ರಾಜ್ಯ

ಚಿತ್ರದುರ್ಗ: ದಾರಿ ತಪ್ಪಿ ವಸತಿ ಪ್ರದೇಶಕ್ಕೆ ಬಂದಿದ್ದ ಸಾರಂಗವನ್ನು ಕೊಂದು ಹಾಕಿದ ನಾಯಿಗಳ ಗುಂಪು

ಚಿತ್ರದುರ್ಗ ಸಮೀಪದ ಅರಣ್ಯದಿಂದ ದಾರಿ ತಪ್ಪಿ ವಸತಿ ಪ್ರದೇಶಕ್ಕೆ ಬಂದ ಸಾರಂಗವನ್ನು ಬೀದಿ ನಾಯಿಗಳ ಗುಂಪೊಂದು ಕೊಂದು ಹಾಕಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಚಿತ್ರದುರ್ಗ: ದಾರಿ ತಪ್ಪಿ ವಸತಿ ಪ್ರದೇಶಕ್ಕೆ ಬಂದಿದ್ದ ಸಾರಂಗವನ್ನು ಕೊಂದು ಹಾಕಿದ ನಾಯಿಗಳ ಗುಂಪು
ಸಾರಂಗ
Published On :

ಚಿತ್ರದುರ್ಗ: ಚಿತ್ರದುರ್ಗ ಸಮೀಪದ ಅರಣ್ಯದಿಂದ ದಾರಿ ತಪ್ಪಿ ವಸತಿ ಪ್ರದೇಶಕ್ಕೆ ಬಂದ ಸಾರಂಗವನ್ನು ಬೀದಿ ನಾಯಿಗಳ ಗುಂಪೊಂದು ಕೊಂದು ಹಾಕಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಅಧಿಕಾರಿಗಳ ಪ್ರಕಾರ, ಚಳ್ಳಕೆರೆ ತಾಲೂಕಿನ ಬಕ್ಕಂಬುಡಿ ಗ್ರಾಮದ ಸಸಿಮರ ಕಾವಲು ಬಳಿ ಈ ಘಟನೆ ನಡೆದಿದೆ. ಕೃಷ್ಣ ಮೃಗ ಎಂದು ಜನಪ್ರಿಯವಾಗಿರುವ ಸಾರಂಗಕ್ಕೆ ತೀವ್ರ ಗಾಯಗಳಾಗಿವೆ.

ಸಾರಂಗದ ಮೇಲೆ ನಾಯಿಗಳ ದಾಳಿಯನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಸಾರಂಗವನ್ನು ರಕ್ಷಿಸಿದ್ದಾರೆ. ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಸಾರಂಗ ಮೃತಪಟ್ಟಿದೆ.

ಹೃದಯಾಘಾತದಿಂದ ಕಾಡು ಪ್ರಾಣಿ ಮೃತಪಟ್ಟಿದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.