13 ಬಜೆಟ್ ಗಳ ಸರದಾರ ಐಎಸ್ಎನ್ ಪ್ರಸಾದ್ ನಿವೃತ್ತಿ: ಮೂರೂ ಪಕ್ಷಗಳ ಸಿಎಂ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಐಎಎಸ್ ಅಧಿಕಾರಿ!
ಕಾಂಗ್ರೆಸ್, ಜೆಡಿಎಸ್, ಮತ್ತು ಬಿಜೆಪಿ ಸರ್ಕಾರಗಳ ಅವಧಿಯಲ್ಲಿ ಹಣಕಾಸು ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಐಎಸ್ ಎನ್ ಪ್ರಸಾದ್ ಶುಕ್ರವಾರ ನಿವೃತ್ತಿಯಾಗಿದ್ದಾರೆ.

ಬೆಂಗಳೂರು: ಕಾಂಗ್ರೆಸ್, ಜೆಡಿಎಸ್, ಮತ್ತು ಬಿಜೆಪಿ ಸರ್ಕಾರಗಳ ಅವಧಿಯಲ್ಲಿ ಹಣಕಾಸು ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಐಎಸ್ ಎನ್ ಪ್ರಸಾದ್ ಶುಕ್ರವಾರ ನಿವೃತ್ತಿಯಾಗಿದ್ದಾರೆ.
37 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಪ್ರಸಾದ್ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಕಾರ್ಯ ನಿರ್ವಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 7 ರಂದು ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಗೂ ಒಂದು ವಾರ ಮುಂಚೆ ಪ್ರಸಾದ್ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಮೂರು ಸರ್ಕಾರಗಳ ಅವಧಿಯಲ್ಲಿ 13 ಬಜೆಟ್ ಗಳಿಗಾಗಿ ಕೆಲಸ ಮಾಡಿದ್ದಾರೆ.
1986ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಪ್ರಸಾದ್ ಕೊನೆಯದಾಗಿ 14ನೇ ಬಜೆಟ್ ಗೂ ಕೆಲಸ ಮಾಡಿದ್ದಾರೆ. ಜುಲೈ 7 ರಂದು ಮಂಡನೆಯಾಗಲಿರುವ ಬಜೆಟ್ ಕಾಂಗ್ರೆಸ್ ಸರ್ಕಾರಕ್ಕೆ ಸವಾಲಾಗಲಿದೆ. ಐದು ಗ್ಯಾರಂಟಿಗಳನ್ನು ಪೂರೈಸಲು ಸರ್ಕಾರಕ್ಕೆ ಸುಮಾರು 50 ಸಾವಿರ ಕೋಟಿ ರು ಅಗತ್ಯವಿದೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿಯಲ್ಲಿ ಮಂಡಿಸಿದ 3.09 ಲಕ್ಷ ಕೋಟಿ ಬಜೆಟ್‌ಗಿಂತ ಶೇ.8ರಷ್ಟು ಹೆಚ್ಚಿದ್ದು, ಬಜೆಟ್ ಗಾತ್ರ 3.35 ಲಕ್ಷ ಕೋಟಿ ಎಂದು ಸಿದ್ದರಾಮಯ್ಯ ಇತ್ತೀಚೆಗೆ ಘೋಷಿಸಿದ್ದರು. ಮುಂದಿನ ಬಜೆಟ್ ನಲ್ಲಿಯೂ ಕೂಡ ಪ್ರಸಾದ್ ಅವರ ಕಾರ್ಯ ಇರುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಮತ್ತೊಂದು 'ಐಎಎಸ್ ದಂಪತಿ' ಕೈಯಲ್ಲಿ ಶಕ್ತಿ ಸೌಧ: ರಜನೀಶ್ ಗೋಯೆಲ್ ಪತ್ನಿ ಶಾಲಿನಿ ಸರ್ಕಾರದ ಮುಂದಿನ ಮುಖ್ಯಕಾರ್ಯದರ್ಶಿ?
ಪ್ರಸಾದ್ ಅವರು ಉತ್ತಮ ಅಧಿಕಾರಿಯ ಜೊತೆಗೆ ಒಳ್ಳೆಯ ಮನುಷ್ಯ, ನಮಗೆಲ್ಲರಿಗೂ ಅತ್ಯುತ್ತಮ ಮಾರ್ಗದರ್ಶಕರಾಗಿದ್ದಾರೆ. ಅವರು ತಮ್ಮ ಮಾರ್ಗದರ್ಶನವನ್ನು ಪಡೆಯುವ ಪ್ರತಿಯೊಬ್ಬ ಅಧಿಕಾರಿಯನ್ನು ತಲುಪುತ್ತಾರೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಕಂಡ ಅತ್ಯುತ್ತಮ ಅಧಿಕಾರಿಗಳಲ್ಲಿ ಒಬ್ಬರು. ಅವರು ರಾಜಕಾರಣಿಗಳು, ಇಲಾಖೆಗಳು ಮತ್ತು ಉದ್ಯಮವನ್ನು ಸೂಕ್ತವಾಗಿ ಸಮತೋಲನಗೊಳಿಸುತ್ತಾರೆ. ಅವರು ಉದ್ಯಮದ ಅಗತ್ಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಬರ, ಪ್ರವಾಹ ಮತ್ತು ಕೋವಿಡ್ ನಂತಹ ಅತ್ಯಂತ ಸವಾಲಿನ ಅವಧಿಗೆ ಆಕಸ್ಮಿಕ ಯೋಜನೆಗಳನ್ನು ರೂಪಿಸಿದ್ದಾರೆ.
ಅವರು ಸೇವೆ ಸಲ್ಲಿಸಿದ ಎಲ್ಲಾ ಮುಖ್ಯಮಂತ್ರಿಗಳ ವಿಶ್ವಾಸ ಗಳಿಸಿದ್ದರು.ಅವರು ಯಾವಾಗಲೂ ಸಿಎಂ ಆದ್ಯತೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಬಜೆಟ್ ಕರಡು ಮಾಡುವಾಗ ಖರ್ಚು, ಲಭ್ಯವಿರುವ ನಿಧಿ ಸಂಗ್ರಹ ಸಂಪನ್ಮೂಲಗಳು ಮತ್ತು ರಾಜ್ಯದ ಹಣಕಾಸಿನ ಆರೋಗ್ಯದ ನಡುವೆ ಉತ್ತಮ ಸಮತೋಲನವನ್ನು ಸಾಧಿಸಿದ್ದರು ಎಂದು ಕೈಗಾರಿಕೋದ್ಯಮಿಯೊಬ್ಬರು ತಿಳಿಸಿದ್ದಾರೆ. ಪ್ರಸಾದ್ ಅವರ ಹುದ್ದೆಗೆ 1991 ರ ಬ್ಯಾಚ್‌ನ ಮತ್ತೊಬ್ಬ ಚಾಣಾಕ್ಷ ಅಧಿಕಾರಿ ಎಲ್‌ಕೆ ಅತೀಕ್ ಅವರನ್ನು ನೇಮಿಸಲಾಗಿದೆ, ಅತೀಕ್ ಅವರು ಪಿಎಂಒ ಮತ್ತು ವಿಶ್ವಬ್ಯಾಂಕ್‌ನಲ್ಲಿ ಈ ಹಿಂದೆ ಕೆಲಸ ಮಾಡಿರುವ ಅನುಭವವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


