ರಾಜ್ಯ

ಉಡುಪಿ ಮಠದ ಸಂಪ್ರದಾಯ ಪ್ರಕಾರ ಬೆಂಗಳೂರಿನಲ್ಲಿ ನೆರವೇರಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪುತ್ರಿ ವಿವಾಹ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ಏಕೈಕ ಪುತ್ರಿ ವಾಙ್ಮಯಿ ಅವರ ವಿವಾಹ ಪ್ರತೀಕ್ ಎಂಬವರ ಜೊತೆ ಉಡುಪಿಯ ಅದಮಾರು ಮಠದ ಬ್ರಾಹ್ಮಣ ಸಂಪ್ರದಾಯ ಪ್ರಕಾರ ಬೆಂಗಳೂರಿನ ಪ್ರತಿಷ್ಠಿತ ವಿವಾಹ ಮತ್ತು ಆರತಕ್ಷತೆ ಸ್ಥಳವೊಂದರಲ್ಲಿ ನೆರವೇರಿತು.

ಉಡುಪಿ ಮಠದ ಸಂಪ್ರದಾಯ ಪ್ರಕಾರ ಬೆಂಗಳೂರಿನಲ್ಲಿ ನೆರವೇರಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪುತ್ರಿ ವಿವಾಹ
ಉಡುಪಿ ಅದಮಾರ್ ಮಠದ ಸಂಪ್ರದಾಯ ಪ್ರಕಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪುತ್ರಿ ವಿವಾಹ(ಫೋಟೋ ಕೃಪೆ-ಅದಮಾರು ಮಠದ ಫೇಸ್ ಬುಕ್ ಖಾತೆಯಿಂದ)
Published On :

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ  ಏಕೈಕ ಪುತ್ರಿ ವಾಙ್ಮಯಿ ಅವರ ವಿವಾಹ ಪ್ರತೀಕ್ ಎಂಬವರ ಜೊತೆ ಉಡುಪಿಯ ಅದಮಾರು ಮಠದ ಬ್ರಾಹ್ಮಣ ಸಂಪ್ರದಾಯ ಪ್ರಕಾರ ಬೆಂಗಳೂರಿನ ಪ್ರತಿಷ್ಠಿತ ವಿವಾಹ ಮತ್ತು ಆರತಕ್ಷತೆ ಸ್ಥಳವೊಂದರಲ್ಲಿ ನೆರವೇರಿತು.

ಅದಮಾರು ಮಠದ ವೈದಿಕ ಕ್ರಮವನ್ನು ವಿವಾಹದಲ್ಲಿ ನೆರವೇರಿಸಲಾಯಿತು. ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಈಶಪ್ರಿಯ ತೀರ್ಥ ಶ್ರೀಪಾದರು ವಧು ವರರನ್ನು ಹರಸಿ ಕಳುಹಿಸಿದ ಮಧುಪರ್ಕ, ಸೀರೆ, ಶಾಲು, ಗಂಧ ಪ್ರಸಾದವನ್ನು ಮಠದ ವ್ಯವಸ್ಥಾಪಕರಾದ ಗೋವಿಂದ ರಾಜರು ಮತ್ತು ಶಿಷ್ಯರು ಮಂತ್ರಘೋಷದ ಮೂಲಕ ನೀಡಿ ಹರಸಿದರು.

ವಧು ನಸುಕೆಂಪು ಬಣ್ಣದ ಸೀರೆ ಉಟ್ಟಿದ್ದರೆ, ವರ ಬಿಳಿ ಪಂಚೆ, ಶಾಲನ್ನು ಧರಿಸಿದ್ದರು. ಸಚಿವೆ ನಿರ್ಮಲಾ ಸೀತಾರಾಮನ್ ಮೊಳಕಾಲ್ಮೂರು ಸೀರೆಯಲ್ಲಿ ಕಾಣಿಸಿಕೊಂಡರು.

ಈಶಪ್ರಿಯ ತೀರ್ಥ ಶ್ರೀಪಾದರು ಅನುಗ್ರಹಿಸಿ ಕಳುಹಿಸಿದ ಉಡುಪಿ ಸೀರೆಯನ್ನು ಪೌರೋಹಿತ್ಯರು ನಿರ್ಮಲ ಸೀತಾರಾಮನ್ ಅವರಿಗೆ ನೀಡಿದರು. ಪುತ್ರಿಯ ವಿವಾಹದಲ್ಲಿ ಕೇಂದ್ರ ಸಚಿವೆ ಲಗುಬಗೆಯಿಂದ ಪಾಲ್ಗೊಂಡಿದ್ದು ಕಂಡುಬಂತು. ಅಂದಹಾಗೆ ಸಚಿವೆ ನಿರ್ಮಲಾ ಅವರು ಹಿಂದಿನಿಂದಲೂ ಉಡುಪಿ ಮಠದ ಭಕ್ತರು. ಅವರ ಇಚ್ಛೆಯ ಪ್ರಕಾರ ಪುತ್ರಿಯ ವಿವಾಹ ನೆರವೇರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.