ಪಾರ್ಟ್ ಟೈಂ, ವರ್ಕ್ ಫ್ರಂ ಹೋಂ ಉದ್ಯೋಗದ ಸಂದೇಶ ಬಂದರೆ ಜೋಕೆ; ಪ್ರೀಪೇಯ್ಡ್ ಟಾಸ್ಕ್ ಹಗರಣಕ್ಕೆ ಮೈಸೂರಿಗರೇ ಟಾರ್ಗೆಟ್!
ಮುಂದಿನ ಬಾರಿ ವಾಟ್ಸಾಪ್ ಮತ್ತು ಟೆಲಿಗ್ರಾಂನಲ್ಲಿ ಲಾಭದಾಯಕ ಪಾರ್ಟ್ ಟೈಂ ಅಥವಾ ಪ್ರಿಪೇಯ್ಡ್ ಉದ್ಯೋಗಗಳನ್ನು ನೀಡುವ ಸಂದೇಶವನ್ನು ನೀವು ಕಂಡರೆ, ಜಾಗರೂಕರಾಗಿರಿ. ಏಕೆಂದರೆ, ನಿಮ್ಮ ಬ್ಯಾಂಕ್ ಖಾತೆಯಿಂದ ಎಲ್ಲಾ ಹಣವನ್ನು ನೀವು ಕಳೆದುಕೊಳ್ಳಬಹುದು.

ಮೈಸೂರು: ಮುಂದಿನ ಬಾರಿ ವಾಟ್ಸಾಪ್ ಮತ್ತು ಟೆಲಿಗ್ರಾಂನಲ್ಲಿ ಲಾಭದಾಯಕ ಪಾರ್ಟ್ ಟೈಂ ಅಥವಾ ಪ್ರಿಪೇಯ್ಡ್ ಉದ್ಯೋಗಗಳನ್ನು ನೀಡುವ ಸಂದೇಶವನ್ನು ನೀವು ಕಂಡರೆ, ಜಾಗರೂಕರಾಗಿರಿ. ಏಕೆಂದರೆ, ನಿಮ್ಮ ಬ್ಯಾಂಕ್ ಖಾತೆಯಿಂದ ಎಲ್ಲಾ ಹಣವನ್ನು ನೀವು ಕಳೆದುಕೊಳ್ಳಬಹುದು.
ಪಾರ್ಟ್ ಟೈಂ ಉದ್ಯೋಗಾಕಾಂಕ್ಷಿಗಳು ಮತ್ತು ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಬಯಸುವವರು ಪ್ರಿಪೇಯ್ಡ್ ಟಾಸ್ಕ್ ಹಗರಣಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ ಮತ್ತು ಸೈಬರ್ ಅಪರಾಧಿಗಳು ಕಳೆದ ಕೆಲವು ತಿಂಗಳುಗಳಲ್ಲಿ ಮೈಸೂರಿನಲ್ಲಿಯೇ ಕನಿಷ್ಠ 30 ಸಂತ್ರಸ್ತರ ಬ್ಯಾಂಕ್ ಖಾತೆಗಳಲ್ಲಿನ ಹಣವನ್ನು ಸಂಪೂರ್ಣ ಖಾಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಮೈಸೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರುಗಳ ಪ್ರಕಾರ, ಎಲ್ಲಾ ಸೈಬರ್ ವಂಚನೆಗಳಲ್ಲಿ ಸುಮಾರು ಶೇ 60 ರಷ್ಟು ಪ್ರಕರಣಗಳು ಈ ಪ್ರಿಪೇಯ್ಡ್ ಟಾಸ್ಕ್ ಹಗರಣಕ್ಕೆ ಸಂಬಂಧಿಸಿದೆ. 20 ಸಾವಿರದಿಂದ 35 ಲಕ್ಷದವರೆಗೆ ಜನರು ಹಣ ಕಳೆದುಕೊಂಡಿದ್ದಾರೆ.
ಸಂತ್ರಸ್ತರ ನಂಬಿಕೆ ಗಳಿಸುವ ಸಲುವಾಗಿ ವೃತ್ತಿಪರರಂತೆ ನಟಿಸುವ ವಂಚಕರು, ಭ್ರಮೆಯ ಜಾಲವೊಂದನ್ನು ಹೆಣೆಯುತ್ತಾರೆ. ಸಂತ್ರಸ್ತರಿಗೆ ನಂಬಿಕೆ ಬರುವಂತೆ ಮಾಡಲು ಮೊದಲಿಗೆ ಕೆಲವು ಹಣ ಪಾವತಿಗಳನ್ನು ಮಾಡುತ್ತಾರೆ. ಆದರೆ, ನಂತರ ಸಂತ್ರಸ್ತರು ಹೆಚ್ಚು ಗಳಿಸಲು ಹೆಚ್ಚು ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತಾರೆ. ಅಂತಿಮವಾಗಿ ಹೆಚ್ಚಿನ ಹಣ ಹೂಡಿಕೆ ಮಾಡಿದ ನಂತರ ಅವರು ಕಣ್ಮರೆಯಾಗುತ್ತಾರೆ.
ಪ್ರಿಪೇಯ್ಡ್ ಟಾಸ್ಕ್‌ಗಳೆಂದರೆ, YouTube ವಿಡಿಯೋಗಳನ್ನು ವೀಕ್ಷಿಸುವುದು, ಪರಿಶೀಲಿಸುವುದು ಮತ್ತು ಲೈಕ್ ಮಾಡುವುದನ್ನು ಒಳಗೊಂಡಿರುತ್ತದೆ.
ಈ ಪ್ರಕರಣಗಳ ತನಿಖೆ ನಡೆಸಿದ ಪೊಲೀಸರಿಗೆ, ಸಂತ್ರಸ್ತರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾದ ಖಾತೆಗಳು ದೇಶದಾದ್ಯಂತ ಹರಡಿರುವ ವಿವಿಧ ಬ್ಯಾಂಕ್ ಶಾಖೆಗಳಲ್ಲಿವೆ ಎಂಬುದು ತಿಳಿದುಬಂದಿದೆ. ಇಂತಹ ಪ್ರಿಪೇಯ್ಡ್ ಟಾಸ್ಕ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೈಬರ್ ಕ್ರೈಂ ಪೊಲೀಸರು ಜನರಿಗೆ ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


