ಧಾರವಾಡ: ಬೆಣ್ಣಿಹಳ್ಳ ಹೊಳೆಯಲ್ಲಿ ಮತ್ತೊಬ್ಬ ಯುವಕ ಮುಳುಗಿ ಸಾವು
ಬೆಣ್ಣಿಹಳ್ಳ ಹೊಳೆಯಲ್ಲಿ ಮತ್ತೊಬ್ಬ ಯುವಕ ಮುಳುಗಿ ಸಾವನ್ನಪ್ಪಿದ್ದು, ಇದು ಇತ್ತೀಚೆಗೆ ದಾಖಲಾದ 2ನೇ ಪ್ರಕರಣವಾಗಿದೆ.

ಧಾರವಾಡ: ಬೆಣ್ಣಿಹಳ್ಳ ಹೊಳೆಯಲ್ಲಿ ಮತ್ತೊಬ್ಬ ಯುವಕ ಮುಳುಗಿ ಸಾವನ್ನಪ್ಪಿದ್ದು, ಇದು ಇತ್ತೀಚೆಗೆ ದಾಖಲಾದ 2ನೇ ಪ್ರಕರಣವಾಗಿದೆ.
ಹೌದು.. ಹುಬ್ಬಳ್ಳಿ ಸಮೀಪದ ಇಂಗಳಹಳ್ಳಿ ಗ್ರಾಮದ ಹೊಳೆಗೆ ಇತ್ತೀಚೆಗೆ ಕೊಚ್ಚಿಕೊಂಡು ಹೋಗಿದ್ದ ನಾಪತ್ತೆಯಾದವರ ಪತ್ತೆಗೆ ಧಾರವಾಡ ಜಿಲ್ಲಾಡಳಿತ ಹರಸಾಹಸ ಪಡುತ್ತಿರುವಂತೆಯೇ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ್ ಗ್ರಾಮದಲ್ಲಿ ಶುಕ್ರವಾರ ಮತ್ತೊಬ್ಬ ಯುವಕ ಅದೇ ಹೊಳೆಗೆ ಬಿದ್ದು ಕೊಚ್ಚಿ ಹೋಗಿದ್ದಾನೆ.
ಶುಕ್ರವಾರ ನವಲಗುಂದ ತಾಲೂಕಿನ ತಡಹಾಳ್ ಗ್ರಾಮದ ಬೆಣ್ಣಿಹಳ್ಳ ಹೊಳೆಯಲ್ಲಿ ಸದಾನಂದ ಪೂಜಾರ್ (22 ವರ್ಷ) ಕೊಚ್ಚಿ ಹೋಗಿದ್ದಾರೆ. ಗ್ರಾಮದ ಬಳಿಯ ಸೇತುವೆಯ ಮೇಲೆ ಯುವಕರು ಹೋಗುತ್ತಿದ್ದಾಗ ಏಕಾಏಕಿ ಹೊಳೆ ನೀರಿನ ಮಟ್ಟ ಏರಿದೆ. ಈ ವೇಳೆ ನೀರಿಗೆ ಸಿಲುಕಿದ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ. ಕೂಡಲೇ ಅಲ್ಲಿದ್ದ ಯುವಕರು ಕೂಡಲೇ ಈಜುವ ಮೂಲಕ ಆತನನ್ನು ರಕ್ಷಿಸಲು ಹರಸಾಹಸ ಪಟ್ಟರಾದರೂ ಯುವಕ ಮುಳುಗಿ ಹೋಗಿದ್ದ ಎಂದು ನವಲಗುಂದ ಪೊಲೀಸರು ತಿಳಿಸಿದ್ದಾರೆ.
ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದವರು ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ.29ರಂದು ಬೆಣ್ಣೆಹಳ್ಳ ಹೊಳೆ ಪ್ರವಾಹದಲ್ಲಿ ಇಂಗಳಹಳ್ಳಿಯ ಆನಂದ್ ಹಿರೇಗೌಡರ್ (24 ವರ್ಷ) ಕೊಚ್ಚಿ ಹೋಗಿದ್ದು, ಕಳೆದ ಐದು ದಿನಗಳಿಂದ ಶೋಧ ಕಾರ್ಯ ನಡೆಯುತ್ತಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ದಳದವರಿಗೆ ಸುಳಿವು ಸಿಕ್ಕಿಲ್ಲ. ಗ್ರಾಮಸ್ಥರ ನೆರವಿನೊಂದಿಗೆ ಶನಿವಾರವೂ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


