ಬೆಂಗಳೂರು: 2 ಸಾವಿರ ಕೋಟಿ ರು. ವೆಚ್ಚದ ಎರಡು ಕಾರಿಡಾರ್ ಕಾಮಗಾರಿ 2024 ಜನವರಿಯೊಳಗೆ ಪೂರ್ಣ!
ಹೊಸಕೋಟೆ-ಬೂದಿಗೆರೆ ಮತ್ತು ನೆಲಮಂಗಲ-ಮಧುರೆ ಕಾರಿಡಾರಿನ ಮೊದಲ ಹಂತದ ಕಾಮಗಾರಿ 2024 ರ ಜನವರಿಯೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಬೆಂಗಳೂರು: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) 2,095 ಕೋಟಿ ರೂ ವೆಚ್ಚದಲ್ಲಿ ಬೆಂಗಳೂರು ಹೊರವಲಯದಲ್ಲಿ ಆರು ರಸ್ತೆ ಮತ್ತು ನಾಲ್ಕು ಸೇತುವೆಗಳ ರಸ್ತೆ ನವೀಕರಣ ಕಾಮಗಾರಿಯನ್ನು ನಿರ್ವಹಿಸುತ್ತಿದೆ. ಹೊಸಕೋಟೆ-ಬೂದಿಗೆರೆ ಮತ್ತು ನೆಲಮಂಗಲ-ಮಧುರೆ ಕಾರಿಡಾರಿನ ಮೊದಲ ಹಂತದ ಕಾಮಗಾರಿ 2024 ರ ಜನವರಿಯೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಹೊಸಕೋಟೆ-ಬೂದಿಗೆರೆ ಕಾರಿಡಾರ್‌ನ ಒಟ್ಟು ಉದ್ದ 20.11 ಕಿ.ಮೀ. ಇದೆ, ನೆಲಮಂಗಲ-ಮಧುರೆ ಕಾರಿಡಾರ್ ರೈಲ್ವೆ ಮೇಲ್ಸೇತುವೆ ಮತ್ತು ರೈಲ್ವೆ ಕೆಳಸೇತುವೆಯನ್ನು ಸಹ ಹೊಂದಿದ್ದು, ಒಟ್ಟು 15.25 ಕಿಮೀ ಉದ್ದವನ್ನು ಹಾದು ಹೋಗುತ್ತದೆ. ಹೊಸಕೋಟೆ-ಬೂದಿಗೆರೆ ಕ್ರಾಸ್ ರಸ್ತೆಯನ್ನು ಕೆಆರ್‌ಡಿಸಿಎಲ್ ಮೇಲ್ದರ್ಜೆಗೇರಿಸುತ್ತಿದೆ.
2019 ರಲ್ಲಿ ಕಾಮಗಾರಿ ಪ್ರಾರಂಭವಾಯಿತು, ಆದಾಗ್ಯೂ, ಭೂಸ್ವಾಧೀನ, ಮರ ಕತ್ತರಿಸುವಿಕೆಗೆ ಸಮಯ ತೆಗೆದುಕೊಂಡಿತು. ನಂತರ, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಲಾಕ್‌ಡೌನ್ ಮುಂತಾದ ಕಾರಣದಿಂದಾಗಿ ಕಾಮಗಾರಿ ಮುಂದುವರಿಯಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೊಸಕೋಟೆ-ಬೂದಿಗೆರೆ ಕ್ರಾಸ್ (ಎನ್‌ಎಚ್-4) ಬೂದಿಗೆರೆ-ಸಿಂಗಹಳ್ಳಿ ಮತ್ತು ಮೈಲನಹಳ್ಳಿ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಕಾಮಗಾರಿಯನ್ನು ಚುರುಕುಗೊಳಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಯೋಜನೆಗೆ ಅಂದಾಜು 137.51 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಅದೇ ರೀತಿ, ಬೆಂಗಳೂರು ಉತ್ತರದಲ್ಲಿ, ಚಿಕ್ಕಮಧುರೆ ಮೂಲಕ ಎನ್ ಎಚ್ 4 ನಲ್ಲಿ ನೆಲಮಂಗಲದಿಂದ ರಾಜ್ಯ ಹೆದ್ದಾರಿ-74 ರಲ್ಲಿ ಮಧುರೆಗೆ ಸಂಪರ್ಕಿಸಲು 15.25 ಕಿಮೀ ರಸ್ತೆಯನ್ನು 155.69 ಕೋಟಿ ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ರಸ್ತೆ ವಿಸ್ತರಣೆಯಿಂದಾಗಿ ವಾರಾಂತ್ಯದಲ್ಲಿ ಟ್ರಾಫಿಕ್ ಪ್ರಮಾಣವು ಹೆಚ್ಚಾಗುತ್ತಿದೆ, ಅನೇಕ ನಿವಾಸಿಗಳು ವಾರಾಂತ್ಯದಲ್ಲಿ ಮನೆಯಿಂದ ಹೊರಗೆ ಪ್ರಯಾಣಿಸುತ್ತಾರೆ ಹೀಗಾಗಿ ಸಂಚಾರ ದಟ್ಟಣೆ ಹೆಚ್ಚುತ್ತದೆಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. . ಈ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಮತ್ತು ಜನವರಿಯೊಳಗೆ ನಾವು ಈ ಎರಡು ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ" ಎಂದು ಅಧಿಕಾರಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


