ರಾಜ್ಯ

ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದ ಹಿರಿಯ ರಾಜಕಾರಣಿ ಟಿ. ಜಾನ್ ವಿಧಿವಶ​

ಹಿರಿಯ ರಾಜಕಾರಣಿ, ಕೊಡುಗೈ ದಾನಿ ಎಂದೇ ಖ್ಯಾತರಾಗಿದ್ದ ಟಿ. ಜಾನ್ ಬೆಂಗಳೂರಿನ ಸ್ವನಿವಾಸದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದ ಹಿರಿಯ ರಾಜಕಾರಣಿ ಟಿ. ಜಾನ್ ವಿಧಿವಶ​
ಟಿ.ಜಾನ್
Published On :

ಬೆಂಗಳೂರು: ಹಿರಿಯ ರಾಜಕಾರಣಿ, ಕೊಡುಗೈ ದಾನಿ ಎಂದೇ ಖ್ಯಾತರಾಗಿದ್ದ ಟಿ. ಜಾನ್ ಬೆಂಗಳೂರಿನ ಸ್ವನಿವಾಸದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಮಾಜಿ ಸಚಿವ ಟಿ.ಜಾನ್​ ಅವರು ಬೆಂಗಳೂರಿನಲ್ಲಿಂದ ಕೊನೆಯುಸಿರೆಳೆದರು. ಜಾನ್​ ಅವರಿಗೆ 92 ವರ್ಷ ವಯಸ್ಸಾಗಿತ್ತು. ಎಸ್‌ ಎಂ ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದರು. ಅಬಕಾರಿ ಉದ್ಯಮದ ಮೂಲಕ ಹೆಸರು ಮಾಡಿದ್ದರು.

ಮೂಲತಃ ಕೇರಳದವರಾದ ಟಿ.ಜಾನ್, ಕೊಡಗಿಗೆ ಬಂದು ಸಾಕಷ್ಟು ಕಷ್ಟಪಟ್ಟುರು. ಛಲದಿಂದ ಉದ್ಯಮದಲ್ಲಿ ತೊಡಗಿಕೊಂಡು ಹಂತ ಹಂತವಾಗಿ ಸಿರಿವಂತಿಕೆ ಪಡೆದುಕೊಂಡಿದ್ದರು. ಶಿಕ್ಷಣ ಸಂಸ್ಥೆಗಳು. ರೆಸಾರ್ಟ್ ಗಳನ್ನೂ ಕೂಡ ಜಾನ್ ಆರಂಭಿಸಿ ಯಶಸ್ಸು ಗಳಿಸಿದ್ದರು. ಕಷ್ಟ ಹೇಳಿಕೊಂಡು ಯಾರೇ ಬಂದರು ಸಹಾಯಹಸ್ತ ಚಾಚುತ್ತಿದ್ದ ಟಿ.ಜಾನ್ ಅವರು ಕೊಡುಗೈ ದಾನಿಯೆಂದೇ ಖ್ಯಾತರಾಗಿದ್ದರು. ನಾಳೆ ಶನಿವಾರ  ಬೆಂಗಳೂರಿನಲ್ಲಿ ಟಿ.ಜಾನ್ ಅವರ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.