ಸಿಆರ್ ಪಿಎಫ್ ನೇಮಕಾತಿ: ಕನ್ನಡದಲ್ಲೂ ಪರೀಕ್ಷೆ ಬರೆಯಲು ಕೇಂದ್ರದ ಆದೇಶ, ಇದು ನಮ್ಮ ಹಕ್ಕು ಎಂದ ಜೆಡಿಎಸ್!
ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್) ಹುದ್ದೆಗಳ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ದೇಶದ ಪ್ರಮುಖ ಬರೆಯುವಂತೆ ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿದೆ. ಈ ಹಿಂದೆ ಈ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ನಲ್ಲಷ್ಟೇ ಬರೆಯಬೇಕೆಂಬ ಸರ್ಕಾರದ ಆದೇಶಕ್ಕೆ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಬೆಂಗಳೂರು: ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್) ಹುದ್ದೆಗಳ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ದೇಶದ ಪ್ರಮುಖ ಬರೆಯುವಂತೆ ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿದೆ. ಈ ಹಿಂದೆ ಈ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ನಲ್ಲಷ್ಟೇ ಬರೆಯಬೇಕೆಂಬ ಸರ್ಕಾರದ ಆದೇಶಕ್ಕೆ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಕನ್ನಡಿಗರ ಪರವಾದ ಒತ್ತಾಯಕ್ಕೆ ಮಣಿದು ಕೇಂದ್ರ ಗೃಹ ಸಚಿವಾಲಯ ಈ ಆದೇಶ ಹೊರಡಿಸಿದೆ. ಕನ್ನಡ ಸೇರಿದಂತೆ ದೇಶದ ಹಲವು ಭಾಷೆಗಳಿಗೆ ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವಿದ್ದು, ವಿಶ್ವದಾದ್ಯಂತ ಕೋಟ್ಯಂತರ ಜನರು ಮಾತನಾಡುತ್ತಾರೆ. ಬಿಜೆಪಿಯ ಈ ಆದೇಶ ಅಮಿತ್ ಶಾ ಹೇಳಿದಂತೆ ಐತಿಹಾಸಿಕವಾಗಿ ಬಿಟ್ಟುಕೊಟ್ಟ ಔದಾರ್ಯವಲ್ಲ. ಇದು ನಮ್ಮ ಕನ್ನಡಿಗರ ಹಕ್ಕು ಎಂದಿದೆ.
ನಮ್ಮ ಭಾಷೆಯಲ್ಲಿ ಪರೀಕ್ಷೆ ಬರೆಯುವುದೂ ನಮ್ಮ ಹಕ್ಕು. ಅದನ್ನು ಈವರೆಗೆ ನಮಗೆ ನಿರಾಕರಿಸಲಾಗಿತ್ತು. ಈ ತಪ್ಪನ್ನು ತೀವ್ರ ಪ್ರತಿಭಟನೆಯ ಕಾರಣಕ್ಕೆ ಸರಿಪಡಿಸಲಾಗಿದೆ. ಇದರ ಕ್ರೆಡಿಟ್ ಕನ್ನಡಿಗರು ಮತ್ತು ಭಾಷಾಪ್ರೇಮಿಗಳಿಗೆ ಹೋಗಬೇಕೆ ಹೊರತು, ರಾಜ್ಯ ಬಿಜೆಪಿಯಂತಹ ಹಿಂದಿ ಪ್ರೇಮಿಗಳಿಗೆ ಅಲ್ಲ ಎಂದು ಟೀಕಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


