ವಿಶೇಷಚೇತನರಿಗೆ ಹಲವಾರು ಯೋಜನೆಗಳಿದ್ದರೂ ಅವುಗಳು ಸೂಕ್ತ ರೀತಿಯಲ್ಲಿ ಜಾರಿಯಾಗುತ್ತಿಲ್ಲ: ಎನ್‌ಎಫ್‌ಬಿ ಪ್ರಧಾನ ಕಾರ್ಯದರ್ಶಿ
ಅಂಗವಿಕಲರಿಗಾಗಿ ಹಲವಾರು ಯೋಜನೆಗಳಿದ್ದರೂ, ಅವುಗಳು ಸೂಕ್ತ ರೀತಿಯಲ್ಲಿ ಜಾರಿಯಾಗುತ್ತಿಲ್ಲ ಎಂದು ರಾಷ್ಟ್ರೀಯ ಅಂಧರ ಒಕ್ಕೂಟದ (ಎನ್‌ಎಫ್‌ಬಿ) ಪ್ರಧಾನ ಕಾರ್ಯದರ್ಶಿ ಗೌತಮ್ ಅಗರವಾಲ್ ಅವರು ಬುಧವಾರ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಅಂಗವಿಕಲರಿಗಾಗಿ ಹಲವಾರು ಯೋಜನೆಗಳಿದ್ದರೂ, ಅವುಗಳು ಸೂಕ್ತ ರೀತಿಯಲ್ಲಿ ಜಾರಿಯಾಗುತ್ತಿಲ್ಲ ಎಂದು ರಾಷ್ಟ್ರೀಯ ಅಂಧರ ಒಕ್ಕೂಟದ (ಎನ್‌ಎಫ್‌ಬಿ) ಪ್ರಧಾನ ಕಾರ್ಯದರ್ಶಿ ಗೌತಮ್ ಅಗರವಾಲ್ ಅವರು ಬುಧವಾರ ಬೇಸರ ವ್ಯಕ್ತಪಡಿಸಿದ್ದಾರೆ.
ಎಪಿಎಸ್ ಎಜುಕೇಶನ್ ಫೌಂಡೇಶನ್ ಬೆಂಗಳೂರಿನಲ್ಲಿ ಬುಧವಾರ ವಿಶ್ವ ಬ್ರೈಲ್ ದಿನಾಚರಣೆಯ ಆಯೋಜಿಸಿತ್ತು. ಲೂಯಿಸ್ ಬ್ರೈಲ್ (ಬ್ರೈಲ್ ಬರವಣಿಗೆ ವ್ಯವಸ್ಥೆಯನ್ನು ಕಂಡುಹಿಡಿದವರು) ಅವರ 214 ನೇ ಜನ್ಮ ವಾರ್ಷಿಕೋತ್ಸವವನ್ನು ಈ ದಿನ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗೌತಮ್ ಅವರು, ಬ್ರೈಲ್ ವಿನ್ಯಾಸದ ಪುಸ್ತಕಗಳಲ್ಲಿನ ಕೊರತೆ, ಅಂಗವಿಕಲರಿಗೆ ಸಮಾನ ಉದ್ಯೋಗಾವಕಾಶಗಳ ಕೊರತೆ ಹೆಚ್ಚಾಗಿದ್ದು, ಇದು ಅವರ ಬೆಳವಣಿಗೆಗೆ ಅಡ್ಡಿಯಾಗಿದೆ. ಹೀಗಾಗಿ ಸರ್ಕಾರ ಘೋಷಿಸಿರುವ ಎಲ್ಲ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕಾಲಮಿತಿ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಛಲ ಮತ್ತು ಧ್ಯೇಯವಿದ್ದರೆ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಬಹುದು ಎಂದು ತಿಳಿಸಿದರು.
ಪುದುಚೇರಿಯಲ್ಲಿ ಡೆಪ್ಯುಟಿ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ದೃಷ್ಟಿಹೀನ ವಿಶೇಷಚೇರನ ಐಎಎಸ್ ಅಧಿಕಾರಿ ಸತೇಂದರ್ ಸಿಂಗ್ ಅವರು ಮಾತನಾಡಿ, ವಿಕಲಚೇತನರ ಸಮಸ್ಯೆಗಳು ಸಮಾಜದಲ್ಲಿ ಚರ್ಚೆಯಾಗುವಂತೆ ನೋಡಿಕೊಳ್ಳುವುದು ಮುಖ್ಯ ಎಂದರು. ಸಮಾರಂಭದಲ್ಲಿ 15 ವಿಶೇಷಚೇತನರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


