ರಾಜ್ಯ

ಕೊಡಗಿನಲ್ಲಿ ರಸಗೊಬ್ಬರಗಳ ತೀವ್ರ ಕೊರತೆ: ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ

ಕೊಡಗಿನಾದ್ಯಂತ ಕೃಷಿ ಚಟುವಟಿಕೆಗಳ ಮೇಲೆ ಗೊಬ್ಬರದ ತೀವ್ರ ಕೊರತೆ ಗಂಭೀರ ಪರಿಣಾಮವನ್ನು ಬೀರಿದ್ದು, ಈ ನಡುವೆ ತಿಂಗಳಾಂತ್ಯದೊಳಗೆ ರೈತರಿಗೆ ಪರಿಹಾರ ದೊರೆಯಲಿದೆ ಎಂದು ಕೃಷಿ ಇಲಾಖೆ ಭರವಸೆ ನೀಡಿದೆ.

ಕೊಡಗಿನಲ್ಲಿ ರಸಗೊಬ್ಬರಗಳ ತೀವ್ರ ಕೊರತೆ: ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ
ಸಂಗ್ರಹ ಚಿತ್ರ
Published On :

ಮಡಿಕೇರಿ: ಕೊಡಗಿನಾದ್ಯಂತ ಕೃಷಿ ಚಟುವಟಿಕೆಗಳ ಮೇಲೆ ಗೊಬ್ಬರದ ತೀವ್ರ ಕೊರತೆ ಗಂಭೀರ ಪರಿಣಾಮವನ್ನು ಬೀರಿದ್ದು, ಈ ನಡುವೆ ತಿಂಗಳಾಂತ್ಯದೊಳಗೆ ರೈತರಿಗೆ ಪರಿಹಾರ ದೊರೆಯಲಿದೆ ಎಂದು ಕೃಷಿ ಇಲಾಖೆ ಭರವಸೆ ನೀಡಿದೆ.

ರಾಜ್ಯದಲ್ಲಿ ಮಳೆಗಾಲ ಆರಂಭವಾಗಿದ್ದು, ಜಿಲ್ಲೆ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿದೆ. ಆದರೆ ಕೊಡಗಿನಲ್ಲಿ ರಸಗೊಬ್ಬರ ಕೊರತೆಯಿಂದ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ಜಿಲ್ಲೆಯ ಅನೇಕ ಪ್ರಾಥಮಿಕ ಕೃಷಿ ಸಂಘಗಳು ಮತ್ತು ರಸಗೊಬ್ಬರ ವಿತರಕರು ವಿಫಲವಾಗಿದ್ದು, ಪರಿಸ್ಥಿತಿಯ ಸೂಕ್ಷ್ಮತೆಯನ್ನು ಕೃಷಿ ಇಲಾಖೆ ಅರಿತುಕೊಂಡು, ತಿಂಗಳಾಂತ್ಯಕ್ಕೆ ಪರಿಹಾರ ಸಿಗಲಿದೆ ಎಂದು ಭರವಸೆ ನೀಡಿದೆ.

ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ರಸಗೊಬ್ಬರ ಕೊರತೆಯುಂಟಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

“ಭಾರತದಲ್ಲಿ ರಸಗೊಬ್ಬರಗಳನ್ನು ಸಂಸ್ಕರಿಸುವಾಗ, ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ರಸಗೊಬ್ಬರಗಳ ಕೊರತೆಯು ಜಾಗತಿಕ ವಿದ್ಯಮಾನವಾಗಿದ್ದು, ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಸಮಗ್ರ ವಿಧಾನದ ಅಗತ್ಯವಿದೆ. ಕಾಫಿ ಬೆಳೆಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ಸರ್ಕಾರವು ಪ್ರಕ್ರಿಯೆಯನ್ನು ವೇಗಗೊಳಿಸಿ ಕೊರತೆಯನ್ನು ನೀಗಿಸಲು ಕಚ್ಚಾ ವಸ್ತುಗಳ ಆಮದು ಮಾಡಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಕರ್ನಾಟಕ ಬೆಳೆಗಾರರ ​​ಒಕ್ಕೂಟದ ಸಂಚಾಲಕ ವಿಶ್ವನಾಥ ಕೆ.ಕೆ ಅವರು ಹೇಳಿದ್ದಾರೆ.

ರಸಗೊಬ್ಬರ ಕೊರತೆ ಹಿನ್ನೆಲೆಯಲ್ಲಿ ಜಿಲ್ಲೆಯ ಸಣ್ಣ ಕಾಫಿ ಬೆಳೆಗಾರರು ಹಾಗೂ ರೈತರು ಕಂಗಾಲಾಗಿದ್ದಾರೆ. ''ಗೊಬ್ಬರ ಸಿಂಪಡಣೆ ಕೆಲಸ ಈ ತಿಂಗಳಲ್ಲೇ ಆರಂಭವಾಗಬೇಕಿತ್ತು. ಮಳೆ ಹೆಚ್ಚಾದ ಮೇಲೆ ಗೊಬ್ಬರ ಬಳಸುವಂತಿಲ್ಲ. ಗಿಡಗಳಿಗೆ ರಸಗೊಬ್ಬರ ಹಾಕಲು ಇದು ಸೂಕ್ತ ಸಮಯವಾದರೂ ದಾಸ್ತಾನು ಲಭ್ಯವಿಲ್ಲ ಎಂದು ಮಕ್ಕಂದೂರಿನ ಬೆಳೆಗಾರ ಸಂತೋಷ್ ಅವರು ಹೇಳಿದ್ದಾರೆ.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನಾ ಎಂ ಶೇಕ್ ಮಾತನಾಡಿ, ತಿಂಗಳಾಂತ್ಯದೊಳಗೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಜಿಲ್ಲೆಯಲ್ಲಿ ರೈಲು ರೇಖ್'ಗಳು ಲಭ್ಯವಿಲ್ಲದ ಕಾರಣ ರಸಗೊಬ್ಬರ ಪಡೆಯಲು ಹಾಸನ ಮತ್ತು ಮೈಸೂರು ಜಿಲ್ಲೆಗಳನ್ನು ಅವಲಂಬಿಸಬೇಕಾಗಿದೆ. ಜೂನ್ ಅಂತ್ಯದ ವೇಳೆಗೆ ಜಿಲ್ಲೆಗೆ 10,000 ಮೆಟ್ರಿಕ್ ಟನ್ ರಸಗೊಬ್ಬರಗಳನ್ನು ಪೂರೈಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.