ ಚಿಂತನೆಯೊಂದು ಆಲಸಿತನ ಎಂದು ಹೇಳಿದ್ದಾರೆ.

ಇದರ ಜೊತೆಗೆ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವುದಿಲ್ಲ ಎಂಬ ಹಿಂದಿ ಮಹಿಳೆಯನ್ನು ಆಟೋದಿಂದ ಕೆಳಕ್ಕಿಳಿಸಿದ ಆಟೊ ಚಾಲಕನ ವಿಡಿಯೊವನ್ನು ರಮ್ಯಾ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.