ರಾಜ್ಯ

ಬೀಡಾ ಅಂಗಡಿಯಲ್ಲಿ ಬಿಲ್ ನೀಡುವ ವಿಚಾರಕ್ಕೆ ಜಗಳ: ಕೈ ಕೈ ಮಿಲಾಯಿಸಿಕೊಂಡ ಸಾ ರಾ ಮಹೇಶ್ ಪುತ್ರ-ಪತ್ರಕರ್ತನ ಮಗ

ಹೊಟೇಲ್ ನಲ್ಲಿ ಊಟ ಮಾಡಿ ಬೀಡಾ ಅಂಗಡಿಯಲ್ಲಿ ಬಿಲ್ ನೀಡುವ ಕ್ಷುಲ್ಲಕ ಕಾರಣಕ್ಕೆ ಮಾಜಿ ಶಾಸಕ ಸಾ ರಾ ಮಹೇಶ್ ಮತ್ತು ಪತ್ರಕರ್ತರೊಬ್ಬರ ಪುತ್ರನ ಮಧ್ಯೆ ಗಲಾಟೆಯಾದ ಘಟನೆ ಮೈಸೂರಿನ ಕುವೆಂಪು ನಗರದಲ್ಲಿ ಕಳೆದ ರಾತ್ರಿ ನಡೆದಿದೆ.

ಬೀಡಾ ಅಂಗಡಿಯಲ್ಲಿ ಬಿಲ್ ನೀಡುವ ವಿಚಾರಕ್ಕೆ ಜಗಳ: ಕೈ ಕೈ ಮಿಲಾಯಿಸಿಕೊಂಡ ಸಾ ರಾ ಮಹೇಶ್ ಪುತ್ರ-ಪತ್ರಕರ್ತನ ಮಗ
ಮೈಸೂರಿನ ಕುವೆಂಪು ನಗರದ ಹೊಟೇಲೊಂದರ ಮುಂದೆ ನಡೆದ ಗಲಾಟೆ
Published On :

ಮೈಸೂರು: ಹೊಟೇಲ್ ನಲ್ಲಿ ಊಟ ಮಾಡಿ ಬೀಡಾ ಅಂಗಡಿಯಲ್ಲಿ ಬಿಲ್ ನೀಡುವ ಕ್ಷುಲ್ಲಕ ಕಾರಣಕ್ಕೆ ಮಾಜಿ ಶಾಸಕ ಸಾ ರಾ ಮಹೇಶ್ ಮತ್ತು ಪತ್ರಕರ್ತರೊಬ್ಬರ ಪುತ್ರನ ಮಧ್ಯೆ ಗಲಾಟೆಯಾದ ಘಟನೆ ಮೈಸೂರಿನ ಕುವೆಂಪು ನಗರದಲ್ಲಿ ಕಳೆದ ರಾತ್ರಿ ನಡೆದಿದೆ.

ಮೈಸೂರು ನಗರದ ಕುವೆಂಪು ನಗರದಲ್ಲಿ ಕಳೆದ ರಾತ್ರಿ ಹೊಟೇಲ್ ನಲ್ಲಿ ಊಟ ಮಾಡಿ ಬೀಡಾ ತಿಂದು ಹಣ ನೀಡಲು ಮಾಜಿ ಶಾಸಕ ಸಾ ರಾ ಮಹೇಶ್ ಮುಂದಾದಾಗ ಪತ್ರಕರ್ತರೊಬ್ಬರ ಪುತ್ರ ಸ್ಕ್ಯಾನರ್ ಗೆ ಅಡ್ಡ ನಿಂತಿದ್ದಕ್ಕೆ ಸಾರಾ ಮಹೇಶ್ ಪುತ್ರ ಪ್ರಶ್ನಿಸಿದ್ದಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ನಂತರ ಎರಡೂ ಗುಂಪುಗಳ ಯುವಕರು ಕೈ ಕೈ ಮಿಲಾಯಿಸಿಕೊಂಡರು.

ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಇಬ್ಬರನ್ನೂ ಕರೆದುಕೊಂಡು ವಿಚಾರಣೆ ನಡೆಸಿ ಕೇಸು ದಾಖಲಿಸಿಕೊಳ್ಳದೆ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು ಇಬ್ಬರ ಮಾರಾಮಾರಿ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.