ಸಕಲೇಶಪುರ: ಸೇನಾ ಕ್ಯಾಂಪ್‌ನಲ್ಲಿ ಊಟ ಸೇವಿಸಿ 42 ಸೈನಿಕರು ಅಸ್ವಸ್ಥ, ಆರೋಗ್ಯ ವಿಚಾರಿಸಿದ ಶಾಸಕ ಮಂಜು!
ಮಧ್ಯಾಹ್ನದ ಊಟ ಸೇವಿಸಿದ ಬಳಿಕ 42 ಸೈನಿಕರು ಅಸ್ವಸ್ಥಗೊಂಡಿದ್ದು ಅವರನ್ನು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಸನ: ಸಕಲೇಶಪುರ ತಾಲೂಕಿನ ಕುಡುಗರವಳ್ಳಿಯಲ್ಲಿರುವ ಸೇನಾ ಚಾಲನಾ ತರಬೇತಿ ಶಿಬಿರದ ಕನಿಷ್ಠ 42 ತರಬೇತಿ ಯೋಧರು ಬುಧವಾರ ವಿಷಾಹಾರ ಸೇವನೆಯಿಂದ ಅಸ್ವಸ್ಥಗೊಂಡಿದ್ದಾರೆ.
103 ಪ್ರಶಿಕ್ಷಣಾರ್ಥಿಗಳು ಕುಡುಗರವಳ್ಳಿ ಸೇನಾ ಶಿಬಿರದಲ್ಲಿ ತಂಗಿದ್ದು ಮಂಗಳವಾರ ರಾತ್ರಿ ಊಟ ಮಾಡಿದರು. ಮಂಗಳವಾರ ರಾತ್ರಿ ಚಪಾತಿ, ಆಳು ಪನ್ನೀರ್, ಸಬ್ಜಿ, ಪಾಯಸಂ, ಅನ್ನ ಸಾಂಬಾರ್, ರೊಟ್ಟಿ ಮತ್ತು ದಾಲ್ ಸೇವಿಸಿದ್ದರು.
ಶಿಬಿರಕ್ಕೆ ಭೇಟಿ ನೀಡಿದ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರ ಪ್ರಕಾರ, ಸುಮಾರು 60 ತರಬೇತಿದಾರರು ಅಸ್ವಸ್ಥತೆಯನ್ನು ಅನುಭವಿಸಿದ್ದರು. ಬುಧವಾರ ಬೆಳಗಿನ ಉಪಾಹಾರಕ್ಕೂ ಮೊದಲು ಅವರಿಗೆ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಹಿರಿಯ ತರಬೇತಿ ಅಧಿಕಾರಿಗಳು 42 ಪ್ರಶಿಕ್ಷಣಾರ್ಥಿಗಳನ್ನು ವಾಹನದಲ್ಲಿ ಕ್ರೌಫೋರ್ಡ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಕೂಡಲೇ ಅಸ್ವಸ್ಥಗೊಂಡಿದ್ದ ಸೈನಿಕರಿಗೆ ಚಿಕಿತ್ಸೆ ಒದಗಿಸಲಾಯಿತು. ಈ ಪೈಕಿ 21 ಯೋಧರು ಅಪಾಯದಿಂದ ಪಾರಾಗಿದ್ದು, ಉಳಿದವರು ಚೇತರಿಸಿಕೊಂಡಿದ್ದು, ಕ್ರಮೇಣ ಔಷಧಿಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬೆಂಗಳೂರು: ಮೊದಲ ಮೊಬೈಲ್ ಪೋಸ್ಟ್ ಆಫೀಸ್ ಗೆ ಚಾಲನೆ
ಆಹಾರ ಮತ್ತು ಸುರಕ್ಷತಾ ಇಲಾಖೆಯ ಅಧಿಕಾರಿಗಳು ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಬಂದ ನಂತರವಷ್ಟೇ ಘಟನೆಗೆ ನಿಖರ ಕಾರಣ ತಿಳಿಯಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದು ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಆಸ್ಪತ್ರೆಗೆ ಭೇಟಿ ನೀಡಿದ್ದು, ಈ ಬಗ್ಗೆ ವಿಶೇಷ ಗಮನ ಹರಿಸುವಂತೆ ಆರೋಗ್ಯ ಸಿಬ್ಬಂದಿಗೆ ಸೂಚಿಸಿದ್ದಾರೆ. ವಿವಿಧ ರಾಜ್ಯಗಳ ಸೇನಾ ಶಿಬಿರಗಳ ಸೈನಿಕರನ್ನು ಮಿಲಿಟರಿ ವಾಹನ ಚಾಲನಾ ತರಬೇತಿಗೆ ನಿಯೋಜಿಸಲಾಗುತ್ತದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಂದಾಗಿದ್ದು, ಚಾಲನಾ ತರಬೇತಿಗಾಗಿ ಮಿಲಿಟರಿ ಅಧಿಕಾರಿಗಳು ಹೆಚ್ಚಾಗಿ ಈ ಹೆದ್ದಾರಿಯನ್ನು ಆಯ್ಕೆ ಮಾಡುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


