ರಾಜ್ಯ

ಅಮೃತ್ ಭಾರತ್ ಯೋಜನೆಯಡಿ ರಾಜ್ಯದ 52 ರೈಲು ನಿಲ್ದಾಣ ಮೇಲ್ದರ್ಜೆಗೆ

ಅಮೃತ್ ಭಾರತ್ ಯೋಜನೆಯಡಿ ರಾಜ್ಯದ ಐವತ್ತೆರಡು ರೈಲು ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ, ದೀರ್ಘಾವಧಿ ದೃಷ್ಟಿಯೊಂದಿಗೆ ನಿರಂತರ ಅಭಿವೃದ್ಧಿ ನಿರೀಕ್ಷಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ನಿಲ್ದಾಣಗಳನ್ನು ನಗರ ಕೇಂದ್ರಗಳಾಗಿಯೂ ಅಭಿವೃದ್ಧಿಪಡಿಸಲಾಗುತ್ತಿದೆ.

ಅಮೃತ್ ಭಾರತ್ ಯೋಜನೆಯಡಿ ರಾಜ್ಯದ 52 ರೈಲು ನಿಲ್ದಾಣ ಮೇಲ್ದರ್ಜೆಗೆ
ಶಿವಮೊಗ್ಗ ರೈಲು ನಿಲ್ದಾಣ
Published On :

ಶಿವಮೊಗ್ಗ: ಅಮೃತ್ ಭಾರತ್ ಯೋಜನೆಯಡಿ ರಾಜ್ಯದ ಐವತ್ತೆರಡು ರೈಲು ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ,  ದೀರ್ಘಾವಧಿ ದೃಷ್ಟಿಯೊಂದಿಗೆ ನಿರಂತರ ಅಭಿವೃದ್ಧಿ ನಿರೀಕ್ಷಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ನಿಲ್ದಾಣಗಳನ್ನು ನಗರ ಕೇಂದ್ರಗಳಾಗಿಯೂ ಅಭಿವೃದ್ಧಿಪಡಿಸಲಾಗುತ್ತಿದೆ.

ಈ ನಿಲ್ದಾಣಗಳು ನೈರುತ್ಯ ರೈಲೈಯ ಬೆಂಗಳೂರು, ಮೈಸೂರು, ಹುಬ್ಬಳ್ಳಿ ವಿಭಾಗದಲ್ಲಿ ಬರುತ್ತವೆ. ಜನರು ರೈಲು ಹತ್ತಲು ಬರುವ ಸ್ಥಳವಾಗಿ ಮಾತ್ರವಲ್ಲದೇ, ನಗರ ಕೇಂದ್ರವಾಗಿಯೂ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಗುರಿ ಹೊಂದಲಾಗಿದೆ. 

ಗುರುತಿಸಲಾದ ರೈಲು ನಿಲ್ದಾಣಗಳಲ್ಲಿ ಕನಿಷ್ಠ ಅಗತ್ಯ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಆದರ್ಶ ನಿಲ್ದಾಣಗಳು ಎಂಬ ಯೋಜನೆ ಇದೆ. ನಿಲ್ದಾಣಗಳು ಕೇವಲ ರೈಲುಗಳನ್ನು ಹತ್ತಲು ಮತ್ತ ಇಳಿಯಲು ಇರುವ ಸ್ಥಳವಲ್ಲಾ, ಚಿಲ್ಲರೆ ಮಾರಾಟ ಮಳಿಗೆಗಳು, ಆಹಾರ ಮಳಿಗೆಗಳು, ಇನ್ಫೋಟೈನ್‌ಮೆಂಟ್ ಮತ್ತು ವಿರಾಮವನ್ನು ಉತ್ತೇಜಿಸುವ ನಗರ ಕೇಂದ್ರಗಳಾಗಿ ಹೊರಹೊಮ್ಮಬೇಕು ಎಂಬುದು ಪ್ರಧಾನಿಯವರ ದೂರದೃಷ್ಟಿಯಾಗಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗ್ಡೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. 

ತಡೆ ರಹಿತ ಬಹು-ಮಾದರಿ ಸಂಪರ್ಕ ಮತ್ತು ನಿಲ್ದಾಣಗಳ ಸುತ್ತಲಿನ ಪ್ರವೇಶ ರಸ್ತೆಗಳ ಬಲವರ್ಧನೆಯು , ನಗರ ಕೇಂದ್ರವಾಗಿ ಕಾರ್ಯನಿರ್ವಹಿಸಲು, ಸ್ಥಳೀಯ ಆರ್ಥಿಕತೆಯ ಚಾಲಕನಾಗಿ ಕಾರ್ಯನಿರ್ವಹಿಸಲು ಮತ್ತು ಸಾರಿಗೆ-ಆಧಾರಿತ ಅಭಿವೃದ್ಧಿಗೆ ಅನುಕೂಲವಾಗುವಂತೆ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ. ಗುರಿ ತಲುಪಲು ಕಟ್ಟಡ ಪುನರ್ ನಿರ್ಮಾಣ, ಅಧುನಿಕ ಸೌಲಭ್ಯ ಸೇರಿದಂತೆ ವ್ಯಾಪಕ ಕಾಮಗಾರಿಗಳ ನಿರೀಕ್ಷೆಯಿದೆ. 

ಸುಗಮ ಸಂಚಾರಕ್ಕಾಗಿ ನೂತನ ರಸ್ತೆಗಳು, ಪಾದಚಾರಿ ಮಾರ್ಗಗಳು, ಸೈಕಲ್ ಪಥಗಳು, ಸ್ಕೈವಾಕ್‌ಗಳು ಮತ್ತು ಸೇತುವೆಗಳು ಇತ್ಯಾದಿಗಳನ್ನು ವಿಸ್ತರಿಸುವುದು, ಬಲಪಡಿಸುವುದು ಅಥವಾ ರಚಿಸುವುದು ಈ ಕಾಮಗಾರಿಗಳಲ್ಲಿ ಸೇರಿದಂತೆ
ನಿಲ್ದಾಣದ ಒಳಗೆ, ಪ್ರಯಾಣಿಕರು ಕ್ಯೂನ ನಲ್ಲಿ ಆರಾಮದಾಯಕವಾಗಿ ಸಾಗುವಂತೆ ವ್ಯವಸ್ಥೆ ಮಾಡುವುದು, ಶುದ್ಧ ಕುಡಿಯುವ ನೀರು, ಶೌಚಾಲಯ ಮತ್ತಿತರ ಸೌಕರ್ಯ ಒದಗಿಸಲಾಗುತ್ತದೆ.

ಸಂಪೂರ್ಣ ನವೀಕರಿಸಿದ ನಿಲ್ದಾಣದ ಸಂಕೀರ್ಣ ದಿವ್ಯಾಂಗ-ಸ್ನೇಹಿಯಾಗಿರಬೇಕು. ಮೇಲ್ದರ್ಜೆಗೇರಿದ ರೈಲು ನಿಲ್ದಾಣಗಳು ಸುಸ್ಥಿರತೆಯ ಅಂಶಗಳನ್ನು ಹೊಂದಿರಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.