ಸಂಸದೆ ಸುಮಲತಾ ಪತ್ರ, ಸಹಿ ನಕಲುಗೊಳಿಸಿ ದುರ್ಬಳಕೆ ಮಾಡಿದ ವ್ಯಕ್ತಿ ಪೊಲೀಸ್ ವಶಕ್ಕೆ
ಸಂಸದೆ ಸುಮಲತಾ ಅವರ ಪತ್ರ, ಸಹಿಯನ್ನು ನಕಲುಗೊಳಿಸಿ ದುರ್ಬಳಕೆ ಮಾಡಿಕೊಂಡ ವ್ಯಕ್ತಿಯೋರ್ವನನ್ನು ವಿಜಯನಗರ ಜಿಲ್ಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು: ಸಂಸದೆ ಸುಮಲತಾ ಅವರ ಪತ್ರ, ಸಹಿಯನ್ನು ನಕಲುಗೊಳಿಸಿ ದುರ್ಬಳಕೆ ಮಾಡಿಕೊಂಡ ವ್ಯಕ್ತಿಯೋರ್ವನನ್ನು ವಿಜಯನಗರ ಜಿಲ್ಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಸ್ವತಃ ಸ್ಪಷ್ಟನೆ ನೀಡಿರುವ ಸಂಸದೆ ಸುಮಲತಾ, 06.02.2023 ರಂದು ಅನಾಮಧೇಯ ಮಹಿಳೆಯೊಬ್ಬರನ್ನು ನನ್ನ ಆಪ್ತ ಕಾರ್ಯದರ್ಶಿಯಾಗಿ ನೇಮಕಾತಿಗೊಳಿಸಿರುವುದಾಗಿ ನನ್ನ ಪತ್ರ ಹಾಗೂ ನನ್ನ ಸಹಿಯನ್ನು ನಕಲಿಗೊಳಿಸಿ ದುರ್ಬಳಕೆ ಮಾಡಿ ನವದೆಹಲಿಯ ಸಂಸದರ ಅನುದಾನ ಕಚೇರಿಗೆ ನೀಡಿರುವುದು ದಿನಾಂಕ: 27.03.2023 ರಂದು ನನ್ನ ಗಮನಕ್ಕೆ ಬಂದಿದೆ. ಕೂಡಲೇ ಸಂಬಂಧಪಟ್ಟ ಜಿಲ್ಲಾ ಪೊಲೀಸ್ ಕಚೇರಿಗೆ ಪತ್ರ ಬರೆದು ದೂರು ದಾಖಲು ಮಾಡಲಾಗಿದ್ದ ಹಿನ್ನೆಲೆಯಲ್ಲಿ ಕೂಡಲೇ ಪೊಲೀಸ್ ಇಲಾಖೆಯು ಎಚ್ಚೆತ್ತುಕೊಂಡು ಇದರ ಜಾಲವನ್ನು ಪತ್ತೆ ಹಚ್ಚಿ ಇದರ ಮೂಲ ಆರೋಪಿಯಾದ ಉತ್ತರ ಕರ್ನಾಟಕ ಮೂಲದ ‘ಅನಂತ ಕೃಷ್ಣ ಭಟ್’ ಎಂಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲುಗೊಳಿಸಿ ಈಗಾಗಲೇ ಪೊಲೀಸ್ ವಶಕ್ಕೆ ಪಡೆದುಕೊಂಡಿರುತ್ತಾರೆ. ಅನಂತ್ ಕೃಷ್ಣ ಭಟ್ ಮತ್ತು ಇತರರ ಮೇಲೆ ಕಾನೂನು ಕ್ರಮ ತಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
"ಪೊಲೀಸರು ವಶಕ್ಕೆ ಪಡೆದಿರುವ ಅನಂತ್ ಕೃಷ್ಣ ಭಟ್ ಹಲವು ನಾಯಕರ ಜೊತೆ ಫೋಟೋಗಳನ್ನೂ ತಗೆಸಿಕೊಂಡಿರುತ್ತಾರೆ. ಇತರರು ಕೂಡ ಅವನಿಂದ ಜಾಗೃತವಾಗಿ ಇರುವಂತೆ ಮನವಿ ಮಾಡಿಕೊಳ್ಳುವೆ ಈ ರೀತಿಯಾಗಿ ನಕಲಿ ಗೊಳಿಸಿರುವ ಬಗ್ಗೆ ಯಾವುದಾದರೂ ವ್ಯಕ್ತಿ ತಮಗೆ ಅನುಮಾನಾಸ್ಪದವಾಗಿ ಕಂಡಲ್ಲಿ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯ ಸಂಕೀರ್ಣದಲ್ಲಿರುವ ನನ್ನ ಸಂಸದರ ಕಚೇರಿಗೆ ಕೂಡಲೇ ಮಾಹಿತಿ ನೀಡಬೇಕೆಂದು ಕೋರುತ್ತೇನೆ" ಎಂದು ಸಂಸದೆ ಸುಮಲತಾ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


